ಶಿವಮೊಗ್ಗ: ಜಿಲ್ಲೆ ಜಿಲ್ಲೆ ಸಾಗರದ ಜಂಬಗಾರುನಲ್ಲಿ ಇರುವಂತ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯ ವಿದ್ಯಾರ್ಥಿ ನಿಲಯದಲ್ಲಿ ಸಾಗರ ಸರ್ಕಾರಿ ನೌಕರರ ಸಂಘದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜೊತೆಗೂಡಿ ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಪೋಕ್ಸೋ ಕೇಸ್ ಹೆಚ್ಚಾಗಿ ದಾಖಲಾಗಿರುವ ಹಿನ್ನಲೆಯಲ್ಲಿ, ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದಂತ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಣ್ಣಪ್ಪ ಡಿ.ಕೆ ಅವರು ಪೋಕ್ಸೋ ಪ್ರಕರಣದಲ್ಲಿ ವಿದ್ಯಾರ್ಥಿಗಳು ಹೆದರಿಕೊಳ್ಳುತ್ತಾರೆ. ಪೋಷಕರು ಮುಂದೆ ಬರೋದಿಲ್ಲ. ಆದರೇ ವಿಷಯ ವಿಕೋಪಕ್ಕೆ ಹೋದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದಕ್ಕೆ ಪ್ರಯತ್ನ ಮಾಡಲಾಗುತ್ತದೆ. ಆದರೇ ಯಾರು ಇಂತಹ ಪ್ರಕರಣದಲ್ಲಿ ಹೆದರಬಾರದು. ಬ್ಲಾಕ್ ಮೇಲ್ ಗೂ ಹೆದರ ಬಾರದು. ಕಾನೂನು ಕ್ರಮವಹಿಸುವಂತ ಕೆಲಸ ಮಾಡಬೇಕು ಎಂದರು.
ಹಿಂದಿನ ಕಾಲದಲ್ಲಿ ಮಕ್ಕಳು ಬೇಕು ಎನ್ನುವ ಕಾರಣ ಸೇರಿದಂತೆ ಇತರೆ ಕಾರಣಗಳಿಂದಾಗಿ ಬಾಲ್ಯ ವಿವಾಹಗಳು ಹೆಚ್ಚಾಗಿದ್ದವು. ಆದರೇ ಈಗ ಪರಿಸ್ಥಿತಿ ಬದಲಾಗಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಬಾಲ್ಯ ವಿವಾಹ ಕಾನೂನಿನ ಅಡಿಯಲ್ಲಿ ಅಪರಾಧ ಎಂಬ ತಿಳುವಳಿಕೆಯೂ ಇದೆ. ಈಗ ಬಾಲ್ಯ ವಿವಾಹ ಮಾಡಿದ್ರೇ ಶಿಕ್ಷೆ ಖಚಿತವಾಗಿದೆ. ಮಾನಸಿಕ, ದೈಹಿಕವಾಗಿ ಸಿದ್ಧವಿದ್ದಾಗ ಮಾತ್ರವೇ ಮದುವೆಯಾಗಬೇಕು. ಬಾಲ್ಯ ವಿವಾಹಕ್ಕೆ ಮುಂದಾದರೇ ವಿದ್ಯಾರ್ಥಿಗಳೇ ಮನೆಯರವನ್ನು ಮನ ಪರಿವರ್ತಿಸುವಂತ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಂಬಗಾರು ವ್ಯಾಪ್ತಿಯ ಮೂರು ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಒಟ್ಟಾಗಿಸಿ ಈ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿನಿಯರಿಂದ ಪೋಕ್ಸೋ, ಬಾಲ್ಯ ವಿವಾಹ ಜಾಗೃತಿ ಸಂಬಂಧ ನಾಟಕ ಪ್ರದರ್ಶನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕಲ್ಯಾಣಾಧಿಕಾರಿ ರಾಜೇಶ್ವರಿ ಅವರು ಅಧ್ಯಕ್ಷತೆ ವಹಿಸಿದ್ದರೇ, ಸಾಗರದ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷೆ ಅನಸೂಯ ತಳವಾರ್, ರಾಜ್ಯ ಪರಿಷತ್ ಸದಸ್ಯ ದೇವೇಂದ್ರಪ್ಪ, ಬಿಸಿಎಂ ಹಾಸ್ಟೆಲ್ ವಾರ್ಡನ್ ರಮೇಶ್, ಜಯಶೀಲ್, BCM ಅಧಿಕಾರಿ ರಾಜೇಶ್ವರಿ ಹಾಗೂ ಮೇಲ್ವಿಚಾರಕರು ನೌಕರರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
GOOD NEWS: ಪ್ರವಾಸೋದ್ಯಮ ಇಲಾಖೆಯಿಂದ ‘ಹೊಂಸ್ಟೇ ನಿರ್ಮಿಸಲು ಸಹಾಯಧನ’ಕ್ಕೆ ಅರ್ಜಿ ಆಹ್ವಾನ
ಆ.15ರಂದು ರಾಜ್ಯದ ಗ್ರಾಮ ಪಂಚಾಯ್ತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಸ್ವಾತಂತ್ರ್ಯ ದಿನ, ವಿಜ್ಞಾನ ಚಟುವಟಿಕೆ