ಶಿವಮೊಗ್ಗ: ಜಿಲ್ಲೆಯ ಆನವಟ್ಟಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಶೋಧನಾ ವಿಧಾನಗಳು ಮತ್ತು ಸಂಶೋಧನೆಯಲ್ಲಿ ನೂತನ ತಂತ್ರಗಳ ಕುರಿತಂತೆ ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಶೋಧನಾ ವಿಧಾನಗಳು ಮತ್ತು ಸಂಶೋಧನೆಯಲ್ಲಿ ನೂತನ ತಂತ್ರಗಳ ಕುರಿತಂತೆ ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದಂತ ಡಾ.ಶೇಖರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದಂತ ಅವರು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಂತಹ ಗ್ರಾಮೀಣ ಕಾಲೇಜಿನಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸುವಂತ ರಾಷ್ಟ್ರಮಟ್ಟದ ಕಾರ್ಯಾಗಾರ ಏರ್ಪಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಂತ ಅರುಣಾಚಲ ಪ್ರದೇಶದ ಹಿಮಾಚಲ್ ವಿವಿಯ ಉಪ ಕುಲಪತಿ ಡಾ.ವೇಣುಗೋಪಾಲ್ ರಾವ್ ಅವರು, ಪ್ರಸ್ತುತ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಅತ್ಯಗತ್ಯವಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ, ಸಂಶೋಧನೆಯಲ್ಲಿ ತೊಡಗೋರಿಗೆ ಸಂಶೋಧನೆಯ ಹಂತ, ಮಹತ್ವ, ಜವಾಬ್ದಾರಿ, ನೈತಿಕತೆ ತಿಳಿಸಿಕೊಡುವಂತ ಕೆಲಸ ಇಂತಹ ಕಾರ್ಯಾಗಾರಗಳಿಂದ ಆಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದಂತ ಆನವಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣಪತಿ ಎಂ.ಬಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ಆಸಕ್ತಿ ಯುವ ಪೀಳಿಗೆಯಲ್ಲಿ ಕಡಿಮೆಯಾಗುತ್ತಿದೆ. ಸಂಶೋಧನೆಯ ಬಗ್ಗೆ ಅರಿವು ಮೂಡಿಸುವ ಮೂಲಕ, ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಮುಖ ಮಾಡಲು ಈ ಕಾರ್ಯಾಗಾರ ಅನುಕೂಲಕಾರಿಯಾದಂತೆ ಆಗಿದೆ. ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದಂತ ಡಾ.ವೇಣುಗೋಪಾಲ್ ರಾವ್ ಅವರು ಆ ಎಲ್ಲಾ ಮಾಹಿತಿಯನ್ನು ಸರಳವಾಗಿ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಧುಕೇಶ್ವರ್ ಪಾಟೀಲ್, ಸದಸ್ಯರಾದ ಬಸವರಾಜಪ್ಪ, ಶ್ರೀಕಾಂತ್, ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಸಂಯೋಜಕರಾದ ಪ್ರೊ.ರಾಘವೇಂದ್ರ ನಾಯ್ಕ್.ಎಸ್.ಬಿ, ಸಹ ಸಂಯೋಜಕರಾದ ಭೀಮಪ್ಪ, ಸಂಶೋಧನಾ ಅಭಿರುದ್ದಿ ಕೋಶದ ಸಂಯೋಜಕರದ ಪ್ರೊ. ಇಂದುಮತಿ ಬಿ ಹಾಗೂ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಯಶೋಧ, ಪ್ರೊ ಶ್ರೀಕಾಂತ್ ಮಾಹಾದೇವ್ ಅಡಮನೆ, ಪ್ರೊ ಸಂತೋಷ್ ಕುಮಾರ್. ಬಿ. ಜಿ, ಪ್ರೊ ವಿನಯ್ ರಾಜ್, ಪ್ರೊ ಸಂತೋಷ್ ಕುಮಾರ್ ಕೆ ಹಂಗಂಕಟ್ಟೆ, ಹಿರಿಯ ಗ್ರಂಥಪಾಲಕಾರದ ಖಂಡೋಜಿ ಲಮಾಣಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಮಸ್ತಾನ್ ಬಿಜಲಿ ಖಾನ್, ಉಪನ್ಯಾಸಕರಾದ ಅಣ್ಣಪ್ಪ ಎಂ, ಪಿ.ಶಿವಕುಮಾರ್, ಮಂಜುನಾಥ, ಉಳಿಯಪ್ಪ, ಸುಂದ್ರಮ್ಮ, ಸುಚಿತ, ಬಸವರಾಜು, ನಿಂಗಪ್ಪ ಭಾಗಿಯಾಗಿದ್ದರು.
ಇವರಲ್ಲದೇ ಭೋಧಕೇತರ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜು / ವಿಶ್ವವಿದ್ಯಾಲಯ ದಿಂದ ಆಗಮಿಸಿದ್ದ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಹಾಜರಾಗರಿದ್ದರು. ಆನ್ಲೈನ್ ಮೂಲಕ ಭಾರತದ ವಿವಿಧ ರಾಜ್ಯದ ನೂರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
ಭಾರತದಲ್ಲಿ 99 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್ | WhatsApp
‘NHM ನೌಕರ’ರಿಗೆ ಶೇ.15ರಷ್ಟು ವೇತನ ಹೆಚ್ಚಳಕ್ಕೆ ಅನುದಾನ ಬಿಡುಗಡೆ ಮಾಡಿ: ಸಿಎಂಗೆ ಆಯನೂರು ಮಂಜುನಾಥ್ ಪತ್ರ
BREAKING: ಧರ್ಮಸ್ಥಳದ ಬಗೆಗಿನ ವಿವಾದಾತ್ಮಕ ವಿಡಿಯೋ ತೆಗೆದು ಹಾಕುವಂತೆ ‘ಮೊಹಮ್ಮದ್ ಸಮೀರ್’ಗೆ ಕೋರ್ಟ್ ಆದೇಶ.!