ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏಕವ್ಯಕ್ತಿ ರಂಗಪ್ರಯೋಗವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಸ್ಪಂದನ ಸಾಗರ ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ್ ಉಳವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸ್ಪಂದನ( ರಿ) ಸಾಗರ ಸಂಸ್ಥೆಯು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ದಿನಾಂಕ 21:11:24 ರ ಗುರುವಾರ ಬೆಳಿಗ್ಗೆ 12 ಗಂಟೆಗೆ ಸಾಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏಕವ್ಯಕ್ತಿ ರಂಗಪ್ರಯೋಗ ಹಮ್ಮಿಕೊಂಡಿದೆ ಎಂದಿದ್ದಾರೆ.
ಥಿಯೇಟರ್ -ರಿ- ಆಕ್ಟ್ ಪ್ರಸ್ತುತಪಡಿಸುವ, ರಂಗಾಯಣ ಪದವೀಧರ , ಕಿರುತೆರೆ ನಟ, ಉದಯ ಅಂಕರವಳ್ಳಿ ಅಭಿನಯಿಸುವ ಬ್ರೆಕ್ಟ್ ಕವಿತೆಗಳ ಅನಾವರಣವಿರುವ ಈ ರಂಗಪ್ರಯೋಗವನ್ನು ನೀನಾಸಂ ಪಧವೀಧರ ಹಾಗೂ ರಂಗಶಿಕ್ಷಕರಾಧ ಡಾ.ವೆಂಕಟೇಶ್ವರ ಇವರು ನಿರ್ದೇಶಿಸಿರುತ್ತಾರೆ ಎಂಬುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದಿರಾಗಾಂಧಿ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಕಾರದೊಂದಿಗೆ ಈ ಪ್ರಯೋಗ ನಡೆಯಲಿದೆ. ಆಸಕ್ತರು ಆಗಮಿಸಲು ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ನಿವೇಶನ ರಹಿತರಿಗೆ ‘ತಹಶೀಲ್ದಾರ್’ ಎಷ್ಟು ಜಾಗ ಮಂಜೂರು ಮಾಡಬಹುದು?
BREAKING : ಭಾರತವನ್ನು ‘ಹಿಂದೂ ರಾಷ್ಟ್ರ’ ವನ್ನಾಗಿ ಮಾಡಲು ನಾವು ಬಿಡಲ್ಲ : ಯತೀಂದ್ರ ಸಿದ್ದರಾಮಯ್ಯ ವಿವಾದ!