ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಡಾ.ನಾ ಡಿಸೋಜ ಅವರ ಸ್ಮರಣಾರ್ಥ ಜತೆಗಿರುವನು ಚಂದಿರ ಎಂಬ ನಾಟಕವನ್ನು ಆಯೋಜಿಸಲಾಗಿದೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಪಂದನ (ರಿ)ಯ ಎಂ.ವಿ ಪ್ರತಿಭಾ ಅವರು ಮಾತನಾಡಿದರು.
ಸಾಗರದ ಸ್ಪಂದನ (ರಿ)ಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಡಾ.ನಾ ಡಿಸೋಜ ಸ್ಮರಣಾರ್ಥ ಜತೆಗಿರುವನ ಚಂದಿರ ಎಂಬ ನಾಟಕವನ್ನು ಆಯೋಜಿಸಲಾಗಿದೆ ಎಂದರು.
ಈ ನಾಟಕದ ಪ್ರಸ್ತುತಿ ಮೈಸೂರಿನ ಸಂಕಲ್ಪ ಅವರದ್ದಾಗಿದೆ. ಜಯಂತ ಕಾಯ್ಕಿಣಿ ಅವರ ರೂಪಾಂತರ ಇದಾಗಿದೆ. ಹುಲುಗಪ್ಪ ಕಟ್ಟೀಮನಿ ವಿನ್ಯಾಸ, ನಿರ್ದೇಶಕ ಒಳಗೊಂಡಿದೆ ಎಂದು ತಿಳಿಸಿದರು.
ದಿನಾಂಕ 22-02-2025ರ ಶನಿವಾರ ಸಂಜೆ 6.30ಕ್ಕೆ ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಜತೆಗಿರುವನು ಚಂದಿರ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಮಲೆನಾಡಿನ ಮುಳುಗಡೆ ಸಂದರ್ಭದಲ್ಲಿ ನಡೆದ ಸ್ಥಳಾಂತರದ ಕತೆಯನ್ನು ನಾಟಕ ನೆನಪಿಸುತ್ತದೆ. ಕುಟುಂಬದ ಕತೆಯೊಂದರ ಮೂಲಕವೇ ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತ್ಯಂತರಗಳಿಗೆ ಕನ್ನಡಿ ಹಿಡಿಯುವುದು ಈ ನಾಟಕದ ವಿಶೇಷ ಎಂಬುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ