ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿರುವುದಾಗಿ ತಿಳಿದು ಬಂದಿದೆ. ಅದನ್ನು ಪತ್ತೆ ಹಚ್ಚಿ ಓಡಿಸೋ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉಳವಿ ಹೋಬಳಿ ವ್ಯಾಪ್ತಿಗೆ ಜೋಡಿ ಕಾಡಾನೆಗಳು ಆಗಮಿಸಿ ರೈತರ ಬೆಳೆ ನಾಶ ಪಡಿಸಿದ್ದವು. ಅವುಗಳನ್ನು ದೂಗೂರಿನಿಂದ ಕಾನಹಳ್ಳಿ, ಕಣ್ಣೂರು ಮಾರ್ಗವಾಗಿ ಚಿಕ್ಕಲವತ್ತಿ ಕಡೆಗೆ ಓಡಿಸಲಾಗಿದೆ. ಮುಂದೆ ಅಂಬಲಗೋಡು ಡ್ಯಾಂ ಕಡೆಗೂ ಓಡಿಸೋ ಕಾರ್ಯಾಚರಣೆ ಮುಂದುವರೆದಿದೆ.
ಮತ್ತೊಂದೆಡೆ ಸಾಗರ ತಾಲ್ಲೂಕಿನ ತ್ಯಾಗರ್ತಿ ಕಾಡಿನಲ್ಲಿ ಒಂಟಿ ಸಲಗವೊಂದು ಬಂದಿರುವುದಾಗಿ ಅರಣ್ಯ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಜೋಡಿ ಆನೆಗಳು ಇತ್ತಿಂದ ಅತ್ತ ತೆರಳಿದರೇ, ಅತ್ತಿಂದಲೇ ಇತ್ತ ಒಂಟಿ ಸಲಗ ಆಗಮಿಸಿರೋದಾಗಿ ಹೇಳಲಾಗುತ್ತಿದೆ.
ಅಂದಹಾಗೆ ಕರ್ಜಿಕೊಪ್ಪದಲ್ಲಿ ಹುಚ್ಚಪ್ಪ ಎಂಬುವರ ಗದ್ದೆಯಲ್ಲಿ ಒಂಟಿ ಸಲಗ ಹಾದು ಹೋಗಿರುವಂತ ಹೆಜ್ಜೆ ಗುರುತು ಪತ್ತೆಯಾಗಿವೆ. ಅಲ್ಲಿಂದ ಕಣ್ಣೂರು, ತ್ಯಾಗರ್ತಿ ಪ್ರದೇಶಗಳಲ್ಲಿ ಒಂಟಿ ಸಲಗ ಅಲೆದಾಡುತ್ತಿರೋದಾಗಿ ಹೇಳಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆಯೂ ಅರಣ್ಯ ಇಲಾಖೆಯಿಂದ ಮನವಿ ಮಾಡಲಾಗಿದೆ.
ಒಂಟಿ ಸಲಗ ಉಳವಿ ಹೋಬಳಿ ವ್ಯಾಪ್ತಿಗೆ ಆಗಮಿಸದಂತೆ ಪತ್ತೆ ಹಚ್ಚಿ ಮರಳಿ ಬಂದ ಕಡೆಗೆ ಓಡಿಸೋ ಕಾರ್ಯಾಚರಣೆಗೆ ಸೊರಬ ಹಾಗೂ ಸಾಗರ ತಾಲ್ಲೂಕಿನ ಅರಣ್ಯ ಇಲಾಖೆಯ ಮುಂದಾಗಿದೆ. ಒಂಟಿ ಸಲಗವನ್ನು ಪತ್ತೆ ಹಚ್ಚಿ, ಮರಳಿ ಬಂದ ಕಡೆಗೆ ಓಡಿಸೋ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ನಿರತರಾಗಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
BIG NEWS : ಹಾಡಹಗಲೇ ಕರ್ತವ್ಯ ನಿರತ ಮಹಿಳಾ ‘ASI’ ಮಾಂಗಲ್ಯ ಸರ ಕಳ್ಳತನ : ಬೆಚ್ಚಿ ಬಿದ್ದ ಶಿವಮೊಗ್ಗ ಜನತೆ!








