ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಹಿಂದಿನ ಕಣಬ್ಬಕ್ಕೂ ಈಗಿನ ಕಣಬ್ಬಕ್ಕೂ ತುಂಬಾ ವ್ಯತ್ಯಾಸವಿದೆ. ಆದರೂ ಈ ಸಂಸ್ಕೃತಿಯನ್ನು ಉಳಿಸುವ ಮತ್ತು ಮುಂದಿನ ತಲೆಮಾರಿನವರಿಗೆ ನೆನಪು ಬಿತ್ತುವ ಕೆಲಸವನ್ನು ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ನಾಡಿಗೇ ಮಾದರಿಯಾಗಿದೆ. ಅದೇ ಕಸಾಪದಿಂದ ಅಧ್ದೂರಿಯಾಗಿ ಸುಗ್ಗಿ ಸಂಭ್ರಮ ಅಂದರೆ ಕಣಬ್ಬ ಕಾರ್ಯಕ್ರಮವನ್ನು ನಡೆಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಗಣಪತಿ ಹಿರೇಶಕುನ ಇವರ ಜಮೀನಿನ ಕಣದಲ್ಲಿ ನಡೆದ ಸುಗ್ಗಿ ಸಂಭ್ರಮ (ಕಣಬ್ಬ) ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದಂತ ಚಂದ್ರಶೇಖರ ಸಿರಿವಂತೆ ಅವರು, ಮಾದ್ಯಮಗಳು ಇಂಥಾ ಕಾಯ೯ಕ್ರಮಗಳಿಗೆ ಒತ್ತು ನೀಡಬೇಕು. ಎಲ್ಲಾ ಕಡೆಗೂ ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ಇಂಥಾ ಒಳ್ಳೆಯ ಬೆಳವಣಿಗೆಗೆ ಕಾರಣರಾದ ಅಧ್ಯಕ್ಷರಾದ ಷಣ್ಮುಖಾಚಾರ್ ಮತ್ತು ಅವರ ತಂಡದವರನ್ನು ಅಭಿನಂದಿಸುತ್ತೇನೆ ಎಂದರು.
ದೇಶೀ ಸಂಸ್ಕೃತಿಯನ್ನು ಯಾರೂ ಮರಯಬಾರದು. ಈ ನಿಟ್ಟಿನಲ್ಲಿ ಪರಿಷತ್ತಿನ ಉದ್ದೇಶ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರಲ್ಲದೇ, ಪರಿಷತ್ತಿನ ಇಂಥಾ ನೂತನ ಕಾಯ೯ಕ್ರಮಗಳು ಹೀಗೇ ಎಲ್ಲರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದಂತ ಚಂದ್ರಶೇಖರ ಸಿರಿವಂತೆ ಅವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುರಸಭೆಯ ಮಾಜಿ ಉಪಾಧ್ಯಕ್ಷರು, ಹಾಲಿ ಸದಸ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮಧುರಾಯ್ ಜೀ ಶೇಟ್ ಅವರು ಮಾತನಾಡಿ ಆ ದಿನಗಳಲ್ಲಿ ಕಣದಲ್ಲಿ ಒಕ್ಕಲು ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಹಿರಿಯರು ಭತ್ತದ ರಾಶಿ ಕಟ್ಟುವುದು, ಪೂಜಾ ಕಾರ್ಯಗಳು ಸಂಸ್ಕೃತಿಯನ್ನು ಉಳಿಸುವ ಬೆಳೆಸುವಲ್ಲಿ ಸಹಕಾರಿಯಾಗಿದ್ದು, ಇಂದಿನ ದಿನಗಳಲ್ಲಿ ಎಲ್ಲವೂ ಮರೆಯಾಗಿರುವುದು ವಿಷಾದನೀಯ. ಆದರೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಂಥಾದ್ದೊಂದು ಮಾದರಿಯಾದ ಕಾಯ೯ಕ್ರಮವನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರು, ಹಿರಿಯರಾದ ಪಾಣಿ ರಾಜಪ್ಪ ಅವರು ಮಾತನಾಡಿ, ನಿರುಗು ಹಾಕಿ, ಮೇಟಿಗೆ ಧವಣೆ ಹಾಕಿ, ದನಗಳನ್ನು ಕಟ್ಟಿ ಹುಲ್ಲನ್ನು ತುಳಿಸಿ ಬೆಳಗಾಗುವುದರೊಳಗೇ ಹುಲ್ಲು ಪೆಂಡಿ ಕಟ್ಟಿ ಚಾರಿ ಹಾಕುವುದು, ಕಣದಲ್ಲಿ ಭತ್ತದ ರಾಶಿ ಕಟ್ಟಿ, ಏಣಿ , ಸೂರ್ಯ, ಚಂದ್ರ, ಕುಡಗೋಲು ಚಿತ್ರಗಳನ್ನು ಕರಿಬಂಟನ ಹಾಕಿ, ಮುತ್ತುಗದ ಹೂಗಳ ಮೂಲಕ ಶೃಂಗಾರ ಮಾಡಿ, ಕಣದಲ್ಲೇ ಎಲ್ಲರೂ ಒಟ್ಟಾಗಿ ಊಟ ಮಾಡುವುದೇ ದೊಡ್ಡ ಸಂಭ್ರಮ. ಅದೆಲ್ಲವೂ ಮರೆಯಾದ ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಈ ಕಣಬ್ಬ ವು ಆ ದಿನಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ಮಾಡಿದೆ. ಇದು ನಿಜಕ್ಕೂ ತುಂಬಾ ಖುಷಿಯಾಯ್ತು ಎಂಬುದಾಗಿ ಹೇಳಿದರು.
ಸೊರಬ ಪಟ್ಟಣ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷೆ ಗೌರಮ್ಮ ಭಂಡಾರಿ ಅವರು ಮಾತನಾಡಿ, ನಮ್ಮ ನೆಲದ ಸಂಸ್ಕೃತಿಯನ್ನು ಕಣಬ್ಬದ ಮೂಲಕ ಸಂಭ್ರಮಿಸಲು ಅವಕಾಶವನ್ನು ನೀಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದ ತಿಳಿಸಿದರು.
ಕುಂದಾಪುರ ಶೈಲಿಯ ಕವಯಿತ್ರಿ ಶೈಲಾ ಹೆಬ್ಬಾರ್ ಮಾತನಾಡಿ, ಕುಂದಾಪುರ ಭಾಗದಲ್ಲಿ ಆ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಸೊಗಡಿನ ಸುಗ್ಗಿ ಹಬ್ಬವನ್ನು ಹೆಚ್ಚು ಕಡಿಮೆ ಈ ಕಣಬ್ಬ ಇನ್ನಷ್ಟು ಸಂಭ್ರಮಿಸುವಂತೆ ಮಾಡಿದೆ. ಇಂಥಾ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಖುಷಿ ಹಾಗೂ ಹೆಮ್ಮೆಯಾಗಿದೆ ಎಂದರು.
ಕಣದ ಮಾಲೀಕರಾದ ಗಣಪತಿ ಹಿರೇಶಕುನ ಇವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸುಗ್ಗಿ ಸಂಭ್ರಮ ( ಕಣಬ್ಬ )ದ ವೇದಿಕೆ ಅಧ್ಯಕ್ಷತೆಯನ್ನು ವಹಿಸಿದ್ದ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಷಣ್ಮುಖಾಚಾರ್ ಎನ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, ಮರೆಯಾಗುತ್ತಿರುವ ಕೃಷಿ ಸಂಸ್ಕೃತಿಯ ಇಂಥಾ ಮಹತ್ವದ ಆಚರಣೆಗಳನ್ನು ನಮ್ಮ ನಮ್ಮ ಮಕ್ಕಳಿಗೆ ಪರಿಚಯಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಪರಿಷತ್ತಿನ ವತಿಯಿಂದ ವಿನೂತನವಾದ ಈ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳಾವಕಾಶ ಮಾಡಿಕೊಟ್ಟಿರುವ ಗಣಪತಿ ಹಿರೇಶಕುನ ಸಹೋದರರಿಗೆ ಹಾಗೂ ಈದಿನದ ಕಣಬ್ಬದ ಯಶಸ್ಸಿಗೆ ಕಾರಣರಾದ ಸವ೯ರಿಗೂ ಧನ್ಯವಾದ ಹೇಳಿದರು.
ಇದೇ ತಿಂಗಳ 6 ಮತ್ತು 7ನೇ ತಾರೀಖಿನ ಎರಡು ದಿನಗಳ ಕಾಲ ನಡೆಯುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಕಾ೯ರಿ ನೌಕರರು, ಶಿಕ್ಷಕರಿಗೆ ( ಓಓಡಿ) ಅನ್ಯ ಕಾರ್ಯ ನಿಮಿತ್ತ ಸೌಲಭ್ಯವನ್ನು ನೀಡಲಾಗುತ್ತದೆ. ಹೀಗಾಗಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡದ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಕರೆನೀಡಿದರು.
ಈ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಗಾಯಕರಾದ ಸೋಮಶೇಖರ್ ಹಾಗೂ ಅರುಣ್ ಕುಮಾರ್ ಎನ್ ಎಸ್ ಶಿಕ್ಷಕರು ಜನಪದ ಗೀತೆಗಳನ್ನು ಹಾಡಿದರು. ವೀಣಾ ಶ್ರೀಧರ್, ಲಲಿತಾ ಶಿಕ್ಷಕರು, ಸರಸ್ವತಿ ನಾವುಡ ತಂಡದವರು ಸುಗ್ಗಿ ಹಾಡನ್ನು ಹಾಡಿದರು.
ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆ, ಕಾನಕೇರಿ ಮಕ್ಕಳ ಅಮೋಘ ನೃತ್ಯವು ಎಲ್ಲರ ಮನಸೂರೆಗೊಂಡಿತು. ಕವಯಿತ್ರಿ, ಶಿಕ್ಷಕರಾದ ಸವಿತಾ ಎಂ ಕವನ ವಾಚಿಸಿದರು.
ಹಸೆ ಚಿತ್ತಾರ ಕಲಾವಿದ, ಪರಿಷತ್ತಿನ ಪದಾಧಿಕಾರಿ ವಿಶ್ವನಾಥ ಹೆಚ್ಚೆ ಅವರು ಜಾನಪದ ಗೀತೆ ಹಾಡಿದರು. ವೀಣಾ ಶ್ರೀಧರ್, ಸರಸ್ವತಿ ನಾವುಡ, ಶೈಲಾ ಹೆಬ್ಬಾರ್, ಪ್ರಶಾಂತ ಹೆಚ್ ಎಂ ಸೇರಿದಂತೆ ಹಲವರು ಸೇರಿ ಕರಿಬಂಟನ ಚಿತ್ತಾರವುಳ್ಳ ಭತ್ತದ ರಾಶಿಯ ಸುತ್ತಲೂ ಹಾಕಿದ ಬಣ್ಣ ಬಣ್ಣದ ರಂಗೋಲಿ ಆಗಷ೯ಣೀಯವಾಗಿತ್ತು.
ಡಾ.ಬಸವರಾಜ ಶಿರಾಳಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಸ್ ಆರ್ ಕುಮಾರಸ್ವಾಮಿ, ಗೃಹರಕ್ಷಕ ದಳದ ಘಟಕಾಧಿಕಾರಿಗಳು, ಸಂಗ್ಯಾ -ಬಾಳ್ಯಾ ಭಾಗವತರು, ವಕೀಲರು, ಕಲಾವಿದರಾದ ಪ್ರಶಾಂತ್ ಹೆಚ್ ಎಂ, ಗಾಯಕರು, ಪತ್ರಕರ್ತರಾದ ರವಿ ಕಲ್ಲಂಬಿ, ಪತ್ರಕರ್ತರಾದ ತೋಟಪ್ಪ, ಟಿ ವಿ-12 ನ ವಿಜಯ್ ಗೌಳಿ, ಪತ್ರಕರ್ತರಾದ ಮಧುರಾಮ್, ವಕೀಲರಾದ ದಿನಕರ್ ಭಟ್ ಭಾವೆ, ಉದ್ಯಮಿಗಳು, ಸಮಾಜ ಸೇವಕರಾದ ನಾಗರಾಜ ಗುತ್ತಿ, ಕಲಾವಿದರು, ಪತ್ರಕತ೯ರ ಸಂಘದ ಅಧ್ಯಕ್ಷರಾದ ಬಣ್ಣದ ಬಾಬಣ್ಣ ( ನಾಗರಾಜ್ ಜೈನ್ ) ತಿಂಗಳ ಹುಣ್ಣಿಮೆ ಸಂಚಾಲಕರಾದ ಸುಬ್ರಹ್ಮಣ್ಯ ಗುಡಿಗಾರ್, ಗಾಯಕರಾದ ಲಕ್ಷ್ಮೀ ಮುರುಳೀಧರ್, ವಿಜಯಕುಮಾರ್ ಬಾಂಬೋರೆ, ಈರಪ್ಪ ಹೆಚ್ ಇ, ಕವಯಿತ್ರಿ ರೇಣುಕಮ್ಮ ಗೌಳಿ, ಪರಿಷತ್ ಪದಾಧಿಕಾರಗಳಾದ ರಾಜೇಂದ್ರ ಜೈನ್ ( ಜೈನ್ ಜೆರಾಕ್ಸ್), ಮಾಲತೇಶ್ ಶಿಕ್ಷಕರು, ವಿನೋದ್ ವಾಲ್ಮೀಕಿ, ಅಫ್ಜಲ್ ಹನೀಫ್, ಸುಮಾ ಪ್ರಶಾಂತ್ ಹೆಚ್ ಎಂ, ಆಗಸ್ಟಿನ್, ಹೇಮಾವತಿ ಷಣ್ಮುಖಾಚಾರ್ ಎನ್, ನೇತ್ರಾವತಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕು ಮೋಹಿತ್ ಷಣ್ಮುಖಾಚಾರ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಈ ಕಣಬ್ಬದ ನಿರ್ದೇಶಕರು, ಪರಿಷತ್ತಿನ ಕೋಶಾಧಿಕಾರಿ ಮೋಹನ್ ಸುರಭಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಶಿಕ್ಷಕರು ಪ್ರಾಥ೯ನೆ ಮಾಡಿದರೆ, ತಾ ಕಸಾಪ ಪದಾಧಿಕಾರಿ ಮಹೇಶ್ ಖಾರ್ವಿ ಸವ೯ರನ್ನೂ ಸ್ವಾಗತಿಸಿದರು. ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ರಮೇಶ್ ಎನ್ ಮಂಚಿ ಅವರು ಸವ೯ರಿಗೂ ವಂದನೆ ಸಲ್ಲಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ರೇವಣಪ್ಪ ಬಿದರಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು.
‘NAA ರೇಟಿಂಗ್’ಗಾಗಿ ಲಂಚಕ್ಕೆ ಬೇಡಿಕೆ: CBIನಿಂದ ’10 ಮಂದಿ’ ಅರೆಸ್ಟ್ | NAAC rating bribery case
SHOCKING : ಈ `ಎಣ್ಣೆ’ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಹೃದಯಾಘಾತದ ಅಪಾಯ ಹೆಚ್ಚಳ.!
ನಿಮ್ಮ ಸಂಬಳದ ಮೇಲೆ ‘ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ’ಗಳು ಹೇಗೆ ಪರಿಣಾಮ ಬೀರುತ್ತೆ? ಇಲ್ಲಿದೆ ಮಾಹಿತಿ