ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ನ್ಯಾಯಬೆಲೆ ಅಂಗಡಿಗಳಿದ್ದಾರೆ. ಈ ಎರಡು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಬರೋಬ್ಬರಿ 76 ರೇಷನ್ ಕಾರ್ಡ್ ರದ್ದುಗೊಳಿಸಿ ಆಹಾರ ಇಲಾಖೆ ಆದೇಶಿಸಿದೆ. ಹಾಗಾದ್ರೇ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದುಗೊಂಡಿದ್ಯಾ ಅನ್ನೋ ಬಗ್ಗೆ ಮುಂದೆ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಿ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ನ್ಯಾಯಬೆಲೆ ಅಂಗಡಿಗಳಿದ್ದಾವೆ. ನ್ಯಾಯಬೆಲೆ ಅಂಗಡಿ 1 ಮತ್ತು 2ರ ವ್ಯಾಪ್ತಿಯಲ್ಲಿದ್ದಂತ ಆದಾಯ ತೆರಿಗೆ ಪಾವತಿಸುತ್ತಿರುವಂತ 76 ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ.
ಉಳವಿಯ ನ್ಯಾಯಬೆಲೆ ಅಂಗಡಿ 1 ವ್ಯಾಪ್ತಿಯಲ್ಲಿ 52 ರೇಷನ್ ಕಾರ್ಡ್ ರದ್ದುಪಡಿಸಿದ್ದರೇ, ನ್ಯಾಯಬೆಲೆ ಅಂಗಡಿ 2ರ ವ್ಯಾಪ್ತಿಯಲ್ಲಿ 24 ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ರೇಷನ್ ಕಾರ್ಡ್ ಕುಟುಂಬಸ್ಥರು ಆದಾಯ ತೆರಿಗೆ ಪಾವತಿ ಮಾಡುತ್ತಿರುವುದೇ ಕಾರಣವಾಗಿದೆ ಎಂಬುದಾಗಿ ಆಹಾರ ಇಲಾಖೆ ತಿಳಿಸಿದೆ.
ಹೀಗಿದೆ ಉಳವಿಯ ನ್ಯಾಯಬೆಲೆ ಅಂಗಡಿ 1ರ ವ್ಯಾಪ್ತಿಯಲ್ಲಿ ರದ್ದುಪಡಿಸಲಾಗಿರುವಂತ 52 ಕಾರ್ಡ್ ಪಟ್ಟಿ
ಹೀಗಿದೆ ಉಳವಿಯ ನ್ಯಾಯಬೆಲೆ ಅಂಗಡಿ 2ರ ವ್ಯಾಪ್ತಿಯಲ್ಲಿ ರದ್ದುಪಡಿಸಲಾದ ರೇಷನ್ ಕಾರ್ಡ್ ಪಟ್ಟಿ
ಅಂದಹಾಗೇ ಆಹಾರ ಇಲಾಖೆಯ ವಿಶೇಷ ಕಾರ್ಯಾಚರಣೆ ವೇಳೆ ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷ ಮಂದಿ ಅನರ್ಹರು ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಲಾಗಿತ್ತು. ಈ ಎಲ್ಲಾ ಕಾರ್ಡ್ ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರದ್ದುಪಡಿಸಿದೆ. ಇವರಿಗೆ ಪಡಿತರ ವಿತರಣೆ ಮಾಡದಂತೆಯೂ ನ್ಯಾಯಬೆಲೆ ಅಂಗಡಿಗಳಿಗೆ ಪಟ್ಟಿ ನೀಡಲಾಗಿದೆ. ರೇಷನ್ ಪಡೆಯುವಂತೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿದಾಗಲೇ ಕಾರ್ಡ್ ರದ್ದುಗೊಂಡಿರುವ ವಿಚಾರ ರಾಜ್ಯದ ಅನೇಕ ಅನರ್ಹ ಪಡಿತರ ಚೀಟಿದಾರರ ಕುಟುಂಬಗಳಿಗೆ ತಿಳಿದು ಬಂದು ಶಾಕ್ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಿವಮೊಗ್ಗ: ನಾಳೆ ಸೊರಬದ ಉಳವಿಯಲ್ಲಿ ‘ಈದ್ ಮಿಲಾದ್’ ಪ್ರಯುಕ್ತ ‘ಬೃಹತ್ ರಕ್ತದಾನ ಶಿಬಿರ’
ರಾಜ್ಯದ ಜನತೆಗೆ ಗುಡ್ ನ್ಯೂಸ್: 10 ತಾಲ್ಲೂಕಲ್ಲಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಲು ಸರ್ಕಾರ ಆದೇಶ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ