ಶಿವಮೊಗ್ಗ: ನಗರದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಜಿಲ್ಲೆಯಲ್ಲಿ ಮತದಾರರು ಮತವನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ.45.19ರಷ್ಟು ಮತದಾನವಾಗಿದೆ.
ಈ ಬಗ್ಗೆ ಜಿಲ್ಲಾ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಕೆಲವೆಡೆ ಅಷ್ಟೇ ತಾಂತ್ರಿಕ ಸಮಸ್ಯಯಿಂದ ಇವಿಎಂ ಸ್ಥಗಿತಗೊಂಡಿತ್ತು. ಅದನ್ನು ಬದಲಾಯಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದೆ.
ಮಧ್ಯಾಹ್ನ 1:00 ಗಂಟೆ ವರೆಗೆ ಚಲಾವಣೆಯಾದ ಮತದಾನದ ಶೇಕಡವಾರು ವಿವರ
ಶಿವಮೊಗ್ಗ ಲೋಕಸಭಾ ಕ್ಷೇತ್ರ: 45.19%
ಒಟ್ಟು ಮತಗಳು: 1752885
ಚಲಾವಣೆ ಮತಗಳು:788545
ಭಾರತೀಯ ಸೇನೆಯಿಂದ ಭರ್ಜರಿ ಭೇಟೆ : ಜಮ್ಮುಕಾಶ್ಮೀರದ ಕುಲ್ಗಾಮದಲ್ಲಿ ಮೂವರು ಉಗ್ರರು ಫಿನಿಶ್!
‘ಪೊಲೀಸರು ಪೆನ್ ಡ್ರೈವ್ ವಿತರಿಸಿದ್ರೂ, ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ’ : ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ