ಶಿವಮೊಗ್ಗ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜಿಲ್ಲೆಯಿಂದ 40 ಶಿಕ್ಷಕ/ಶಿಕ್ಷಕಿಯರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ -07, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07, ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07 ಹಾಗೂ ವಿಶೇಷ ಶಿಕ್ಷಕ ಪ್ರಶಿಸ್ತಿಗೆ -19 ಶಿಕ್ಷಕರುಗಳು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹ ಶಿಕ್ಷಕರುಗಳಾದ ಶೀಲಾ ಪಿ.,- ಸಾಗರ, ಮಂಜಪ್ಪ ಡಿ.,-ಹೊಸನಗರ, ಜ್ಯೋತಿ ಹೆಚ್.ಎಂ., -ತೀರ್ಥಹಳ್ಳಿ, ಶಾರದಾ ಎಸ್.,-ಭದ್ರಾವತಿ, ಗಣೇಶ್ ನಾಯ್ಕ ಎನ್., -ಸೊರಬ, ಸುರೇಶ್ ಕೆ.,-ಶಿಕಾರಿಪುರ, ತಸ್ನಿಂ ಕೌಸರ್-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಡ್ತಿ ಮುಖ್ಯ ಶಿಕ್ಷಕರಗಳಾಗಿ ಸುಮ ಹೆಚ್.ಎ,-ತೀರ್ಥಹಳ್ಳಿ, ರಾಧಾಬಾಯಿ-ಶಿವಮೊಗ್ಗ, ಕೃಷ್ಣಪ್ಪ ಹೆಚ್.ವಿ.-ಸೊರಬ ಹಾಗೂ ಸಹ ಶಿಕ್ಷಕರುಗಳಾದ ಬೂದ್ಯಪ್ಪ ಡಿ.,-ಸಾಗರ, ಶಿಲ್ಪ ಜೆ., -ಹೊಸನಗರ, ಭಾರತಿ ಎಸ್.,-ಭದ್ರಾವತಿ, ಮಹೇಶಪ್ಪ ಬಂಡಿಬೈರನಹಳ್ಳಿ -ಶಿಕಾರಿಪುರ ಇವರುಗಳು ಆಯ್ಕೆಯಾಗಿದ್ದಾರೆ.
ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯ ಶಿಕ್ಷಕರುಗಳಾದ ಗಜೇಂದ್ರ ಎಸ್.ಹೆಚ್., -ಸಾಗರ, ರಾಮಚಂದ್ರ ಎಸ್.ಜೆ. -ಸೊರಬ ಹಾಗೂ ಸಹ ಶಿಕ್ಷಕರುಗಳಾದ ಚಂದ್ರು ಸಿ.,-ಹೊಸನಗರ, ಕೃಷ್ಣಪ್ಪ ಡಿ.,-ತೀರ್ಥಹಳ್ಳಿ, ಛಾಯಾ ಶ್ಯಾಮಸುಂದರ- ಭದ್ರಾವತಿ, ನಾಗರಾಜಪ್ಪ ಪಿ.-ಶಿಕಾರಿಪುರ, ಹಸನ್ ಸಾಬ್ ಕೆ.ಹೆಚ್.-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.
ವಿಶೇಷ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಸರ್ಕಾರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರುಗಳಾದ ಶರಣ್ಣಪ್ಪ ಎ,-ಸಾಗರ, ಆಶಾ ಬಿ.ಕೆ,-ತೀರ್ಥಹಳ್ಳಿ, ಮುಖ್ಯ ಶಿಕ್ಷಕರಾದ ಭಾರತಿ ಎ.,-ಹೊಸನಗರ, ಸಹ ಶಿಕ್ಷಕರುಗಳಾದ ಶಬಿನಾ-ಭದ್ರಾವತಿ, ದುರುಗಪ್ಪ ಡಿ.ಬಿ.-ಸೊರಬ, ಸಂಜೀವ ನಾಯ್ಕ-ಶಿಕಾರಿಪುರ, ಪುಟ್ಟಸ್ವಾಮಿ ಕೆ.ಕೆ.-ಹೊನಸಗರ, ತಿಪ್ಪೆಸ್ವಾಮಿ ಆರ್.-ಭದ್ರಾವತಿ, ರವಿ ಎಸ್.ಟಿ.-ಶಿವಮೊಗ್ಗ, ಜಯ ಎಂ. ಶೇಟ್-ಶಿವಮೊಗ್ಗ, ಸಂಜಿದಾ ಬಾನು-ಶಿವಮಸೊಗ್ಗ, ಶಿಲ್ಪ ಜಿ.ಎಸ್.-ಶಿಕಾರಿಪುರ, ಆಶಾರಾಣಿ ಎ. ಆರ್.-ಶಿಕಾರಿಪುರ, ಅಪರ್ಣ ವಿ. ಎಂ-ಸೊರಬ., ಕಲಾವತಿ ಎ.-ಸೊರಬ, ಅಂಥೋನಿ ಫರ್ನಾಂಡಿಸ್-ಸಾಗರ, ಗೋಪಿ ವಿ.-ತೀರ್ಥಹಳ್ಳಿ, ಚಿತ್ರಕಲಾ ಶಿಕ್ಷಕರಾದ ಅರವಿಂದ ಟಿ.ಎನ್.-ತೀರ್ಥಹಳ್ಳಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸುಶೀಲಮ್ಮ ಎಸ್.-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.