ಹಾಸನ: ಅಸಹಜ ಲೈಂಗಿಕ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪರವಾಗಿ, ಸಂತ್ರಸ್ತ ವ್ಯಕ್ತಿಯ ವಿರುದ್ಧ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಈ ದೂರಿನಡಿ ಆತನ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಆದ್ರೇ ಇದೀಗ ಹೀಗೆ ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ್ದಂತ ವ್ಯಕ್ತಿಯೇ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರು ಟೌನ್ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ಅವರಿಗೆ ಬ್ಲಾಕ್ ಮಾಡಿದ್ದಾರೆ. ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಸಂತ್ರಸ್ತ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿರೋದಾಗಿ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಈ ದೂರು ಪಡೆದಿದ್ದಂತ ಪೊಲೀಸರು ಕೇಸ್ ಸಹ ಬುಕ್ ಮಾಡಿದ್ದರು.
ಆದ್ರೇ ಹತ್ತಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಂತೆ, ಈಗ ಸೂರಜ್ ರೇವಣ್ಣ ಪರ ದೂರು ನೀಡಿದ್ದಂತ ಶಿವಕುಮಾರ್ ಅವರೇ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ದೂರು ನೀಡಿದ್ದಂತ ಶಿವಕುಮಾರ್ ನಾಪತ್ತೆಯಾಗಿದ್ದು, ಸಂಪರ್ಕಕ್ಕೇ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲವಂತೆ. ಅವರು ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ನಾಪತ್ತೆಯಾಗಿರೋದಾಗಿ ಹೇಳಲಾಗುತ್ತಿದೆ.
ಹೀಗಾಗಿ ಸೂರಜ್ ರೇವಣ್ಣ ಜೊತೆಗೆ ಇದ್ದಂತ ಶಿವಕುಮಾರ್ ಪಿತೂರು ನಡೆಸಿದ್ರಾ ಅನ್ನೋ ಅನುಮಾನಕ್ಕೂ ಕಾರಣವಾಗಿದೆ. ಬೇರೆಯವರ ಜೊತೆಗೆ ಟ್ರ್ಯಾಪ್ ಮಾಡಿದ್ರಾ ಶಿವಕುಮಾರ್? ಎಂಎಲ್ ಸಿ ಸೂರಜ್ ರೇವಣ್ಣ ಟ್ರ್ಯಾಪ್ ಮಾಡಿದ್ನಾ ಅಂತ ಅನುಮಾನಗಳಿಗೆ ಕಾರಣವಾಗಿದ್ದು, ಈ ಬಗ್ಗೆ ತನಿಖೆಯಿಂದ ಖಚಿತ ಮಾಹಿತಿ ಹೊರ ಬರಬೇಕಿದೆ.
BIG NEWS : ಕೇಂದ್ರ ಸಚಿವ ʻHDKʼಗೆ ಬಿಗ್ ಶಾಕ್ : ʻದೇವದಾರಿ ಮೈನಿಂಗ್ʼ ಗೆ ತಡೆ ನೀಡಿ ರಾಜ್ಯ ಸರ್ಕಾರ ಆದೇಶ