ಉತ್ತರ ಕನ್ನಡ: ಜಿಲ್ಲೆಯ ಶಿರಸಿ ನಗರಸಭೆಯ ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಗಣಪತಿ ನಾಯಕ್ ಹಾಗೂ ನಗರಸಭೆಯ ಕಂದಾಯ ಅಧಿಕಾರಿ ಆರ್.ಎಂ ವೆರ್ಣೇಕರ್ ಎಂಬುವರು 3 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಾಗದ ವಿಷಯಕ್ಕೆ ಸಂಬಂದಪಟ್ಟಂತೆ ರಮೇಶ ಹೆಗಡೆ ಎಂಬುವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರಮೇಶ್ ಹೆಗಡೆ ಅವರು ಲೋಕಾಯುಕ್ತ ಪೊಲೀಸರಿಗೆ ಶಿರಸಿ ನಗರಸಭೆ ಸದಸ್ಯ ಗಣಪತಿ ನಾಯಕ್ ಹಾಗೂ ಕಂದಾಯ ಅಧಿಕಾರಿ ಆರ್.ಎಂ ವೆರ್ಣೇಕರ್ ವಿರುದ್ಧ ದೂರು ನೀಡಿದ್ದರು.
ಇಂದು ಶಿರಸಿಯ ಟಿ ಎಸ್ ಎಸ್ ಹತ್ತಿರ ಇರುವಂತ ಜಿಯೋ ಕಚೇರಿ ಬಳಿಯಲ್ಲಿ ಮೂರು ಲಕ್ಷ ರೂ ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ನಗರಸಭೆಯ ಪೈಪ್ ಕಳ್ಳತನ ಆರೋಪ ಎದುರಿಸುತ್ತಿರುವ ಹಾಲಿ ಸದಸ್ಯ ಹಾಗೂ ಮಾಜಿ ಅದ್ಯಕ್ಷ ಗಣಪತಿ ನಾಯ್ಕ ಹಾಗೂ ಕಂದಾಯ ಅಧಿಕಾರಿ ಆರ್ ಎಂ ವೆರ್ಣೇಕರ್ ಅವರನ್ನು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ. ಇದೀಗ ಅವರನ್ನು ವಶಕ್ಕೆ ಪಡೆದಿರುವಂತ ಲೋಕಾಯುಕ್ತ ಪೋಲಿಸರು, ತೀವ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ನಾಳೆ, ನಾಡಿದ್ದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING: ಬೆಂಗಳೂರಲ್ಲಿ ರೌಡಿಶೀಟರ್ ಬಿಕ್ಲು ಶಿವ ಬರ್ಬರ ಕೊಲೆ ಕೇಸ್: ಐವರು ಆರೋಪಿಗಳು ಅರೆಸ್ಟ್