ಬೆಂಗಳೂರು: ನಗರದಲ್ಲಿ ಮಾರಕಾಸ್ತ್ರಗಳೊಂದಿಗೆ ಓಡಾಡುತ್ತಿದ್ದಂತ ಸುಪಾರಿ ಕಿಲ್ಲರ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಅವನ ಬಳಿಯಲ್ಲಿದ್ದಂತ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪುಟ್ಟೇನಹಳ್ಳಿ ಕೆರೆಯ ಬಳಿ ಮಾರಕಾಸ್ತ್ರವನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ಸುಫಾರಿ ಕಿಲ್ಲರ್ ಒಬ್ಬನನ್ನು ಸಿಸಿಬಿಯ ಸಂಘಟಿತ ಅಪರಾಧ ದಳದ ಪಶ್ಚಿಮ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಬಂಧಿಸಲಾಗಿದೆ. ಆತನ ಬಳಿ ಇದ್ದಂತ ಡ್ರಾಗರ್ ತರಹದ ಮಾರಕಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಸುಫಾರಿ ಕಿಲ್ಲರ್ ಹುಳಿಮಾವು ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇಬ್ಬರು ವ್ಯಕ್ತಿಗಳು ಸುಪಾರಿ ಪಡೆದುಕೊಂಡು ಕೊಲೆ ಮಾಡಿದ್ದರು. 2 ಕೊಲೆಯತ್ನ ಪ್ರಕರಣಗಳು ಸಹ ದಾಖಲಾಗಿತ್ತು. ಬಂದಿತ ಆರೋಪಿ ಕಿಡ್ನಾಪ್ ಪ್ರಕರಣವೊಂದರಲ್ಲಿ ಬಂಧಿಸಲು ಹೋಗಿದ್ದ ಪೊಲೀಸರನ್ನೇ ಕೊಲೆ ಮಾಡಲು ಪ್ರಯತ್ನಿಸಿದ್ದರು, ಆಗ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
BIG NEWS: ನಾಳೆ ಕರ್ನಾಟಕದಲ್ಲಿ ‘ಸರ್ಕಾರಿ ರಜೆ’ ಘೋಷಣೆ: ಈ ಬಗ್ಗೆ ‘ಡಿಸಿಎಂ ಡಿಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?