ಶಿವಮೊಗ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರ ವಿದ್ಯಾರ್ಥಿ ವೇತನ ಯೋಜನೆಯಡಿ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯ ಎಸ್.ಎಸ್.ಎಲ್.ಸಿ. ನಂತರದ (ಪೋಸ್ಟ್ ಮೆಟ್ರಿಕ್) ವಿಕಲಚೇತನ ವಿದ್ಯಾರ್ಥಿಗಳು ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ https://ssp.postmatric.karnataka.gov.in ರ ಮೂಲಕ ಅರ್ಜಿ ಸಲ್ಲಿಸಿ, ಹಾರ್ಡ್ ಪ್ರತಿಯೊಂದಿಗೆ ಯು.ಡಿ.ಐ.ಡಿ.ಕಾರ್ಡ್, ವ್ಯಾಸಂಗ ಪ್ರಮಾಣ ಪತ್ರ, ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ನಿವಾಸಿ ದೃಢೀಕರಣ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಗಳನ್ನು ಲಗತ್ತಿಸಿ ಗ್ರಾಮ ಪಂಚಾಯಿತಿಯಲ್ಲಿನ ವಿ.ಆರ್.ಡಬ್ಲ್ಯೂ.ಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಯು.ಆರ್.ಡಬ್ಲ್ಯೂಗಳಿಗೆ ಹಾಗೂ ತಾಲೂಕು ಪಂಚಾಯಿತಿಯಲ್ಲಿನ ಎಂಆರ್.ಡಬ್ಲ್ಯೂಗಳಿಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295234 / 251676 ಗಳನ್ನು ಸಂಪರ್ಕಿಸುವುದು.
ಬೆಂಗಳೂರಿಗರ ಗಮನಕ್ಕೆ : ‘ಕೃಷ್ಣ ಜನ್ಮಾಷ್ಟಮಿ’ ಪ್ರಯುಕ್ತ ‘ಇಸ್ಕಾನ್ ಟೆಂಪಲ್’ ಬಳಿ ಸಂಚಾರ ಮಾರ್ಗ ಬದಲಾವಣೆ
ಇದು ‘ಪೊಲೀಸ್ ಇಲಾಖೆ’ಯೇ ತಲೆತಗ್ಗಿಸುವ ಕೆಲಸ: ಓಸಿ ದಂಧೆಕೋರರಿಂದ ‘ಪೋನ್ ಪೇ’ ಮೂಲಕ ಪೊಲೀಸಪ್ಪ ‘ಲಂಚ ಸ್ವೀಕಾರ’