ಶಿವಮೊಗ್ಗ: ಭಾರೀ ಕುತೂಹಲ ಮೂಡಿಸಿದ್ದಂತ ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆಯ ಫಲಿತಾಂಶ, ಇಂದು ಮತ ಏಣಿಕೆಯ ಬಳಿಕ ಪ್ರಕಟಗೊಂಡಿದೆ. ಇಂದು ಪ್ರಕಟಿತವಾದಂತ ಶಿಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಯಾರೆಲ್ಲ ಗೆಲುವು ಸಾಧಿಸಿದ್ದಾರೆ ಎನ್ನುವ ಬಗ್ಗೆ ಮುಂದಿದೆ ಪಟ್ಟಿ.
ಈ ಕುರಿತಂತೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ರಿಟರ್ನಿಂಗ್ ಅಧಿಕಾರಿಗಳ ಕಾರ್ಯಾಲಯದಿಂದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಚುನಾವಣೆಯ ಅಂತಿಮ ಫಲಾತಂಶದಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಿಂದ ಯಾರೆಲ್ಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಈ ಕೆಳಕಂಡಂತಿದೆ.
ಶಿವಮೊಗ್ಗ ವಿಭಾಗ
- ಆನಂದ ಡಿ.ಬಿಎನ್ ಅವರು 131 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.
- ಹೆಚ್.ಬಿ ದಿನೇಶ್ ಅವರು 115 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
- ಆರ್.ಎಂ ಮಂಜುನಾಥಗೌಡ ಅವರು ಅವರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಗರ ವಿಭಾಗ
- ಟಿ ಶಿವಶಂಕರಪ್ಪ ಅವರು 162 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
- ದಯಾನಂದ ಗೌಡ್ರು ಟಿಎಸ್ ಅವರು 124 ಮತಗಳಿಂದ ಗೆಲುವು
- ವಿದ್ಯಾಧರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆ ವಿಭಾಗ
- ಚೇತನ್ ಸೋಮಣ್ಣ ಅವರು 211 ಮತಗಳಿಂದ ಗೆಲುವು ಸಾಧಿಸಿದ್ದಾರೆ.
- ಜಗದೀಶಪ್ಪ ಬಣಕಾರ್ ಅವರು 182 ಮತಗಳೊಂದಿಗೆ ವಿಜಯ ಸಾಧಿಸಿದ್ದಾರೆ.
- ಹೆಚ್.ಕೆ ಬಸಪ್ಪ ಅವರು 176 ಮತಗಳಿಂದ ಗೆಲುವು
- ಬಿಜಿ ಬಸವರಾಜಪ್ಪ ಅವರು 166 ಮತಗಳಿಂದ ಗೆಲುವು
ಚಿತ್ರದುರ್ಗ ವಿಭಾಗ
- ಬಿಆರ್ ರವಿಕುಮಾರ್ ಎಂಬುವರು 163 ಮತಗಳಿಂದ ಗೆಲುವು
- ಸಂಜೀವಮೂರ್ತಿ 134 ಮತಗಳಿಂದ ಗೆಲುವು
- ರೇವಣಸಿದ್ದಪ್ಪ ಜಿಪಿ 109 ಮತಗಳನ್ನು ಪಡೆದು ಗೆಲುವು
- ಜಿಬಿ ಶೇಖರಪ್ಪ 106 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ED ನೂತನ ನಿರ್ದೇಶಕರಾಗಿ IRS ಅಧಿಕಾರಿ ರಾಹುಲ್ ನವೀನ್ ನೇಮಕ | ED Director
BREAKING: ರಾಜ್ಯ ಸರ್ಕಾರದಿಂದ ಕೂಡಲೇ SBI, PNB ಬ್ಯಾಂಕ್ ಖಾತೆ ಮುಚ್ಚುವಂತೆ ಎಲ್ಲಾ ಇಲಾಖೆಗಳಿಗೆ ಆದೇಶ