ಶಿವಮೊಗ್ಗ: ಇಂದು ಪಲ್ಸ್ ಪೊಲೀಯೋ ಅಭಿಯಾನ. ಇಡೀ ದಿನ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೊಲೀಯೋ ಹಾಕಬೇಕು. ಮಿಸ್ ಆದಂತ ಮಕ್ಕಳಿಗೆ ನಾಳೆ ಮನೆ ಮನೆಯ ಭೇಟಿಯ ಮೂಲಕ ಹಾಕಬೇಕು. ಆದ್ರೇ ಇಲ್ಲೊಂದು ಅಂಗನವಾಡಿಯವರು ಮಾತ್ರ ಮಧ್ಯಾಹ್ನಕ್ಕೆ ಬೀಗ ಜಡಿದುಕೊಂಡು ಮನೆಗೆ ಹೋಗಿರೋ ಆರೋಪ ಕೇಳಿ ಬಂದಿದೆ.
ಸಾಗರ ತಾಲೂಕಿನ ಕರೂರು ಹೋಬಳಿಯ ಶಂಕಣ್ಣ ಶ್ಯಾನುಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳೂರು ಗ್ರಾಮದಲ್ಲಿರುವಂತ ಅಂಗನವಾಡಿ ಕೇಂದ್ರದ ಸಿಬ್ಬಂದಿಯೇ ಹೀಗೆ ಮಧ್ಯಾಹ್ನಕ್ಕೆ ಬೀಗ ಜಡಿದುಕೊಂಡು ತೆರಳಿರುವಂತ ಸಿಬ್ಬಂದಿಗಳಾಗಿದ್ದಾರೆ.
ಮಧ್ಯಾಹ್ನಕ್ಕೆ ಅಂಗನವಾಡಿ ಕೇಂದ್ರಕ್ಕೆ ಬೀಗ
ಮಳೂರು ಗ್ರಾಮದಲ್ಲಿರುವಂತ ಅಂಗನವಾಡಿ ಕೇಂದ್ರಕ್ಕೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಪೋಷಕರು ಮಕ್ಕಳೊಂದಿಗೆ ತೆರಳಿದರೇ ಬಾಗಿಲು ಹಾಕಿದೆ. ಇಡೀ ದಿನ 5 ವರ್ಷದೊಳಗಿನ ಮಕ್ಕಳಿಗೆ ಇಂದು ತಪ್ಪದೇ ಪಲ್ಸ್ ಪೊಲೀಯೋ ಹಾಕಬೇಕಿದ್ದಂತ ಸಿಬ್ಬಂದಿ ಮಾತ್ರ ಮಧ್ಯಾಹ್ನವೇ ಬೀಗ ಜಡಿದಿದ್ದು ಕಂಡು ಪೋಷಕರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಮಳೂರು ಅಂಗನವಾಡಿ ಕೇಂದ್ರದ ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಬೇಜಾವಬ್ದಾರಿ ನಡೆಯನ್ನು ಕಂಡಂತ ಸ್ಥಳೀಯರೊಬ್ಬರು ಸುದ್ದಿ ಸಾಗರಕ್ಕೆ ಕರೆ ಮಾಡಿ, ನಾವು ಪಲ್ಸ್ ಪೋಲಿಯೋ ಹಾಕಿಸೋದಕ್ಕೆ ಬಂದಿದ್ದೇವೆ. ಆದ್ರೇ ಇವರು ಅಂಗನವಾಡಿ ಕೇಂದ್ರವನ್ನು ಓಪನ್ ಮಾಡಿಲ್ಲ. ಹೀಗೆ ಮಾಡಿದರೇ ಹೇಗೆ? ಇಂತವರ ವಿರುದ್ಧ ಸಂಬಂಧಿಸಿದಂತ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಉತ್ತರಿಸದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು
ಈ ಬಗ್ಗೆ ಸಾಗರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಅಂಗನವಾಡಿ ಸಂಘಟನೆಯ ರಾಜ್ಯ ಸಂಚಾಲಕರಾದ ರವೀಂದ್ರ ಸಾಗರ್ ಅವರಿಗೂ ಕರೆ ಮಾಡಿ ಮಾತನಾಡಿದ್ರೇ ಯಾವುದೇ ಉತ್ತರವಿಲ್ಲ. ಈ ಹಿನ್ನಲೆಯಲ್ಲಿ ಮಳೂರು ಅಂಗನವಾಡಿ ಕೇಂದ್ರದಿಂದ ಬ್ಯಾಕೋಡಿಗೆ ಹೋಗಿ ಮಗುವಿಗೆ ಪಲ್ಸ್ ಪೋಲಿಯೋ ಹಾಕಿಸಿಕೊಂಡು ಬರುವಂತೆ ಆಯ್ತು ಎಂಬುದಾಗಿ ಅಲವತ್ತು ತೋಡಿಕೊಂಡಿದ್ದಾರೆ.
ಏನಿದು ಸಾಗರ ಶಾಸಕರಾದ ಜಿಕೆಬಿಯವರೇ.?
ರಾಜ್ಯಾಧ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಅಂಗನವಾಡಿ ಕೇಂದ್ರ ಸೇರಿದಂತೆ ಆಸ್ಪತ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿರುವಾಗ ಮಳೂರು ಅಂಗನವಾಡಿ ಕೇಂದ್ರದ ಸಿಬ್ಬಂದಿ ಮಧ್ಯಾಹ್ನಕ್ಕೆ ಬಂದ್ ಮಾಡಿರುವುದು ಏನಿದು? ನಿಮ್ಮ ಹಿಡಿತದಲ್ಲಿ ಯಾಕೆ ಇಲಾಖೆ ಇಲ್ಲವೇ? ನಿಮ್ಮ ಮಾತು ಕೇಳುತ್ತಿಲ್ಲವೇ ಎಂಬುದಾಗಿ ಸುದ್ದಿಸಾಗರದ ಮೂಲಕ ಸಾಗರ ತಾಲೂಕಿನ ಜನರು ಪ್ರಶ್ನಿಸುತ್ತಿದ್ದಾರೆ. ಈ ಕೂಡಲೇ ಮಳೂರು ಅಂಗನವಾಡಿ ಕೇಂದ್ರದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವರದಿ: ಉಮೇಶ್ ಮೊಗವೀರ, ಸಾಗರ
BREAKING: ಮಂಗಳೂರಿನ ‘ಪಣಂಬೂರು ಬೀಚ್’ನಲ್ಲಿ ಮೂವರು ಯುವಕರು ನೀರುಪಾಲು
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್ ವಿಶ್ವಾಸ!