ಶಿವಮೊಗ್ಗ: ಭಾರತದ ಸಂವಿಧಾನವನ್ನು ಬಹಳ ಅಸ್ಥೆಯಿಂದ ಅಂಬೇಡ್ಕರ್ ಮತ್ತು ಹಲವರು ರಚಿಸಿದ್ದಾರೆ. ಸಂವಿಧಾನ ಇವತ್ತು ಅಪಾಯದ ಅಂಚಿನಲ್ಲಿದೆ. ಇದನ್ನು ಕಾಪಾಡಿಕೊಳ್ಳುವ ಕಾಲಾಳುಗಳು ಆಗಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ವಕೀಲರು ಮತ್ತು ಸಮಾಜ ಸೇವಕರಾದ ಸುದೀರ್ ಕುಮಾರ್ ಮುರೊಳ್ಳಿ ಅಭಿಪ್ರಾಯ ಪಟ್ಟರು.
ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಎಜುಕೇಷನಲ್ ಟ್ರಸ್ಟ್ ಮತ್ತು ಡಿಜಿಟಲ್ ಮಿಡಿಯಾ ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಏರ್ಪಡಿಸಲಾದ ಭಾರತದ ಸಂವಿಧಾನ ಮತ್ತು ವಿದ್ಯಾರ್ಥಿಗಳು ಕುರಿತು ಅವರು ಉಪನ್ಯಾಸ ನೀಡಿ ಮಾಡಿದರು.
ಸಂವಿಧಾನ ಸಭೆ ಎಲ್ಲ ಸ್ತರದ ಜನರನ್ನು ಒಳಗೊಂಡಿತ್ತು. ಅಂಬೇಡ್ಕರ್ ಕಾಯ್ದೆ, ಗಾಂಧಿ ವಿವೇಕ ಇವರಿಬ್ಬರು ನಮ್ಮ ಆದರ್ಶ ಆಗಬೇಕು ಎಂದು ಕಾನೂನು ವಿದ್ಯಾರ್ಥಿಗಳು ಮತ್ತು ಇತರೆ ವಿಭಾಗದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬನಾರಾಸ್ ವಿವಿಯಲ್ಲಿ ಬಂಡಾಯ ನೆನಪಿಸಿದ ಅವರು, ಗಾಂಧಿ ಅಂದು ಆಡಿದ ಮಾತುಗಳನ್ನು ವಿವರವಾಗಿ ವಿವರಿಸಿದರು. ಗಾಂಧಿಯವರು ಭಾರತಕ್ಕೆ ಸ್ವಾತಂತ್ರ್ಯ ಬಂದೆ ಮೇಲೆ ಏನು ಆಗುತ್ತದೆ ಎಂದು ವಿವರವಾಗಿ ತಿಳಿಸಿದರು.
ಇಂದು ಭೂಮಿ, ಎಲ್ಲರಿಗೂ ಕೆಲಸ ಸಿಗುವ ಹಾಗೆ ಮಾಡಿದ್ದು ಭಾರತದ ಸಂವಿಧಾನ. ಇಂದು ನಾವು ಮಾಡುತ್ತಿರುವ ನಮ್ಮ ನಮ್ಮ ದೇವರ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದ್ದು ನಮ್ಮ ಸಂವಿಧಾನ. ಪತ್ರಿಕಾ ಸ್ವಾತಂತ್ರ್ಯ ಕೊಟ್ಟಿದ್ದು, ಮಹಿಳೆಯರು, ಬಡವರು ಬದಲಾವಣೆಯ ಕನಸು ಕಾಣಲು ಸ್ಪೂರ್ತಿ ಆಗಿದ್ದು ಅಂಬೇಡ್ಕರ್ ಬರೆದ ಸಂವಿಧಾನ ಎಂದರು.
ಸಂವಿಧಾನದ ಆಶಯ ಈಡೇರಿಸುವವರು ದುಷ್ಟರಾದರೆ ಬಹಳ ಅಪಾಯವಿದೆ. ಸೊಗೆಯ ಗುಡಿಸಲಿನಿಂದ ಹೆಂಚಿನ ಮನೆ ಬಂದಿದೆ ಎಂದರೆ ನಮ್ಮ ಸಂವಿಧಾನ ಎಂದರು.
ಮೀಸಲಾತಿ ಕುರಿತಾಗಿ ಪ್ರಶ್ನೆ ಬಂದಾಗ ಮೀಸಲಾತಿ ಎನ್ನುವುದು ಅಬಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಎಂದರು. ಐತಿಹಾಸಿಕ ಕಾಗೋಡು ಭೂಮಿ ಹೋರಾಟವನ್ನು ನೆನಪಿಸಿದ ಅವರು, ಇಂದು ಭೂ ಸುಧಾರಣೆ ಕಾಯ್ದೆ ಬಂದಿರುವುದು ಈ ನೆಲದ ಕಾಗೋಡು ಗೇಣಿ ಹೋರಾಟ. ಕುಷ್ಟರೋಗ ದೈಹಿಕವಾಗಿ ಹೋಗಿರಬಹುದು. ಮಾನಸಿಕವಾಗಿ ಇನ್ನು ಹೋಗಿಲ್ಲ ಎಂದರು.
DMPC ಅಧ್ಯಕ್ಷ ಚಾರ್ವಾಕ ರಾಘು ಮಾತನಾಡಿ ಅಂಬೇಡ್ಕರ್ ಆಶಯದ ನಿಜವಾದ ಸಂವಿಧಾನ ನಮ್ಮ ಮುಂದೆ ಇಲ್ಲ. ಹೀಗಾಗಿ ಪ್ರಭತ್ವ ಮತ್ತು ಅಲ್ಪಸಂಖ್ಯಾತರು, ಜಾತಿ ವಿನಾಶ, ಕ್ರಾಂತಿ ಪ್ರತಿಕ್ರಾಂತಿ ಲೇಖನ ಓದಲು ಹೇಳಿದರು.
ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಬಿಳಗಲ್ಲೂರು ಮಾತನಾಡಿ ಸಲಹೆ ಬೇಡ ಸಾಥ್ ಕೊಡಿ ಎಂದರು.
ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಆಫ್ ಸಾಗರ ಕಾರ್ಯದರ್ಶಿ ನಾಗರಾಜ್ ಅವರು ಡಿಎಂಪಿಸಿಯ ಬಗ್ಗೆ ಪ್ರಾಸ್ತಾವಿಕ ನುಡಿಯನ್ನು ನುಡಿದರು. ಸ್ವಾಗತ ಗೀತೆಯಾಗಿ ಹಿರಿಯ ಕಲಾವಿದ ವಸಂತ್ ಕುಗ್ವೆ ಅವರು ದೇಶ ಭಕ್ತಿ ಗೀತೆಯನ್ನು ಹಾಡಿದರು.
ವೇದಿಕೆಯಲ್ಲಿ ಕಾನೂನು ಕಾಲೇಜಿನ ಪಾಂಶುಪಾಲ ವಿನಯ್, ಎನ್ ಎಸ್ ಎಸ್ ಅಧಿಕಾರಿ ಜ್ಯೋತಿ ಆನಂದ್ ಇದ್ದರು.
ವರದಿ: ಸಂದೀಪ್ ಸಾಗರ, ರಾಘುವೇಂದ್ರ ತಾಳಗುಪ್ಪ
BREAKING: ‘ಭಾರತೀಯ ಪ್ರವಾಸಿಗ’ರಿಗೆ ಗುಡ್ ನ್ಯೂಸ್: ಇನ್ಮುಂದೆ ‘ಇರಾನ್’ಗೆ ಪ್ರಯಾಣಿಸಲು ‘ವೀಸಾ’ ಅಗತ್ಯವಿಲ್ಲ