ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದು ನಾಮಪತ್ರ ಹಿಂಪಡೆಯೋದಕ್ಕೆ ಕೊನೆಯ ದಿನವಾಗಿತ್ತು. ಇಂದು 7 ಮಂದಿ ತಮ್ಮ ಉಮೇಧುವಾರಿಕೆಯನ್ನು ಹಿಂಪಡೆದಿದ್ದಾರೆ. ಹೀಗಾಗಿ ಕಣದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 28 ಮಂದಿ ಇದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಜೂನ್.28ರಂದು ಚುನಾವಣೆ ನಡೆಯಲಿದೆ. 13 ನಿರ್ದೇಶಕರ ಸ್ಥಾನಕ್ಕೆ ಒಟ್ಟು ಬರೋಬ್ಬರಿ 35 ಮಂದಿ ನಾಮಪತ್ರವನ್ನು ಸಲ್ಲಿಸಿದ್ದರು.
ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು. ಈ ಸಂದರ್ಭದಲ್ಲಿ ಎಂ.ಶ್ರೀಕಾಂತ್, ಆರ್.ಸಿ ನಾಯಕ್, ದುದ್ದೇಶ್, ಹೆಚ್.ಎನ್ ವಿಜಯ ಕುಮಾರ್, ಹೆಚ್.ಮಲ್ಲಿಕಾರ್ಜುನ್, ವಿಜಯ್ ಕುಮಾರ್(ಧನಿ) ಹಾಗೂ ಹೆಚ್.ಜಿ ಮಲ್ಲಯ್ಯ ಎಂಬುವರು ನಾಮಪತ್ರವನ್ನು ಹಿಂಪಡೆದಿದ್ದಾರೆ.
ಇನ್ನೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಈಗ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ದುಗ್ಗಪ್ಪ ಗೌಡ, ಎಸ್.ಕೆ ಮರಿಯಪ್ಪ, ಆರ್.ಎಂ ಮಂಜುನಾಥ್ ಗೌಡ, ಯೋಗೀಶ್, ಎಸ್ ಪಿ ದಿನೇಶ್, ಡಿ.ಆನಂದ್, ಪರಮೇಶ್ವರ್ ಸೇರಿದಂತೆ 28 ಮಂದಿ ಕಣದಲ್ಲಿ ಇದ್ದಾರೆ.
ಈಗಾಗಲೇ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಜಿಲ್ಲೆಯ ಅನೇಕ ವ್ಯವಸಾಯ ಸೇವಾ ಸಂಘದ ಮುಖಂಡರು ಬೆಂಬಲವನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ಬೇಳೂರು ಗೋಪಾಲಕೃಷ್ಣ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸೋದು ಖಚಿತ ಎನ್ನಲಾಗುತ್ತಿದೆ. ಆ ಬಗ್ಗೆ ಜೂನ್.28ರ ಚುನಾವಣೆಯ ಫಲಿತಾಂಶದ ಬಳಿಕ ಖಚಿತ ಮಾಹಿತಿ ಹೊರಬೀಳಲಿದೆ.
ರಷ್ಯಾಕ್ಕೆ ಶರಣಾಗುವ ಮುನ್ನ ತನ್ನದೇ ಸೈನಿಕನ ಮೇಲೆ ಬಾಂಬ್ ದಾಳಿ ನಡೆಸಿದ ಉಕ್ರೇನ್, ಡ್ರೋನ್ ದಾಳಿಯ ವಿಡಿಯೋ ವೈರಲ್
BREAKING: ಬೆಂಗಳೂರಲ್ಲಿ ‘ಅಕ್ರಮ ಸರ್ಕಾರಿ ಭೂಮಿ’ ಒತ್ತುವರಿದಾರರ ವಿರುದ್ಧ ‘FIR’ ದಾಖಲು