ಶಿವಮೊಗ್ಗ: ಜುಲೈ.13ರಂದು ರಾಜ್ಯಾಧ್ಯಂತ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಅದರಂತೆ ಶಿವಮೊಗ್ಗದಲ್ಲೂ ನಡೆದಂತ ಲೋಕ್ ಅದಾಲತ್ ನಲ್ಲಿ 12,548 ಪ್ರಕರಣಗಳಲ್ಲಿ ಸಂಧಾನ ಪ್ರಕ್ರಿಯೆ ನಡೆದ್ರೇ, 6 ದಂಪತಿಗಳು ಡೈವೋರ್ಸ್ ಅರ್ಜಿಯನ್ನು ಹಿಂಪಡೆದು ಮತ್ತೆ ಹೊಂದಾಗಿದ್ದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 13.07.2024 ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ 12,548 ಪ್ರಕರಣಗಳನ್ನು ಹಾಗೂ 1,15,002 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಒಟ್ಟು 1,27,550 ರಾಜಿ ಸಂಧಾನ ಮಾಡಿಸುವ ಮೂಲಕ ಇತ್ಯರ್ಥಪಡಿಸಲಾಯಿತು. ಅವುಗಳ ಪೈಕಿ 06 ದಂಪತಿಗಳು ತಮ್ಮ ಪ್ರಕರಣವನ್ನು ಹಿಂಪಡೆದು ಒಟ್ಟಾಗಿ ಜೀವನ ನಡೆಸುವಂತೆ ರಾಜಿ ಮಾಡಿಕೊಂಡಿದ್ದು ವಿಶೇಷವಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಹತ್ತು ವರ್ಷಕ್ಕಿಂತ ಹಳೆಯದಾದ 07 ಪ್ರಕರಣಗಳು, ಎಂಟು ವರ್ಷಕ್ಕಿಂತ ಹಳೆಯದಾದ 08 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಅಂತ ತಿಳಿಸಿದೆ.
ಈ ಪ್ರಕರಣಗಳನ್ನು ರಾಜಿ ಮಾಡಿಸಲು ಶಿವಮೊಗ್ಗ ನಗರದಲ್ಲಿ, ಭದ್ರಾವತಿಯಲ್ಲಿ, ಹೊಸನಗರದಲ್ಲಿ, ಸಾಗರದಲ್ಲಿ, ಶಿಕಾರಿಪುರದಲ್ಲಿ, ಸೊರಬದಲ್ಲಿ ಹಾಗೂ ತೀರ್ಥಹಳ್ಳಿಯಲ್ಲಿ ಸೇರಿದಂತೆ ಒಟ್ಟು 41 ಪೀಠಗಳನ್ನು ರಚಿಸಲಾಗಿತ್ತು. ಲೋಕ್ ಅದಾಲತ್ ನಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾರ್ಗದರ್ಶನದಲ್ಲಿ ವಿವಿಧ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು. ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂಧಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಸರ್ಕಾರಿ ಅಭಿಯೋಜಕರು, ಶಿವಮೊಗ್ಗ ಜಿಲ್ಲೆಯ ವಕೀಲರ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು, ವಿವಿಧ ವಿಮೆ ಕಂಪನಿಯ ಹಾಗೂ ಬ್ಯಾಂಕ್ ಅಧಿಕಾರಿಗಳು, ಅವುಗಳ ಪ್ಯಾನಲ್ ವಕೀಲರುಗಳು ಹಾಗೂ ಕಕ್ಷಿದಾರರು ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದ್ದಾರೆ.
ಕಾನೂನು ಸೇವೆಗಳ ಪ್ರಾಧಿಕಾರದ 0 13.07.2024 ರಂದು ಮಾನ್ಯ ಕರ್ನಾಟಕ ರಾಜ್ಯ ನಿರ್ದೇಶನದನ್ವಯ ನಮ್ಮ ರಾಜ್ಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜರುಗಿಸಲು ನ್ಯಾಯಾಂಗ ಇಲಾಖೆಗೆ ಸಹಕರಿಸಿದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಅಭಿಯೋಜಕರು, ನ್ಯಾಯಾಲಯದ ಸಿಬ್ಬಂದಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರಿಗೆ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್. ಎಂ. ಎಸ್., ರವರು ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ರಾಜ್ಯಾಧ್ಯಂತ ಇಂದು ‘487 ಮಂದಿ’ಗೆ ಡೆಂಗ್ಯೂ ದೃಢ: ’10 ಸಾವಿರ’ ಗಡಿದಾಟಿದ ಪಾಸಿಟಿವ್ ಕೇಸ್ | Dengue Case
ಇನ್ಮುಂದೆ ‘ಅಂಗಾಂಗ ದಾನಿ’ಗಳಿಗೆ ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನದಂದು ‘ಪ್ರಶಂಸಾ ಪತ್ರ’ ನೀಡಿ ಗೌರವ