ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯ ಬಳಿಯಲ್ಲಿ ನಿರ್ಮಿಸುತ್ತಿರುವಂತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರವು ತಡೆ ನೀಡಿಲ್ಲ. ಬದಲಾಗಿ ವರದಿಯೊಂದನ್ನು ಸಲ್ಲಿಸಬೇಕಿರುವ ಕಾರಣ ಮುಂದೂಡಿಕೆ ಮಾಡಿರುವುದಾಗಿ ಕೆಪಿಸಿಎಲ್ ಇಇ ವಿಜಯ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ ಉಪ ಕಮಿಟಿಯು ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ನೀಡಬೇಕಿದೆ. ಆದರೇ ಅನಿವಾರ್ಯ ಕಾರಣದಿಂದಾಗಿ Sub-comittee of NBWL ಸ್ಥಳ ಪರಿಶೀಲನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಯೋಜನೆ ಮುಂದೂಡಿಕೆಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದರು.
ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ ಉಪ ಕಮಿಟಿಯು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರದೇಶಕ್ಕೆ ಭೇಟಿ ನೀಡಿ, ವರದಿಯನ್ನು ತಯಾರಿಸಿ MoEF ಗೆ ಸಲ್ಲಿಸಿದರೇ, ಯೋಜನೆ ಗೆ ಅಗತ್ಯವಿರುವ ಅನುಮತಿ ಪ್ರಕ್ರಿಯೆ ಮತ್ತೆ ಪ್ರಾರಂಭವಾಗಲಿದೆ. ಎಂಓಎಫ್ ಗೆ ವರದಿಯನ್ನು ಸಲ್ಲಿಸಿದರೇ ಸದ್ಯ ತಾತ್ಕಾಲಿಕವಾಗಿ ಮುಂದೂಡಿರುವಂತ ಯೋಜನೆಯು, ಮತ್ತೆ ಮುಂದುವರೆಯಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಕೇಂದ್ರ ಸಲಹಾ ಸಮಿತಿಯು ರಾಜ್ಯ ಸರ್ಕಾರವು ಭೂಗತ ರಸ್ತೆಗೆ ಪರ್ಯಾಯಗಳನ್ನು ಅನ್ವೇಷಿಸಬೇಕು ಮತ್ತು ಸ್ಪಷ್ಟ ಶಿಫಾರಸುಗಳೊಂದಿಗೆ ಸಮಗ್ರ ಉತ್ತರವನ್ನು ಸಲ್ಲಿಸಬೇಕು ಎಂಬುದಾಗಿ ಸೂಚಿಸಿದೆ. ರಾಜ್ಯ ಸರ್ಕಾರವು, 85ನೇ SCNBWL ಸಭೆಯ ಪ್ರಕಾರ ರಚಿಸಲಾದ ಸಮಿತಿಯ ವರದಿಯ ಪ್ರತಿಯನ್ನು ಮತ್ತು ಅದರ ಮೂಲಕ ಮಾಡಲಾದ ಶಿಫಾರಸುಗಳನ್ನು FAC ಯ ಪರಿಗಣನೆಗೆ ಸಲ್ಲಿಸಬೇಕು. ರಾಜ್ಯ ಸರ್ಕಾರವು ಅನುಮೋದಿತ ವನ್ಯಜೀವಿ ತಗ್ಗಿಸುವಿಕೆ ಯೋಜನೆಯ ಪ್ರತಿಯನ್ನು ಮತ್ತು ನಿಧಿಯ ಬದ್ಧತೆಯನ್ನು ಸಲ್ಲಿಸಬೇಕು ಎಂಬುದಾಗಿ ತಿಳಿಸಿದೆ. ಅದರ ಬಗ್ಗೆ ಸೂಕ್ತ ವರದಿಯನ್ನು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂಬುದಾಗಿ ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








