ಬೆಂಗಳೂರು: ಸಾಗರ ತಾಲ್ಲೂಕಿನ ಶರಾವತಿ ಕಣಿವೆಯಲ್ಲಿ ನಿರ್ಮಿಸಲು ಹೊರಟಿರುವಂತ ಸರ್ಕಾರದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶವಾಗಲಿದೆ ಎಂಬುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದ್ದಾರೆ.
ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ, ಪಶ್ಚಿಮ ಘಟ್ಟಗಳ ಉಳಿವಿಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಲ್ಲಿಸಬೇಕೆಂದು ಪರಿಸರಾಸಕ್ತರೂ, ರೈತರ ದುಂಡುಮೇಜಿನ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದಂತ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಕೇವಲ 300 ರಿಂದ 400 ಎಕ್ರೆ ಜಮೀನು ಮಾತ್ರ ಉಪಯೋಗಿಸುತ್ತೇವೆಂದು ಹೇಳುತ್ತಾರೆ. ಆದರೆ ಸುಮಾರು ಸಾವಿರದಿಂದ 1000 ಎಕರೆ ಅರಣ್ಯ ಪ್ರದೇಶ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಲಕ್ಷಾಂತರ ಮರಗಳು ಧರೆಗೆ ಉರುಳುತ್ತಿವೆ. ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ, ಕೇಂದ್ರ ಸರ್ಕಾರದಿಂದ ಅನುಮತಿಯನ್ನು ಪಡೆಯದೆ, ರಾಜ್ಯ ಸರ್ಕಾರವು ಯೋಜನೆಗೆ ಹಣವನ್ನು ಬಿಡುಗಡೆಗೊಳಿಸಿದೆ ಎಂಬುದಾಗಿ ಕಿಡಿಕಾರಿದರು.
1 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ನಾಲ್ಕರಿಂದ ಐದು ರೂಪಾಯಿ ಖರ್ಚಾಗುವ ಬದಲು, ಸುಮಾರು 20 ರಿಂದ 25 ರೂಪಾಯಿ ವೆಚ್ಚ ತೋರಿಸುತ್ತಿದ್ದಾರೆ. ( ಇದು ಸಾವಿರಾರು ಕೋಟಿಗಳ ಲೆಕ್ಕಚಾರದಲ್ಲಿ) ರಾಜ್ಯದ ಕೆಲ ಶಾಸಕರಿಗೂ ಹಾಗೂ ಸಂಬಂಧ ಪಟ್ಟಂತಹ ಸಂಸದರು ಇದರ ಬಗ್ಗೆ ಮಾಹಿತಿ ಗೊತ್ತಿಲ್ಲವೆಂದು ಹೇಳುತ್ತೀದ್ದಾರೆ. ಈ ಯೋಜನೆಯನ್ನು ನಿಲ್ಲಿಸಲು ಕೇಂದ್ರದಿಂದ ಒತ್ತಡ ಹೇರುವುದಾಗಿ ಹೇಳುತ್ತಿದ್ದಾರೆ ಎಂದರು.
ರೈತ ಬಾಂಧವರೇ ಬನ್ನಿ ಮುಂದಿನ ಪೀಳಿಗೆಗಾಗಿ, ವನ್ಯಜೀವಿಗಳ ಸಂರಕ್ಷಣೆಗಾಗಿ, ಸಸ್ಯ ಸಂಕುಲಗಳ ರಕ್ಷಣೆಗಾಗಿ, ದಟ್ಟ ಅರಣ್ಯ ಪ್ರದೇಶಗಳನ್ನು ಉಳಿಸೋಣ, ಹೋರಾಡೋಣ, ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳನ್ನು ಉಳಿಸೋಣ, ಪಶ್ಚಿಮ ಘಟ್ಟಗಳು ಏನಾದರೂ ನಾಶವಾದರೆ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಮೂಲ ನದಿಗಳೆಲ್ಲವೂ ಬತ್ತಿ ಹೋಗುತ್ತವೆ. ಮುಂದೆ ಕುಡಿಯುವ ನೀರಿಗೂ ಕಷ್ಟವಾಗಿ, ನೀರಿಲ್ಲದೆ ವ್ಯವಸಾಯದಿಂದ ಬದುಕು ಕಟ್ಟಿ ಕೊಳ್ಳಲು ಕಷ್ಟವಾಗುತ್ತದೆ. ಬನ್ನಿ ರೈತ ಬಾಂಧವರೇ ಜೊತೆಯಾಗಿ ಹೋರಾಡೋಣ ಜೊತೆಯಾಗಿ ಬಾಳೋಣ ಎಂಬುದಾಗಿ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಎ ಟಿ ರಾಮಸ್ವಾಮಿ, ನಿವೃತ್ತ ನ್ಯಾಯಾಧೀಶರಾದಂತಹ ಗೋಪಾಲ ಗೌಡ್ರು, ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್, ರೈತ ಹೋರಾಟಗಾರ ಕೆ ಟಿ ಗಂಗಾಧರ್, ಮಾಜಿ ಶಾಸಕ ಹರತಾಳು ಹಾಲಪ್ಪ, ಕೃಷಿ ತಜ್ಞರಾದ ಪ್ರಕಾಶ್ ಕಮ್ಮರಡಿ, ಪಾಂಡೋಮಟ್ಟಿ ವಿರಕ್ತ ಮಠದ ಪೂಜ್ಯರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ರೈತ ಸಂಘದ ಪದಾಧಿಕಾರಿಗಳು, ಪರಿಸರವಾದಿಗಳು, ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ರಾಜ್ಯದ ರುದ್ರಭೂಮಿಯ 147 ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ವ?
BIG ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ `ENO’ : ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!








