ಶಿವಮೊಗ್ಗ: ನಾಳೆಯಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂಬುದಾಗಿ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಎರಡೂ ದೇವಸ್ಥಾನಗಳಲ್ಲಿ ದಿನಾಂಕ 22-09-2025ನೇ ಸೋಮವಾರದಿಂದ 02-10-2025ನೇ ಗುರುವಾರದವರೆಗೆ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದಿದೆ.
ಪ್ರತಿ ದಿನ ಬೆಳಗ್ಗೆ 8-00ರಿಂದ ರಾತ್ರಿ 9-00ಗಂಟೆಯವರಗೆ ನಡೆಯಅದ್ದು ಎರಡೂ ದೇವಾಲಯಗಳಲ್ಲ ಶುದ್ಧ ಪುಣ್ಯಾಹವಾಚನ, ಶ್ರೀ ದೇವಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ, ರಾತ್ರಿ 8-30ಕ್ಕೆ ಅಷ್ಠಾವದನ ಸೇವೆ, ರಾತ್ರಿ 9 ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಎಂದು ಹೇಳಿದೆ.
ದಿನಾಂಕ 30-09-2025ನೇ ಮಂಗಳವಾರ ದುರ್ಗಾಷ್ಟಮಿ ದಿನದಂದು ದುರ್ಗಾ ಹವನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಇರುತ್ತದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದೆ.
ಈ ಎಲ್ಲಾ ಕಾರ್ಯಕ್ರಮಗಳು ಅತೀ ವಿಜೃಂಭಣೆಯಿಂದ ನಡೆಯಲಿದ್ದು, ಈ ಸಂದರ್ಭದಲ್ಲಿ ಈ ಕೆಳಕಂಡ ವಿಶೇಷ ಪೂಜೆಯ ಸೇವೆಗಳನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.
ಹೀಗಿದೆ ಶ್ರೀ ಮಾರಿಕಾಂಬಾ ದೇವಿಯ ವಿಶೇಷ ಪೂಜೆಯ ಸೇವೆ ದರಪಟ್ಟಿ
- ಸರ್ವಸೇವೆ – ರೂ.2500
- ಆಲಂಕಾರ ಸೇವೆ ರೂ.1,700
- ಪ್ರಸಾದ ಸೇವೆ ರೂ.1,300
- ಶ್ರೀ ದೇವಿ ಪಾರಾಯಣ ರೂ.700
- ವಿಶೇಷ ಪೂಜೆ ರೂ.700
ಪ್ರಸಾದ ಸೇವೆ, ಶ್ರೀ ದೇವಿಗೆ ಅಲಂಕಾರ, ಹೂವಿನ ಅಲಂಕಾರದ ಒಂದು ದಿನದ ಸೇವೆ ಸಲ್ಲಿಸುವ ಭಕ್ತಾಧಿಗಳು ಕಾರ್ಯಾಲಯವನ್ನು ಸಂಪರ್ಕಿಸುವಂತೆ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಸ್ಠಾನ ಮನವಿ ಮಾಡಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ರಾಜ್ಯದಲ್ಲಿ ‘KERC ಮಾದರಿ’ಯಲ್ಲಿ ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ ರಚಿಸಿ ಸರ್ಕಾರ ಅಧಿಸೂಚನೆ
ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭ: ಈ ಪ್ರಶ್ನೆಗಳಿಗೆ ಉತ್ತರ ಕಡ್ಡಾಯ