Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತದ ಡಿಜಿಟಲ್ ಭವಿಷ್ಯ ರೂಪಿಸುವುದು: ದತ್ತಾಂಶ ಸಂರಕ್ಷಣೆಗೆ ನಾಗರಿಕ-ಕೇಂದ್ರಿತ ಕಾರ್ಯ ವಿಧಾನ
INDIA

ಭಾರತದ ಡಿಜಿಟಲ್ ಭವಿಷ್ಯ ರೂಪಿಸುವುದು: ದತ್ತಾಂಶ ಸಂರಕ್ಷಣೆಗೆ ನಾಗರಿಕ-ಕೇಂದ್ರಿತ ಕಾರ್ಯ ವಿಧಾನ

By kannadanewsnow0905/01/2025 7:51 PM

ನವದೆಹಲಿ: “ನಾವು ಜಾಗತಿಕ ಭವಿಷ್ಯದ ಬಗ್ಗೆ ಮಾತನಾಡುವಾಗ, ಮಾನವ-ಕೇಂದ್ರಿತ ಕಾರ್ಯವಿಧಾನಗಳು ಅಗ್ರಗಣ್ಯವಾಗಿರಬೇಕು.” ಇತ್ತೀಚೆಗೆ ಜರುಗಿದ ವಿಶ್ವಸಂಸ್ಥೆಯ ‘ಭವಿಷ್ಯದ ಶೃಂಗಸಭೆ’ಯಲ್ಲಿ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಈ ಮಾತುಗಳು ಜನರಿಗೆ ಮೊದಲ ಸ್ಥಾನ ನೀಡುವ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಈ ತತ್ವಶಾಸ್ತ್ರವು 2025ರ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ(ಡಿಪಿಡಿಪಿ) ನಿಯಮಗಳನ್ನು ರೂಪಿಸುವ ನಮ್ಮ ಪ್ರಯತ್ನಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಈ ನಿಯಮಗಳನ್ನು ಅಂತಿಮಗೊಳಿಸಿದ ನಂತರ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯಿದೆ-2023 ಅನ್ನು ಕಾರ್ಯಗತಗೊಳಿಸಲಾಗುತ್ತದೆ. ಈ ವೈಯಕ್ತಿಕ ಡೇಟಾ ರಕ್ಷಣೆಯು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಜೀವಂತಗೊಳಿಸುತ್ತದೆ.

ಸಬಲೀಕರಣದ ನವಯುಗ

ಭಾರತೀಯ ಪ್ರಜೆಯು 2025ರ ಡಿಪಿಡಿಪಿ ನಿಯಮಗಳ ಹೃದಯಭಾಗದಲ್ಲಿರುತ್ತಾನೆ. ಡೇಟಾದಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ಜಗತ್ತಿನಲ್ಲಿ ಆಡಳಿತ ಮಾರ್ಗಸೂಚಿಯ ಹೃದಯ ಭಾಗದಲ್ಲಿ ಜನರನ್ನು ಇರಿಸುವುದು ಅತ್ಯಗತ್ಯ ಎಂಬುದನ್ನು ನಾವು ನಂಬುತ್ತೇವೆ. ಈ ನಿಯಮಗಳು ತಿಳಿವಳಿಕೆಯುಳ್ಳ ಸಮ್ಮತಿ, ಡೇಟಾ ಅಳಿಸುವಿಕೆ ಮತ್ತು ಡಿಜಿಟಲ್ ನಾಮಿನಿಗಳನ್ನು ನೇಮಿಸುವ ಸಾಮರ್ಥ್ಯದಂತಹ ಹಕ್ಕುಗಳೊಂದಿಗೆ ನಾಗರಿಕರಿಗೆ ಅಧಿಕಾರ ನೀಡುತ್ತದೆ. ಉಲ್ಲಂಘನೆಗಳು ಅಥವಾ ಅನಧಿಕೃತ ಡೇಟಾ ಬಳಕೆಯ ಕಾರಣಗಳಿಗಾಗಿ ನಾಗರಿಕರು ಇನ್ನು ಮುಂದೆ ಅಸಹಾಯಕರಾಗುವುದಿಲ್ಲ. ಅವರು ತಮ್ಮ ಡಿಜಿಟಲ್ ಗುರುತುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ಸಾಧನಗಳನ್ನು ಹೊಂದಿರುತ್ತಾರೆ.

ಹೊಸ ನಿಯಮಗಳನ್ನು ಸರಳತೆ ಮತ್ತು ಸ್ಪಷ್ಟತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.ಪ್ರತಿಯೊಬ್ಬ ಭಾರತೀಯನು, ಅವರ ತಾಂತ್ರಿಕ ಜ್ಞಾನವನ್ನು ಲೆಕ್ಕಿಸದೆ, ಅವರ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಚಲಾಯಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಸಮ್ಮತಿಯನ್ನು ಖಾತ್ರಿಪಡಿಸಿಕೊಳ್ಳುವುದರಿಂದ ಹಿಡಿದು ನಾಗರಿಕರಿಗೆ ಇಂಗ್ಲಿಷ್ ಅಥವಾ ಸಂವಿಧಾನದಲ್ಲಿ ಪಟ್ಟಿ ಮಾಡಲಾದ 22 ಭಾರತೀಯ ಭಾಷೆಗಳಲ್ಲಿ ಯಾವುದೇ ಮಾಹಿತಿ ಒದಗಿಸುವುದನ್ನು ಕಡ್ಡಾಯಗೊಳಿಸುವವರೆಗೆ, ಮಾರ್ಗಸೂಚಿಯ ಒಳಗೊಳ್ಳುವಿಕೆಯ ನಮ್ಮ ಬದ್ಧತೆ  ಪ್ರತಿಬಿಂಬಿಸುತ್ತದೆ.

ಮಕ್ಕಳ ರಕ್ಷಣೆ

ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ಇದನ್ನು ಗುರುತಿಸಿ, ಅಪ್ರಾಪ್ತ ವಯಸ್ಕರ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ಈ ನಿಯಮಗಳು, ಪರಿಶೀಲಿಸಬಹುದಾದ ಪೋಷಕರು ಅಥವಾ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುತ್ತವೆ. ಹೆಚ್ಚುವರಿ ಸುರಕ್ಷತೆಗಳು ಮಕ್ಕಳನ್ನು ಶೋಷಣೆ, ಅನಧಿಕೃತ ಪ್ರೊಫೈಲಿಂಗ್ ಮತ್ತು ಇತರ ಡಿಜಿಟಲ್ ಹಾನಿಗಳಿಂದ ರಕ್ಷಿಸುತ್ತವೆ ಎಂಬುದನ್ನು ಖಚಿತಪಡಿಸುತ್ತದೆ. ಈ ನಿಬಂಧನೆಗಳು ಭವಿಷ್ಯದ ಪೀಳಿಗೆಗೆ ಸುರಕ್ಷಿತ ಡಿಜಿಟಲ್ ಜಾಗವನ್ನು ಸೃಷ್ಟಿಸುವ ನಮ್ಮ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ.

ನಿಯಂತ್ರಣದೊಂದಿಗೆ ಬೆಳವಣಿಗೆಯ ಸಮತೋಲನ

ಭಾರತದ ಡಿಜಿಟಲ್ ಆರ್ಥಿಕತೆಯು ಜಾಗತಿಕ ಯಶೋಗಾಥೆಯಾಗಿದ್ದು, ಈ ಆವೇಗವನ್ನು ಜೀವಂತವಾಗಿಡಲು ನಾವು ನಿರ್ಧರಿಸಿದ್ದೇವೆ. ಡಿಜಿಟಲ್ ಆರ್ಥಿಕತೆಯಲ್ಲಿ ನಾವೀನ್ಯತೆಯನ್ನು ಸಕ್ರಿಯಗೊಳಿಸುವಾಗ ನಮ್ಮ ಮಾರ್ಗಸೂಚಿಯು ನಾಗರಿಕರಿಗೆ ವೈಯಕ್ತಿಕ ಡೇಟಾ ರಕ್ಷಣೆಯನ್ನು ಖಚಿತಪಡಿಸುತ್ತದೆ. ನಿಯಂತ್ರಣದ ಕಡೆಗೆ ಹೆಚ್ಚು ಒಲವು ತೋರುವ ಕೆಲವು ಅಂತಾರಾಷ್ಟ್ರೀಯ ಮಾದರಿಗಳಿಗಿಂತ ಭಿನ್ನವಾಗಿ, ನಮ್ಮ ಕಾರ್ಯವಿಧಾನವು ಪ್ರಾಯೋಗಿಕ ಮತ್ತು ಬೆಳವಣಿಗೆ-ಆಧಾರಿತವಾಗಿದೆ. ಈ ಸಮತೋಲನವು ನಮ್ಮ ಸ್ಟಾರ್ಟ್ಅಪ್ ಗಳು ಮತ್ತು ವ್ಯವಹಾರಗಳನ್ನು ಚಾಲನೆ ಮಾಡುವ ನವೀನ ಮನೋಭಾವವನ್ನು ತಡೆಯದೆ ನಾಗರಿಕರಿಗೆ ರಕ್ಷಣೆ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಸಣ್ಣ ಉದ್ದಿಮೆಗಳು ಮತ್ತು ಸ್ಟಾರ್ಟ್ಅಪ್ ಗಳು ಕಡಿಮೆ ಅನುಸರಣೆ ಹೊರೆಗಳನ್ನು ಎದುರಿಸಬೇಕಾಗುತ್ತದೆ. ಪಾಲುದಾರರ ವಿವಿಧ ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಂಡು, ಶ್ರೇಣೀಕೃತ ಜವಾಬ್ದಾರಿಗಳೊಂದಿಗೆ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ದತ್ತಾಂಶ ವಿಶ್ವಾಸಾರ್ಹರ ಮೌಲ್ಯಮಾಪನದ ಆಧಾರದ ಮೇಲೆ ದೊಡ್ಡ ಕಂಪನಿಗಳು ಹೆಚ್ಚಿನ ಜವಾಬ್ದಾರಿಗಳನ್ನು ಹೊಂದಿರುತ್ತವೆ. ಬೆಳವಣಿಗೆಗೆ ಅಡ್ಡಿಯಾಗದಂತೆ ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತವೆ.

ಡಿಜಿಟಲ್-ಮೊದಲು ತತ್ವ

ಈ ನಿಯಮಗಳ ಹೃದಯ ಭಾಗದಲ್ಲಿ “ವಿನ್ಯಾಸದಿಂದಲೇ ಡಿಜಿಟಲ್(ಡಿಜಿಟಲ್ ಬೈ ಡಿಸೈನ್)” ತತ್ವಶಾಸ್ತ್ರವಿದೆ. ಕುಂದುಕೊರತೆಗಳನ್ನು ಪರಿಹರಿಸುವ ಮತ್ತು ಅನುಸರಣೆಯನ್ನು ಜಾರಿಗೊಳಿಸುವ ಕಾರ್ಯವನ್ನು ಹೊಂದಿರುವ ಡೇಟಾ ಸಂರಕ್ಷಣಾ ಮಂಡಳಿಯು ಪ್ರಧಾನವಾಗಿ ಡಿಜಿಟಲ್ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ನಾವು ದಕ್ಷತೆ, ಪಾರದರ್ಶಕತೆ ಮತ್ತು ವೇಗವನ್ನು ಖಚಿತಪಡಿಸುತ್ತೇವೆ. ನಾಗರಿಕರು ದೂರುಗಳನ್ನು ಸಲ್ಲಿಸಬಹುದು, ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು ಮತ್ತು ಅನಗತ್ಯ ದೈಹಿಕ ಸಂವಹನಗಳಿಲ್ಲದೆ ನಿರ್ಣಯಗಳನ್ನು ಪಡೆಯಬಹುದು.

ಈ ಡಿಜಿಟಲ್-ಮೊದಲ ವಿಧಾನವು ಸಮ್ಮತಿ ಕಾರ್ಯವಿಧಾನಗಳು ಮತ್ತು ಡೇಟಾ ನಿರ್ವಹಣೆ ಕೆಲಸದ ಹರಿವುಗಳಿಗೆ ವಿಸ್ತರಿಸುತ್ತದೆ. ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ, ವಿಶ್ವಾಸಾರ್ಹರು ಅನುಸರಿಸಲು ಮತ್ತು ನಾಗರಿಕರು ಇದರಲ್ಲಿ ತೊಡಗಿಸಿಕೊಳ್ಳುವಂತೆ ನಾವು ಸುಲಭಗೊಳಿಸುತ್ತೇವೆ. ಈ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಬೆಳೆಸುತ್ತೇವೆ.

ಎಲ್ಲರನ್ನೂ ಒಳಗೊಂಡ ಕಾರ್ಯವಿಧಾನ

ಈ ನಿಯಮಗಳ ಪ್ರಯಾಣವು ಅದರ ಉದ್ದೇಶದಂತೆ ಅಂತರ್ಗತವಾಗಿದೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಕಾಯಿದೆ-2023ರ ತತ್ವಗಳ ಆಧಾರದ ಮೇಲೆ, ಕರಡು ನಿಯಮಗಳು ವಿವಿಧ ಪಾಲುದಾರರಿಂದ ಸಂಗ್ರಹಿಸಿದ ವ್ಯಾಪಕ ಶ್ರೇಣಿಯ ಸಲಹೆ, ಸೂಚನೆ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡಿ, ಆಯ್ದ  ಉತ್ಪನ್ನವಾಗಿದೆ.

ನಾವು 45-ದಿನಗಳ ಸಾರ್ವಜನಿಕ ಸಮಾಲೋಚನೆಯ ಅವಧಿಯನ್ನು ತೆರೆದಿದ್ದೇವೆ. ನಾಗರಿಕರು, ವ್ಯವಹಾರಗಳು ಮತ್ತು ನಾಗರಿಕ ಸಮಾಜದಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಆಹ್ವಾನಿಸುತ್ತೇವೆ. ಈ ತೊಡಗಿಸಿಕೊಳ್ಳುವಿಕೆಯು ಸಾಮೂಹಿಕ ಒಳಗೊಳ್ಳುವಿಕೆಯಲ್ಲಿ ನಮ್ಮ ನಂಬಿಕೆ ಮತ್ತು ಭಾಗವಹಿಸುವಿಕೆಯ ನೀತಿಯ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಆದರೆ, ಮಾರ್ಗಸೂಚಿ ಸದೃಢವಾಗಿರುವುದು ಮಾತ್ರವಲ್ಲದೆ, ನಮ್ಮ ಸಾಮಾಜಿಕ-ಆರ್ಥಿಕ ವಲಯದ ಅನನ್ಯ ಸವಾಲುಗಳಿಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ನಾಗರಿಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಯುವುದನ್ನು ಖಚಿತಪಡಿಸಿಕೊಳ್ಳಲು, ಅವರ ವೈಯಕ್ತಿಕ ಡೇಟಾದ ಮೇಲಿನ ಹಕ್ಕುಗಳ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ವ್ಯಾಪಕ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಭವಿಷ್ಯದ ದೃಷ್ಟಿಕೋನ

ನಾವು ಈ ನಿಯಮಗಳನ್ನು ಅನಾವರಣಗೊಳಿಸುತ್ತಿದ್ದಂತೆ, ನಾವು ಕೇವಲ ಪ್ರಸ್ತುತ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದರ ಜತೆಗೆ,  ಸುರಕ್ಷಿತ ಮತ್ತು ನವೀನ ಡಿಜಿಟಲ್ ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕುತ್ತೇವೆ. 2025ರ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು ಜಾಗತಿಕ ಡೇಟಾ ಆಡಳಿತದ ಉತ್ತಮ ರೂಢಿಗಳನ್ನು ರೂಪಿಸುವಲ್ಲಿ ಭಾರತದ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ನಾಗರಿಕರನ್ನು ಪ್ರಧಾನವಾಗಿ ಇರಿಸುವ ಮೂಲಕ ಮತ್ತು ನಾವೀನ್ಯತೆಗೆ ಅನುಕೂಲಕರ ವಾತಾವರಣ ಬೆಳೆಸುವ ಮೂಲಕ, ನಾವು ಜಗತ್ತಿಗೆ ಅನುಸರಿಸಲು ಒಂದು ಪೂರ್ವನಿದರ್ಶನವನ್ನು ಹೊಂದಿಸುತ್ತಿದ್ದೇವೆ.

ನಮ್ಮ ಬದ್ಧತೆ ಸ್ಪಷ್ಟವಾಗಿದೆ

ಈ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ಭಾರತೀಯನನ್ನು ರಕ್ಷಿಸಲು, ಸಶಕ್ತಗೊಳಿಸಲು ಮತ್ತು ಸಕ್ರಿಯಗೊಳಿಸಲು ಸಮಾಲೋಚನೆಯ ಅವಧಿಯಲ್ಲಿ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ಈ ಸಂವಾದದಲ್ಲಿ ಭಾಗವಹಿಸಲು ಪ್ರತಿಯೊಬ್ಬ ನಾಗರಿಕ, ವ್ಯಾಪಾರ ಮತ್ತು ನಾಗರಿಕ ಸಮಾಜದ ಗುಂಪನ್ನು ನಾನು ಪ್ರೋತ್ಸಾಹಿಸುತ್ತೇನೆ. ಒಟ್ಟಾಗಿ, ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಇಂಡಿಯಾದ ಆಶಯಗಳನ್ನು ಪ್ರತಿನಿಧಿಸುವ ಮಾರ್ಗಸೂಚಿ ರೂಪಿಸಲು ನಾವು ಈ ನಿಯಮಗಳನ್ನು ಪರಿಷ್ಕರಿಸೋಣ.

ಲೇಖಕರು: ಅಶ್ವಿನಿ ವೈಷ್ಣವ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆಯ ಗೌರವಾನ್ವಿತ ಸಚಿವರು

ರಾಜ್ಯದ ಜನತೆಗೆ ‘ಉಚಿತ ಗೋಮಾಳ’ ಒದಗಿಸುವ ಬಗ್ಗೆ ಮಹತ್ವದ ಮಾಹಿತಿ

ರಾಜ್ಯದ `ಕಾರ್ಮಿಕರಿಗೆ’ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

Share. Facebook Twitter LinkedIn WhatsApp Email

Related Posts

Viral Video: ವೈರಲ್ ರೀಲ್‌ಗಾಗಿ ಯುವಕನ ಹುಚ್ಚಾಟ್ಟ: ರೈಲು ಹಳಿಗಳ ಮೇಲೆ ಮಲಗಿದ ಹುಡುಗ; ವಿಡಿಯೋ ವೈರಲ್

06/07/2025 6:20 PM1 Min Read

ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, ಆಪರೇಷನ್ ಸಿಂಧೂರ್ ಥೀಮ್ ಮೇಲೆ ನೃತ್ಯ ಪ್ರದರ್ಶಿಸಿದ ಭಾರತೀಯರು: ವಿಡಿಯೋ ನೋಡಿ

06/07/2025 5:24 PM1 Min Read

VIRAL VIDEO: ಹಾಲಿನ ಡಬ್ಬಕ್ಕೆ ಉಗಿದ ಮಾರಾಟಗಾರ, ಸಿಸಿಟಿವಿ ದೃಶ್ಯ ವೈರಲ್

06/07/2025 5:21 PM1 Min Read
Recent News

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM
State News
KARNATAKA

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

By kannadanewsnow0506/07/2025 7:41 PM KARNATAKA 2 Mins Read

ಧಾರವಾಡ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಬಹಳಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರ ಬೆರಳಿಂದ ಉಗುರು…

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.