ಬೆಂಗಳೂರು : ಮಹಿಳಾ ಸಂಘದ ವತಿಯಿಂದ ಹೋಳಿಗೆ ತಯಾರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಬೆಳಸಿ ವ್ಯಾಪಾರ ಮಾಡಿ ಕೈತುಂಬ ಆದಾಯ ಪಡೆದ ಮಹಿಳೆಯರ ಬಗ್ಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಒಡಲ ಧ್ವನಿಯೆಂಬ ಮಹಿಳಾ ಸಂಘ ಕಟ್ಟಿಕೊಂಡು, ದೂರದ ವಿಜಯಪುರದ ಇಂಡಿಯಲ್ಲಿ ಹೋಳಿಗೆ ತಯಾರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ತಂದು ವ್ಯಾಪಾರ ಮಾಡಿ, ಕೈತುಂಬ ಆದಾಯ – ನೆಮ್ಮದಿಯ ಬದುಕು ಕಟ್ಟಿಕೊಂಡ ಈ ಮಹಿಳೆಯರ ಕತೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
ಹೆಂಡತಿ ದೇವಸ್ಥಾನಕ್ಕೆ ಹೋದವಳು ತಿಂಗಳಾದ್ರೂ ಬರಲಿಲ್ಲ, ಶಕ್ತಿ ಯೋಜನೆ ಬಂದ್ಮೇಲೆ ಹೆಂಗಸರು ಮನೆಯಲ್ಲೇ ಇರಲ್ಲ ಎಂಬಿತ್ಯಾದಿ ಹೊಟ್ಟೆತುಂಬಿದ ಮಂದಿಯ ವ್ಯವಸ್ಥಿತ ಅಪಪ್ರಚಾರಗಳ ಬದಲು ಇಂತಹ ಸುದ್ದಿಗಳು ಹೆಚ್ಚು ಜನರನ್ನು ತಲುಪಬೇಕು, ಆ ಮೂಲಕ ಮತ್ತಷ್ಟು ಮಹಿಳೆಯರು ಬದುಕಿನ ಹೊಸಹಾದಿ ಕಂಡುಕೊಳ್ಳುವಂತಾಗಬೇಕು. ಆಗಲೇ ಯೋಜನೆಯ ಉದ್ದೇಶ ಪೂರ್ಣ ಸಾಕಾರಗೊಳ್ಳಲಿದೆ ಎಂದರು.
ಒಡಲ ಧ್ವನಿಯೆಂಬ ಮಹಿಳಾ ಸಂಘ ಕಟ್ಟಿಕೊಂಡು, ದೂರದ ವಿಜಯಪುರದ ಇಂಡಿಯಲ್ಲಿ ಹೋಳಿಗೆ ತಯಾರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ತಂದು ವ್ಯಾಪಾರ ಮಾಡಿ, ಕೈತುಂಬ ಆದಾಯ – ನೆಮ್ಮದಿಯ ಬದುಕು ಕಟ್ಟಿಕೊಂಡ ಈ ಮಹಿಳೆಯರ ಕತೆ ಸ್ಪೂರ್ತಿದಾಯಕವಾಗಿದೆ.
ಹೆಂಡತಿ ದೇವಸ್ಥಾನಕ್ಕೆ ಹೋದವಳು ತಿಂಗಳಾದ್ರೂ… pic.twitter.com/r3a6hZTnQC
— Siddaramaiah (@siddaramaiah) March 29, 2025