Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಹ್ರೇನ್ ರಾಜನೊಂದಿಗೆ ಪ್ರಧಾನಿ ಮೋದಿ ಮಾತುಕತೆ: ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಇಂಧನ ಭದ್ರತೆ ಕುರಿತು ಚರ್ಚೆ

20/03/2026 8:02 PM

‘ಚೆಕ್ ಬೌನ್ಸ್’ ಆದ ತಕ್ಷಣ ಅದನ್ನು ‘ವಂಚನೆ’ ಎನ್ನಲಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

20/03/2026 8:00 PM

BREAKING : ‘ವಾಕರ್ ಟೆಕ್ಸಾಸ್ ರೇಂಜರ್’ ಖ್ಯಾತಿಯ ಹಾಲಿವುಡ್ ಪ್ರಸಿದ್ಧ ನಟ ‘ಚಕ್ ನಾರ್ರಿಸ್’ ಇನ್ನಿಲ್ಲ

20/03/2026 7:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಕ್ತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣ, ಸ್ವಾಭಿಮಾನದ ಸಂಕೇತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
KARNATAKA

ಶಕ್ತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣ, ಸ್ವಾಭಿಮಾನದ ಸಂಕೇತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

By kannadanewsnow0928/02/2026 3:02 PM

ಬೆಳಗಾವಿ : ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಸ್ವಾಭಿಮಾನ ಮತ್ತು ಸಬಲೀಕರಣದ ಸಂಕೇತಗಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ ಹಾಗೂ ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಗೆ ಆದೇಶ ಪತ್ರ ವಿತರಣೆ, ಅಪಘಾತ/ಅಪರಾಧ ರಹಿತ ಸೇವೆ ಸಲ್ಲಿಸಿದ ಸಂಸ್ಥೆಯ ಚಾಲನಾ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಣೆ ಹಾಗೂ ನೂತನ ತಂತ್ರಾಂಶಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮೀಣ ಮಹಿಳೆಯರ ಸಶಕ್ತೀಕರಣಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೊಡುಗೆ ಬಹಳ ದೊಡ್ಡದಿದೆ. ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಕೂಡ ಬಸ್ ಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಸಾರಿಗೆ ವ್ಯವಸ್ಥೆ ಎಂದರೆ ಕೇವಲ ಒಂದು ಇಲಾಖೆಯ ಕಾರ್ಯವಲ್ಲ, ಅದು ಜನಜೀವನದ ಭಾಗ, ಜನಸಾಮಾನ್ಯರ ಜೀವನಾಡಿ ಇದ್ದಂತೆ. ಕಳೆದ 28 ವರ್ಷಗಳಿಂದ ಈ ಸಂಸ್ಥೆ ಲಕ್ಷಾಂತರ ಜನರ ವಿಶ್ವಾಸವನ್ನು ಗಳಿಸಿದೆ. ಒಬ್ಬ ವಿದ್ಯಾರ್ಥಿನಿಯ ಶಿಕ್ಷಣದ ಕನಸು, ಒಬ್ಬ ಕಾರ್ಮಿಕನ ದುಡಿಯುವ ಬದುಕು ಇವೆಲ್ಲವನ್ನು ಗಮ್ಯಸ್ಥಾನಕ್ಕೆ ಕೊಂಡೊಯ್ಯುವ ಸೇತುವೆಯೇ ನಮ್ಮ ಸಾರಿಗೆ ವ್ಯವಸ್ಥೆ. ಭರವಸೆ, ಸುರಕ್ಷತೆ ಮತ್ತು ಸಮಯಪಾಲನೆಯನ್ನು ಸಾಗಿಸುವ ಸೇವಾ ಸಂಸ್ಥೆ ಎಂದು ಕೊಂಡಾಡಿದ ಸಚಿವರು, ಇಂದು ಲೋಕಾರ್ಪಣೆಯಾಗುತ್ತಿರುವ ನೂತನ ಬಸ್ಸುಗಳು ಕೇವಲ ಹೊಸ ವಾಹನಗಳಲ್ಲ. ಅವು ಅಭಿವೃದ್ಧಿಯ ಚಕ್ರಗಳು. ಗ್ರಾಮದಿಂದ ನಗರಕ್ಕೆ, ನಗರದಿಂದ ಗ್ರಾಮಕ್ಕೆ ಜನರನ್ನು ಸಂಪರ್ಕಿಸುವ ಅಭಿವೃದ್ಧಿಯ ಮಾರ್ಗಗಳು ಎಂದು ಹೇಳಿದರು.

ಒಂದು ಬಸ್ ರಸ್ತೆ ಮೇಲೆ ಓಡುತ್ತಿರುವಾಗ ಅದು ಕೇವಲ ಪ್ರಯಾಣಿಕರನ್ನು ಮಾತ್ರ ಸಾಗಿಸುವುದಿಲ್ಲ, ಅದು ಕನಸುಗಳನ್ನು ಸಾಗಿಸುತ್ತದ, ಆಸೆಗಳನ್ನು ಸಾಗಿಸುತ್ತದೆ, ಬದುಕಿನ ಅವಕಾಶಗಳನ್ನು ಸಾಗಿಸುತ್ತದೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಮಹಿಳೆಯರ ಬದುಕಿನಲ್ಲಿ ನಿಜವಾದ ಬದಲಾವಣೆ ತಂದಿದೆ. ರಾಜ್ಯದಲ್ಲಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಮೂಲಕ, ಅವರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಬೆಂಬಲ ನೀಡಲಾಗಿದೆ. ಇದರಿಂದ ಲಕ್ಷಾಂತರ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಭಾರವನ್ನು ಕಡಿಮೆ ಮಾಡುತ್ತಿದ್ದಾರೆ. ಇದರೊಂದಿಗೆ ಗೃಹಲಕ್ಷ್ಮೀ ಯೋಜನೆ ಸಹ ಮಹಿಳೆಯರ ಸ್ವಾಭಿಮಾನಕ್ಕೆ ಕಾರಣವಾಗಿದೆ ಎಂದರು.

ಮಹಿಳಾ ಸಬಲೀಕರಣದ ಸರ್ಕಾರದ ಬದ್ಧತೆಯ ಸಾಕ್ಷಿಯಾಗಿರುವ ಶಕ್ತಿ ಯೋಜನೆ ಯಶಸ್ವಿಯಾಗಲು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರತಿ ದಿನ ಲಕ್ಷಾಂತರ ಮಹಿಳೆಯರನ್ನು ಗೌರವದಿಂದ, ಸುರಕ್ಷಿತವಾಗಿ ಸಾಗಿಸುತ್ತಿರುವ ಚಾಲಕರು ಮತ್ತು ನಿರ್ವಾಹಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಾರಿಗೆ ಸಿಬ್ಬಂದಿಯ ಸೇವಾಭಾವನೆ ಬಿಸಿಲು, ಮಳೆ, ಹಗಲು-ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ಜನಸೇವೆಯನ್ನು ಮುಂದುವರಿಸುತ್ತಿರುವ ನಮ್ಮ ಸಿಬ್ಬಂದಿ ಕಾರ್ಯ ನಿಜಕ್ಕೂ ಪ್ರಶಂಸನೀಯರು. ಅವರ ಶ್ರಮದಿಂದಲೇ ಈ ಸಂಸ್ಥೆ ಇಷ್ಟು ವರ್ಷಗಳಿಂದ ವಿಶ್ವಾಸವನ್ನು ಗಳಿಸಿದೆ. ನಿಮ್ಮ ಕುಟುಂಬದ ಬಗೆಗೂ ಕಾಳಜಿ ವಹಿಸಿ ಎಂದು ಹೆಬ್ಬಾಳಕರ್ ಹೇಳಿದರು.

ಮಂಗಳಾರತಿಮಾಡಿಸಿಕೊಂಡ ಬಿಜೆಪಿ

ಬಿಜೆಪಿಯವರಿಗೆ ಕೆಲಸವಿಲ್ಲ, ಧಾರವಾಡದಲ್ಲಿ ಯುವಕರ ದಿಕ್ಕು ತಪ್ಪಿಸಿ, ಸರಕಾರದ ವಿರುದ್ಧ ಹೋರಾಟ ಮಾಡಲು ಹೋಗಿ ಮುಖಕ್ಕೆ ಮಂಗಳಾತಿ ಮಾಡಿಸಿಕೊಂಡರು. ಅವರ ಅಧಿಕಾರ ಅವಧಿಯಲ್ಲಿ ಒಂದೇ ಒಂದು ಹೊಸ ಬಸ್ ಖರೀದಿಸಲಿಲ್ಲ. ರಾಮಲಿಂಗ ರೆಡ್ಡಿ ಅವರು 7,800 ಬಸ್ ಖರೀದಿಸಿದ್ದಾರೆ. ಇದು ಜನಪರ ಕಾರ್ಯಕ್ರಮವಾ? ಇದು ಜನವಿರೋಧಿ ಕಾರ್ಯಕ್ರಮವಾ? ಈಗ ಸಾರಿಗೆ ಇಲಾಖೆಯಲ್ಲಿ 10 ಸಾವಿರ ನೇಮಕಾತಿ ಮಾಡಲಾಗುತ್ತಿದೆ. ರಾಮಲಿಂಗಾ ರೆಡ್ಡಿ ಅವರು ಕೆಲಸ ಮಾಡಿದ ಪ್ರತಿ ಇಲಾಖೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿದರು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂಸ್ಥೆಯ ಚೇರಮನ್, ಶಾಸಕ ರಾಜು ಕಾಗೆ, ಉಪಾಧ್ಯಕ್ಷ ಸುನಿಲ್ ಹನಮಣ್ಣವರ್, ಶಾಸಕರಾದ ಆಸಿಫ್ ಸೇಠ್, ವಿಠ್ಠಲ ಹಲಗೇಕರ್, ಬಾಬಾಸಾಹೇಬ ಪಾಟೀಲ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಪೋಲಿಸ್ ಆಯುಕ್ತರಾದ ಭೂಷಣ್ ಗುಲಾಬರಾವ್ ಬೋರಸೆ, ಪೋಲಿಸ್ ಅಧೀಕ್ಷರಾದ ಕೆ.ರಾಮರಾಜನ್, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

NWKRTCಗೆ ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆಯೆಂದು ನಾಮಕರಣ ಮಾಡಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿನಂತಿ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ: ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ

20/03/2026 7:48 PM2 Mins Read

ಬೆಂಗಳೂರಲ್ಲಿ ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೆ ವಾಹನಗಳನ್ನು ಡಂಪ್: ಡಿಸಿಎಂ ಡಿ.ಕೆ ಶಿವಕುಮಾರ್

20/03/2026 7:47 PM1 Min Read

ಬೆಂಗಳೂರಲ್ಲಿ ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50,000ದಿಂದ 1 ಲಕ್ಷ ದಂಡ ವಿಧಿಸಲು ಚಿಂತನೆ: ಡಿಸಿಎಂ ಡಿ.ಕೆ ಶಿವಕುಮಾರ್

20/03/2026 7:44 PM1 Min Read
Recent News

ಬಹ್ರೇನ್ ರಾಜನೊಂದಿಗೆ ಪ್ರಧಾನಿ ಮೋದಿ ಮಾತುಕತೆ: ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಇಂಧನ ಭದ್ರತೆ ಕುರಿತು ಚರ್ಚೆ

20/03/2026 8:02 PM

‘ಚೆಕ್ ಬೌನ್ಸ್’ ಆದ ತಕ್ಷಣ ಅದನ್ನು ‘ವಂಚನೆ’ ಎನ್ನಲಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

20/03/2026 8:00 PM

BREAKING : ‘ವಾಕರ್ ಟೆಕ್ಸಾಸ್ ರೇಂಜರ್’ ಖ್ಯಾತಿಯ ಹಾಲಿವುಡ್ ಪ್ರಸಿದ್ಧ ನಟ ‘ಚಕ್ ನಾರ್ರಿಸ್’ ಇನ್ನಿಲ್ಲ

20/03/2026 7:59 PM

BREAKING: ಹಾಲಿವುಡ್ ಹಿರಿಯ ‘ಆಕ್ಷನ್ ಸ್ಟಾರ್ ಚಕ್ ನಾರ್ರಿಸ್’ ಇನ್ನಿಲ್ಲ | Walker Texas Ranger

20/03/2026 7:56 PM
State News
KARNATAKA

ಬೆಂಗಳೂರಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ: ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ

By kannadanewsnow0920/03/2026 7:48 PM KARNATAKA 2 Mins Read

ಬೆಂಗಳೂರು : “ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದ್ದು, ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ…

ಬೆಂಗಳೂರಲ್ಲಿ ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೆ ವಾಹನಗಳನ್ನು ಡಂಪ್: ಡಿಸಿಎಂ ಡಿ.ಕೆ ಶಿವಕುಮಾರ್

20/03/2026 7:47 PM

ಬೆಂಗಳೂರಲ್ಲಿ ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50,000ದಿಂದ 1 ಲಕ್ಷ ದಂಡ ವಿಧಿಸಲು ಚಿಂತನೆ: ಡಿಸಿಎಂ ಡಿ.ಕೆ ಶಿವಕುಮಾರ್

20/03/2026 7:44 PM

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ಭಾಗಶಃ ರದ್ದು, ನಿಯಂತ್ರಣ

20/03/2026 6:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.