ಬೆಂಗಳೂರು: ನಿನ್ನೆ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇಂದು ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ನಂತ್ರ, ಮೇ.20ಕ್ಕೆ ಹೆಚ್.ಡಿ ರೇವಣ್ಣ ಅವರ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದೆ. ಅಲ್ಲದೇ ಮೇ.20ರ ಸೋಮವಾರದವರೆಗೆ ಮಧ್ಯಂತರ ಜಾಮೀನು ಮುಂದುವರಿಸಿದೆ.
ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿನ್ನೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇಂದು ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನ್ಯಾಯಪೀಠವು, ಅರ್ಜಿಯ ವಿಚಾರಣೆ ನಡೆಸಿತು.
ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಪೀಠದ ಮುಂದೆ ಎಸ್ಐಟಿ ಪರ ಎಸ್ ಪಿಪಿ ಜಾಯ್ನಾ ಕೊಥಾರಿ ಅವರು ಆರಂಭದಲ್ಲಿ ವಾದ ಮಂಡಿಸಿದರು. ಅವರು ಐಪಿಸಿ ಸೆಕ್ಷನ್ 436ರಡಿ ದಾಖಲಾಗಿರುವಂತ ಪ್ರಕರಣದಲ್ಲಿ ಜಾಮೀನು ಅರ್ಜಿ ಊರ್ಜಿತವಲ್ಲ. ಈಗಾಗಲೇ ಈ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಅವರು ಕೋರ್ಟ್ ಮುಂದೆ ಶರಣಾಗಿದ್ದಾರೆ. ಐಪಿಸಿ ಸೆಕ್ಷನ್ 376ರಡಿ ಜೀವಾವಧಿ ಶಿಕ್ಷೆ ಇದೆ. ಇದು ಜಾಮೀನು ರಹಿತ ಅಪರಾಧವಾಗಿದೆ ಎಂಬುದಾಗಿ ವಾದಿಸಿದರು.
ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದಂತ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯ ದೂರಿನ ಅಂಶಗಳನ್ನು ಓದಿ ನ್ಯಾಯಪೀಠಕ್ಕೆ ತಿಳಿಸಿದರು. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಈ ಕೋರ್ಟ್ ವ್ಯಾಪ್ತಿಗೆ ಬರೋದಿಲ್ಲ. ರೇವಣ್ಣ, ಪ್ರಜ್ವಲ್ ಇಬ್ಬರ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪವಿದೆ ಎಂದರು.
ರೇವಣ್ಣ, ಪ್ರಜ್ವಲ್ ವಿರುದ್ಧದ ದೂರು ವಿಭಜಿಸಬಾರದು. ಇಬ್ಬರ ವಿರುದ್ಧವೂ ಎಸ್ಐಟಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಈಗಲೇ ಹೆಚ್.ಡಿ ರೇವಣ್ಣ ವಿರುದ್ದ ಅತ್ಯಾಚಾರ ಆರೋಪವಿಲ್ಲ ಎಂದು ಹೇಳಲಾಗುವುದಿಲ್ಲ ಎಂಬುದಾಗಿ ತಮ್ಮ ವಾದ ಮಂಡಿಸಿದರು.
ಈ ಬಳಿಕ ಎಸ್ಐಟಿ ಪರ ಎಸ್ ಪಿಪಿ ಅಶೋಕ್ ನಾಯಕ ವಾದ ಮಂಡಿಸಿ ಮುಕ್ತಾಯದ ಬಳಿಕ ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಆರಂಭಿಸಿದರು. ನಾನು ಸುಮ್ಮನೆ ಇದ್ದೀನಿ ಅಂತ ಏನೇನೋ ವಾದಿಸುತ್ತಿದ್ದಾರೆ. ನಾವು ಜಾಮೀನು ನೀಡ ಬಹುದಾದಂತ ಪ್ರಕರಣಗಳಲ್ಲಿ ಜಾಮೀನು ಕೋರಿದ್ದೇವೆ. ನನ್ನ ಕಕ್ಷಿದಾರನಿಗೆ ಜಾಮೀನು ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಾದ-ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಮೇ.20ಕ್ಕೆ ಆದೇಶವನ್ನು ಕಾಯ್ದಿರಿಸಿದೆ. ಅಲ್ಲಿಯವರೆಗೆ ಮಧ್ಯಂತರ ಜಾಮೀನು ಮುಂದುವರಿಕೆಯಾಗುವಂತೆ ಸೂಚಿಸಿದೆ.
BIG NEWS: ಮುಂದಿನ ವರ್ಷದಿಂದ ‘SSLC ಗ್ರೇಸ್ ಮಾರ್ಕ್ಸ್’ ರದ್ದತಿಗೆ ‘ಸಿಎಂ ಸಿದ್ಧರಾಮಯ್ಯ’ ಆದೇಶ