ಲಕ್ನೋ: ಉತ್ತರ ಪ್ರದೇಶದ ತೀವ್ರ ಶೀತದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಕ್ನೋದ ಎಲ್ಲಾ  ಶಾಲೆಗಳು ಸೋಮವಾರದಿಂದ ಜನವರಿ 10 ರವರೆಗೆ 1 ರಿಂದ 8 ನೇ ತರಗತಿಯವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತವೆ ಎಂದು  ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದೆ.

Vaikuntha Ekadashi 2023: ʻವೈಕುಂಠ ಏಕಾದಶಿʼಯ ಶುಭ ಮುಹೂರ್ತ, ಪೂಜಾ ವಿಧಿ, ಮಹತ್ವದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ತೀವ್ರ ಶೀತಗಾಳಿ ಮತ್ತು ಅತಿಯಾದ ಮಂಜಿನ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮಾನ್ಯತೆ ಪಡೆದ ಶಾಲೆಗಳ 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ 4 ರವರೆಗೆ ರಜೆಯನ್ನು ವಿಸ್ತರಿಸಿ ಭಾನುವಾರವೂ ಸೀತಾಪುರ ಜಿಲ್ಲಾಧಿಕಾರಿ (ಡಿಎಂ) ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಡಿಎಂ ಅನುಜ್ ಸಿಂಗ್ ಹೇಳಿದ್ದಾರೆ.

ಈ ಆದೇಶವನ್ನು ತಕ್ಷಣವೇ ವಾಟ್ಸಾಪ್ ಮೂಲಕ ಸೀತಾಪುರ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಾಗಿದ್ದು, ಪೋಷಕರಿಗೆ ಸಮಯಕ್ಕೆ ಮಾಹಿತಿ ನೀಡಬಹುದಾಗಿದೆ.

Vaikuntha Ekadashi 2023: ʻವೈಕುಂಠ ಏಕಾದಶಿʼಯ ಶುಭ ಮುಹೂರ್ತ, ಪೂಜಾ ವಿಧಿ, ಮಹತ್ವದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಚಳಿಯ ಹಿನ್ನೆಲೆಯಲ್ಲಿ ಜನವರಿ 2 ಮತ್ತು ಜನವರಿ 3 ರಂದು ಎರಡು ದಿನಗಳ ಕಾಲ ಎಲ್‌ಕೆಜಿಯಿಂದ 8 ನೇ ತರಗತಿಯವರೆಗೆ ಸರ್ಕಾರಿ ಮತ್ತು ಇತರ ಮಾನ್ಯತೆ ಪಡೆದ ಶಾಲೆಗಳನ್ನು ಮುಚ್ಚುವಂತೆ ಗೋರಖ್‌ಪುರ ಡಿಎಂ ಭಾನುವಾರ ನಿರ್ದೇಶಿಸಿದ್ದಾರೆ.

ಗುರುವಾರದವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ದಟ್ಟವಾದ ಮಂಜು ಕವಿದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share.
Exit mobile version