ಬೆಳಗಾವಿ : ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ, ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ, ಅವರು ಕಾಂಗ್ರೆಸ್’ನ್ನ ತೀವ್ರವಾಗಿ ಗುರಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ದೇಶದ ಹಿತಾಸಕ್ತಿಯಿಂದ ಎಷ್ಟು ದೂರ ಹೋಗಿದೆಯೆಂದರೆ ಅದು ದೇಶದ ಸಾಧನೆಗಳನ್ನ ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು. ಭಾರತದ ಸಾಧನೆಗಳ ಬಗ್ಗೆ ಕಾಂಗ್ರೆಸ್ ನಾಚಿಕೆಪಡುತ್ತಿದೆ ಎಂದು ಅವರು ಆರೋಪಿಸಿದರು. ಹುಬ್ಬಳ್ಳಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಣಿ ಚಿನ್ನಮ್ಮ ಅವರನ್ನ ಕಾಂಗ್ರೆಸ್ ಅವಮಾನಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತವು ಬಲವಾದಾಗ ಪ್ರತಿಯೊಬ್ಬ ಭಾರತೀಯನೂ ಸಂತೋಷಪಡುತ್ತಾನೆ, ಆದರೆ ಕಾಂಗ್ರೆಸ್ ದೇಶದ ಹಿತಾಸಕ್ತಿಯಿಂದ ಎಷ್ಟು ದೂರವಿದೆಯೆಂದರೆ ಅದು ದೇಶದ ಸಾಧನೆಗಳನ್ನ ಇಷ್ಟಪಡುವುದಿಲ್ಲ” ಎಂದು ಹೇಳಿದರು. ಭಾರತದ ಪ್ರತಿಯೊಂದು ಯಶಸ್ಸಿನ ಬಗ್ಗೆ ಅವರು ನಾಚಿಕೆಪಡುತ್ತಾರೆ. ಇವಿಎಂಗಳ ನೆಪದಲ್ಲಿ ಅವರು ವಿಶ್ವದಾದ್ಯಂತ ಭಾರತವನ್ನು ದೂಷಿಸಲು ಪ್ರಯತ್ನಿಸಿದರು” ಎಂದರು.

 

 

 

Elon Musk | ಚೀನಾಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಎಲೋನ್ ಮಸ್ಕ್ : ವರದಿ

ಪೆನ್ ​ಡ್ರೈವ್ ಕೇಸ್​: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದೇನು?

BREAKING: ಹಾಸನ ‘ಪೆನ್ ಡ್ರೈವ್’ ಕೇಸ್: ತನಿಖೆಗೆ ‘SIT ತಂಡ’ ರಚಿಸಿ ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ

Share.
Exit mobile version