ಶಿವಮೊಗ್ಗ : ಸಹಕಾರಿ ಕ್ಷೇತ್ರದಲ್ಲಿ ಸೇವೆಯೇ ಜೀವಾಳ, ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಇರಬಾರದು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಸಹಕಾರಿ ಸಂಸ್ಥೆಗಳಿಗೆ ಉತ್ತಮ ಕೆಲಸ ಮಾಡುವವರಿಗೆ ಪಕ್ಷಪಾರ್ಟಿ ಮೀರಿ ಅವಕಾಶ ಕಲ್ಪಿಸಲಾಗುತ್ತಿದೆ. ನಂಬಿಕೆ ವಿಶ್ವಾಸದಿಂದ ಕಾರ್ಯನಿರ್ವಹಿಸಿ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ ಟಿಎಪಿಎಂಸಿಎಸ್‌ಗೆ ಅಧ್ಯಕ್ಷರಾಗಿ ಲೋಕನಾಥ್ ಬಿಳಿಸಿರಿ, ಉಪಾಧ್ಯಕ್ಷರಾಗಿ ಮಂಜಪ್ಪ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದಂತ ಅವರು, ಲೋಕನಾಥ್ ಬಿಳಿಸಿರಿ ಕಳೆದ ಬಾರಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಸಹಕಾರಿ ಸಂಸ್ಥೆಗಳು ಸಾಗರ ತಾಲ್ಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಡಿಸಿಸಿ ಬ್ಯಾಂಕ್ ಮೂಲಕ ಸಹ ಸಹಕಾರಿ ಬೆಳೆವಣಿಗೆಗೆ ಪೂರಕ ಬೆಂಬಲ ನೀಡಲಾಗುತ್ತಿದೆ. ಸಹಕಾರಿಗಳು ಉತ್ತಮವಾಗಿ ಕೆಲಸ ಮಾಡುವ ಮೂಲಕ ಸಾಗರದಲ್ಲಿ ಸಹಕಾರಿ ಸಂಘಗಳ ಸದೃಢತೆಗೆ ಮುನ್ನುಡಿ ಬರೆಯಬೇಕು ಎಂದರು.
ನೂತನ ಅಧ್ಯಕ್ಷ ಲೋಕನಾಥ್ ಬಿಳಿಸಿರಿ ಮಾತನಾಡಿ, ಶಾಸಕರು ಮತ್ತು ನೂತನ ನಿರ್ದೇಶಕರ ಸಹಕಾರದಿಂದ ಸಂಸ್ಥೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾನೆ. ಸಹಕಾರಿಯಲ್ಲಿ ಪಕ್ಷಪಾರ್ಟಿ ಇಲ್ಲ ಎನ್ನುವ ಶಾಸಕರು ಮಾತು ನಮಗೆ ಸ್ಪೂರ್ತಿ ತರುತ್ತದೆ. ಎಲ್ಲ ಸಹಕಾರಿಗಳು ನನ್ನ ಆಯ್ಕೆಯಲ್ಲಿ ಸಹಕಾರ ನೀಡಿದ್ದು, ರೈತರ ಹಿತಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚೇತನರಾಜ್ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ, ದಿನೇಶ್ ತಟ್ಟೆಕೊಪ್ಪ, ರವಿಕುಮಾರ್ ಎಚ್.ಎಂ., ಕೆ.ಹೊಳೆಯಪ್ಪ, ಚಂದ್ರಪ್ಪ, ರೂಪ ರಮೇಶ್, ಶ್ರೀನಿವಾಸ್, ವೀರೇಶ ಬರೂರು, ರಂಗನಾಥ್, ಜ್ಯೋತಿ ಸ್ವಾಮಿ, ರಾಜು ಪಟೇಲ್ ಇನ್ನಿತರರು ಹಾಜರಿದ್ದರು.
ರಾಜ್ಯದ ‘ಗ್ರಾಮೀಣ ಜನತೆ’ಗೆ ಮತ್ತೊಂದು ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ಗ್ರಾ.ಪಂ ವ್ಯಾಪ್ತಿಯಲ್ಲಿ ‘ಇ-ಸ್ವತ್ತು’