ಶಿವಮೊಗ್ಗ: ಜಿಲ್ಲೆಯ ಸಾಗರದ ಪ್ರತಿಷ್ಠಿತ ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಇಂದು ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಹಿರಿಯರ ಸ್ಮರಣೆ
ಸಾಗರದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಬೆಳೆಸಿದ ಮಹನೀಯರಾದ ಕುಲ್ಮೆ ಪಾಪಣ್ಣ, ಗಾಡಿ ಮರಿಯಪ್ಪ, ಬಿ.ಎಸ್. ಚಂದ್ರಶೇಖರ್, ಕೆ.ಎಂ. (ಕುರಿ) ನಿಂಗಪ್ಪ, ಭೋಜಪ್ಪ, ಯು.ಎಲ್. ಸುಭಾಷ್ ಚಂದ್ರ, ಸದಾಶಿವರಾವ್ ಬಾಪಾಟ್, ಎಸ್.ಎಸ್. ಕುಮಟಾ, ಕಮಲಾಕ್ಷ ಪಂಡಿತರು, ಜಿ.ಆರ್.ಜಿ. ನಗರ್, ಮನೋಭೂಮಿ ಶೆಟ್ಟಿ, ತುಳಜಪ್ಪಾ, ಅಹಮದ್ ಆಲಿ ಖಾನ್ ಹಾಗೂ ಓಮನ್ ಸಿಂಗ್ ಅವರ ಹೆಸರನ್ನು ಹಾಲಪ್ಪ ಅವರು ಸ್ಮರಿಸಿದರು. “ನಮ್ಮ ಈ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ಇಂದಿನ ಸಮಿತಿಯ ಜವಾಬ್ದಾರಿಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಗ್ಗಟ್ಟಿನ ಮಂತ್ರ
“ಪಕ್ಷ ಮತ್ತು ರಾಜಕೀಯ ಸಿದ್ಧಾಂತಗಳನ್ನು ಬದಿಗಿಟ್ಟು, ಎಲ್ಲರೂ ಒಂದಾಗಿ ಶ್ರೀ ಮಾರಿಕಾಂಬಾ ತಾಯಿಯ ಸೇವೆ ಮಾಡಬೇಕು. ಹಿರಿಯರಂತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಾಗರದ ಸುಂದರ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು” ಎಂದು ಅವರು ಸಲಹೆ ನೀಡಿದ್ದಾರೆ. ಸಾಗರದ ಜನರ ಭಾವನೆಗಳ ಕೇಂದ್ರವಾಗಿರುವ ಮಾರಿಕಾಂಬಾ ದೇವಸ್ಥಾನದ ಅಭಿವೃದ್ಧಿಗೆ ನೂತನ ಪದಾಧಿಕಾರಿಗಳು ಬದ್ಧತೆಯಿಂದ ಶ್ರಮಿಸಲಿ ಎಂದು ಹಾರೈಸಿದರು.
ಹಾಲಪ್ಪ ಅವರ ಈ ಕಾಳಜಿಯುಕ್ತ ಸಂದೇಶವು ನೂತನ ಸಮಿತಿಯ ಸದಸ್ಯರಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಹಿರಿಯರ ಆಶಯದಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಲು ಪ್ರೇರೇಪಿಸಿದೆ.
ಈ ಸಂದರ್ಭದಲ್ಲಿ ಮಾರಿಗುಡಿ ಸಮಿತಿಯ ನೂತನ ಅಧ್ಯಕ್ಷ ಪವಿತ್ರಾ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್, ಕಾರ್ಯದರ್ಶಿಗಳಾದಂತ ಪುರುಷೋತ್ತಮ್(ಪುಚ್ಚಿ), ಡಿಶ್ ಗುರು, ಖಜಾಂಚಿ ವಿ.ಶಂಕರ್(ಮಾಸ್ಟರ್ ಶಂಕರ್) ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
‘ಸಾಗರ ಮಾರಿಕಾಂಬಾ ದೇವಿ ನ್ಯಾಸ’ಕ್ಕೆ ನೂತನ ಸಾರಥ್ಯ: ನಾಗರಾಜ್, ಆನಂದ್ ನೇತೃತ್ವದಲ್ಲಿ ಅಭಿವೃದ್ಧಿಯ ಹೊಸ ಸಂಕಲ್ಪ!
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು: MLC ಬಲ್ಕಿಶ್ ಬಾನು
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು: MLC ಬಲ್ಕಿಶ್ ಬಾನು








