ತುಮಕೂರು: ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ತುಮಕೂರಲ್ಲಿ ಸಿಸೇರಿಯನ್ ಆದಂತ ಕೆಲವೇ ಗಂಟೆಯಲ್ಲಿ ಬಾಣಂತಿಯೊಬ್ಬಳು ಬಾಯಿ, ಮೂಗಲ್ಲಿ ರಕ್ತ ಸ್ತ್ರಾವದೊಂದಿಗೆ ಸಾವನ್ನಪ್ಪಿರುವಂತ ಘಟನೆ ತಿಪಟೂರು ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಬೆಂಗಳೂರಿನ ಡಿ.ಜೆ ಹಳ್ಳಿಯ ಮೋದಿ ರೋಡ್ ನಿವಾಸಿ ಫಿರ್ದೋಸ್(26) ತವರು ಮನೆಯಾದಂತ ತಿಪಟೂರಿನ ಗಾಂಧಿನಗರದ ತವರು ಮನೆಗೆ ಹೆರಿಗೆಗಾಗಿ ಬಂದಿದ್ದರು. ಡಿಸೆಂಬರ್.27ರಂದು ಹೆರಿಗೆಗಾಗಿ ತಿಪಟೂರು ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಮಧ್ಯರಾತ್ರಿ ಅವರಿಗೆ ಸಿಸೇರಿಯನ್ ಮಾಡಲಾಗಿತ್ತು.
ಸಿಸೇರಿಯನ್ ಮಾಡಿದ ಕೆಲವೇ ಗಂಟೆಯಲ್ಲಿ ಬಾಣಂತಿ ಫಿರ್ದೋಸ್ ಬಾಯಿ, ಮೂಗಿನಲ್ಲಿ ರಕ್ತಸ್ತ್ರಾವ ಉಂಟಾಗಿತ್ತು ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಳಿಕ ಬಾಣಂತಿ ಫಿರ್ದೋಸ್ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮೃತ ಸಚಿನ್ ನಿವಾಸಕ್ಕೆ ಬಿಜೆಪಿ ಮುಖಂಡ ನಿಯೋಗ ಭೇಟಿ: ಕುಟುಂಬಸ್ಥರಿಗೆ ಸಾಂತ್ವಾನ
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ