ಬೆಲ್ಗ್ರೇಡ್: ಸರ್ಕಾರದ ನೀತಿಗಳನ್ನು ವಿರೋಧಿಸಿ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಸರ್ಬಿಯಾದ ವಿರೋಧ ಪಕ್ಷದ ಪ್ರತಿನಿಧಿಗಳು ಮಂಗಳವಾರ ಸಂಸತ್ತಿನ ಒಳಗೆ ಹೊಗೆ ಗ್ರೆನೇಡ್ಗಳು ಮತ್ತು ಅಶ್ರುವಾಯು ಎಸೆದಿದ್ದಾರೆ. ಇದರಿಂದಾಗಿ ಸರ್ಬಿಯಾ ಸಂಸತ್ತಿನಲ್ಲಿ ಪ್ರಕ್ಷುಬ್ಧತೆ ನಿರ್ಮಾಣವಾಗಿದೆ.
ನಾಲ್ಕು ತಿಂಗಳ ಹಿಂದೆ ರೈಲು ನಿಲ್ದಾಣದ ಮೇಲ್ಛಾವಣಿ ಕುಸಿದು 15 ಜನರು ಸಾವನ್ನಪ್ಪಿದ ನಂತರ ಉಂಟಾದ ಪ್ರತಿಭಟನೆಗಳು ಸರ್ಬಿಯನ್ ಸರ್ಕಾರಕ್ಕೆ ಇನ್ನೂ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿವೆ. ಶಾಸಕಾಂಗ ಅಧಿವೇಶನದಲ್ಲಿ, ಸರ್ಬಿಯನ್ ಪ್ರೊಗ್ರೆಸ್ಸಿವ್ ಪಾರ್ಟಿ (ಎಸ್ಎನ್ಎಸ್) ನೇತೃತ್ವದ ಆಡಳಿತ ಮೈತ್ರಿಕೂಟವು ಕಾರ್ಯಸೂಚಿಯನ್ನು ಅನುಮೋದಿಸಿದ ನಂತರ, ಕೆಲವು ವಿರೋಧ ಪಕ್ಷದ ರಾಜಕಾರಣಿಗಳು ತಮ್ಮ ಆಸನಗಳಿಂದ ಹೊರಬಂದು ಸಂಸದೀಯ ಸ್ಪೀಕರ್ ಕಡೆಗೆ ಓಡಿ ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಿದರು.
ಇತರರು ಹೊಗೆ ಗ್ರೆನೇಡ್ಗಳು ಮತ್ತು ಅಶ್ರುವಾಯುವನ್ನು ಎಸೆದರು. ಈ ಎಲ್ಲವೂ ಲೈವ್ ಆಗಿ ಟಿವಿಯ ಮೂಲಕ ಪ್ರಸಾರವಾಯಿತು. ಹೀಗೆ ಪ್ರಸಾರವಾದಂತ ದೃಶ್ಯಾವಳಿಯಲ್ಲಿ ಕಪ್ಪು ಮತ್ತು ಗುಲಾಬಿ ಹೊಗೆಯನ್ನು ತೋರಿಸಿತು.
WATCH: Opposition lawmakers let off smoke grenades in the Serbian parliament
CREDIT: SERBIAN PARLIAMENT pic.twitter.com/T08Nz2X7ug
— Ajeet Kumar (@Ajeet1994) March 4, 2025
ಇಬ್ಬರು ಶಾಸಕರು ಗಾಯಗೊಂಡಿದ್ದು, ಎಸ್ಎನ್ಎಸ್ ಪಕ್ಷದ ಜಾಸ್ಮಿನಾ ಒಬ್ರಡೋವಿಕ್ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಪೀಕರ್ ಅನಾ ಬ್ರನಾಬಿಕ್ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಔಷಧಿ ಖರೀದಿಸುವಂತೆ ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್