ಮುಂಬೈ : ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಕೆಲವೇ ದಿನಗಳ ಮುನ್ನ ಜಾಗತಿಕ ಮಾರುಕಟ್ಟೆಗಳಲ್ಲಿನ ಏರಿಕೆ ಮತ್ತು ಆಶಾವಾದಿ ಹೂಡಿಕೆದಾರರ ಭಾವನೆಯೊಂದಿಗೆ ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಸೋಮವಾರ ಮೊದಲ ಬಾರಿಗೆ ಐತಿಹಾಸಿಕ 76,000 ಗಡಿಯನ್ನು ದಾಟಿದೆ ಮತ್ತು ಎನ್ಎಸ್ಇ ನಿಫ್ಟಿ ತನ್ನ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಮಧ್ಯಾಹ್ನದ ವಹಿವಾಟಿನಲ್ಲಿ 599.29 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 76,009.68 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 153.7 ಪಾಯಿಂಟ್ಸ್ ಏರಿಕೆಗೊಂಡು 23,110.80 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಷೇರುಗಳ ಪೈಕಿ ಇಂಡಸ್ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಲಾರ್ಸನ್ ಅಂಡ್ ಟೂಬ್ರೊ ಮತ್ತು ಐಸಿಐಸಿಐ ಬ್ಯಾಂಕ್ ಪ್ರಮುಖ ಲಾಭ ಗಳಿಸಿದವು.
ವಿಪ್ರೋ, ಎನ್ ಟಿಪಿಸಿ, ಮಾರುತಿ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿದವು. ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಸಕಾರಾತ್ಮಕ ಪ್ರದೇಶದಲ್ಲಿ ವಹಿವಾಟು ನಡೆಸುತ್ತಿವೆ.