ಶಿವಮೊಗ್ಗ: ಇಂದು ರಾಜ್ಯ ಸರ್ಕಾರದಿಂದ ದಾವಣಗೆರೆ ವಿಶ್ವವಿದ್ಯಾಲಯದ ಸಿಡಿಕೇಟ್ ನಾಮನಿರ್ದೇಶಿತ ಸದಸ್ಯರನ್ನಾಗಿ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಜಿ.ಕೆ ಪ್ರೇಮ ಅವರನ್ನು ನೇಮಿಸಿ ಆದೇಶಿಸಿದೆ. ಇಂತಹ ಹುದ್ದೆಗೆ ನೇಮಕಗೊಂಡ ಡಾ.ಜಿ.ಕೆ ಪ್ರೇಮ ಅವರಿಗೆ ಹಿರಿಯ ಪತ್ರಕರ್ತ ಚಾರ್ವಕ ರಾಘವೇಂದ್ರ ಅವರು ಅಭಿನಂದನೆ, ಶುಭಾಶಯವನ್ನು ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು,ಡಾ. ಜಿ.ಕೆ. ಪ್ರೇಮಾ ಅವರು ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ ಆಗಿರುವುದು ತಿಳಿದು ಬಹಳ ಸಂತೋಷವಾಗಿದೆ. ಪ್ರೇಮಾ ಅವರು ನನಗೆ ಪರಿಚಯವಾಗಿದ್ದು ಜನ ಚಳವಳಿ ಸಂದರ್ಭದಲ್ಲಿ ಆಗಿದೆ. ಜನಪರ ಜೀವಪರ ಚಳವಳಿ ಎಲ್ಲೆ ನಡೆದರು ಪ್ರೇಮಾ ಇರುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ.
ಸದ್ಯ ಪ್ರೇಮಾ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಟೀಚರ್ ಕೂಡ. ಬಹಳ ಹಿಂದುಳಿದ ಕಾಡುಗೊಲ್ಲ ಸಮುದಾಯದಿಂದ ಬಂದಂತ ಇವರು, ತಾವು ಹುಟ್ಟಿದ ಸಮುದಾಯದಲ್ಲಿ ಮಹಿಳೆಯರ ಕುರಿತು ಇರುವ ಮೌಡ್ಯವನ್ನು ಕಿತ್ತೊಗೆಯಲು ಈಗಲೂ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಡಾ.ಜಿ.ಕೆ ಪ್ರೇಮ ಅವರ ಪ್ರಯತ್ನಕ್ಕೆ ನಾವೆಲ್ಲ ಸಾಥ್ ಕೋಡಲೇ ಬೇಕು. ಪ್ರೇಮಾರಂತವರು ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯರಾಗಲು ಸವೆಸಿದ ಹಾದಿ ಹೂವಿನದ್ದು ಅಲ್ಲ. ಅದು ಕಲ್ಲು ಮುಳ್ಳಿನ ಹಾದಿ. ಇವರು ಶಿಕ್ಷಣ ಸಂಘಟನೆ ಮತ್ತು ಸಾಮಾಜಿಕ ಬದಲಾವಣೆಗಾಗಿ ಮಾಡಿದ ಹೋರಾಟಕ್ಕೆ ಒಂದು ಸಣ್ಣ ಅವಕಾಶ. ಅವರು ಈ ಹುದ್ದೆಯನ್ನು ಬಹಳ ಪರಿಣಾಮಕಾರಿಯಾಗಿ ನಿರ್ವಹಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ದಮನಿತ ಸಮುದಾಯವರ ಪರವಾಗಿ ನಿರಂತರ ಕೆಲಸ ಮಾಡುತ್ತಾ ಬಂದಿರುವ ಪ್ರೇಮಾ ಅವರಿಗೆ ಅಂಭಿನಂದೆನೆಗಳು, ಶುಭಾಶಯಗಳು ಅಂತ ತಿಳಿಸಿದ್ದಾರೆ.