ದಾವಣಗೆರೆ: ಭಾನುವಾರದಂದು ನಿಧನರಾದಂತ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು. ಈ ಬೆನ್ನಲ್ಲೇ ಡಿಸೆಂಬರ್.26ರಂದು ಕೈಲಾಸ ಶಿವ ಗಣರಾಧನೆ ನಡೆಯಲಿದೆ.
ಈ ಕುರಿತಂತೆ ಶಾಮನೂರು ಕುಟುಂಬದಿಂದ ದಿನಾಂಕ ಪ್ರಕಟಿಸಲಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕೈಲಾಸ ಶಿವ ಗಣರಾಧನೆಯನ್ನು ಡಿಸೆಂಬರ್.26ರಂದು ನಡೆಸುವುದಾಗಿ ತಿಳಿಸಿದೆ.
ಡಿಸೆಂಬರ್.26, 2025ರಂದು ಮಧ್ಯಾಹ್ನ 12.30ಕ್ಕೆ ಕೈಲಾಸ ಶಿವಗಣರಾಧನೆ ನೆರವೇರಿಸಲಾಗುತ್ತದೆ. ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ಶಿವಗಣರಾಧನೆ ನೆರವೇರಿಸುವುದಾಗಿ ಪುತ್ರ ಬಕ್ಕೇಶ್, ಗಣೇಶ್, ಮಲ್ಲಿಕಾರ್ಜನ್ ಕುಟುಂಬ ಆಹ್ವಾನಿಸಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಶಿವಶಂಕರಪ್ಪ ಅಂತ್ಯಕ್ರಿಯೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವೈಕ್ಯ
ನೀವು ಈ ತಪ್ಪು ಮಾಡ್ತಿದ್ದೀರಾ.? ಎಚ್ಚರ, ನಿಮ್ಮ ‘IRCTC’ ಖಾತೆ ಬ್ಯಾನ್ ಆಗುತ್ತೆ! 3 ಕೋಟಿಗೂ ಹೆಚ್ಚು ಖಾತೆ ನಿರ್ಬಂಧ








