ಮಂಡ್ಯ: ಜಿಲ್ಲೆಯಲ್ಲಿ ಡೈರಿಯಲ್ಲೇ ಕಾರ್ಯದರ್ಶಿಯೊಬ್ಬ ಹಾಲಿಗೆ ನೀರು ಬೆರೆಸಿ ಕೃತ್ಯವೆಸಗಿದ್ದಾರೆ. ಹೀಗಾಗಿ ಗ್ರಾಮವೊಂದರಲ್ಲಿನ ಬಿಎಂಸಿ ಕೇಂದ್ರದ ಮಾನ್ಯತೆಯನ್ನೇ ರದ್ದುಗೊಳಿಸಿ ಮನ್ಮುಲ್ ಆದೇಶಿಸಿದೆ. ಹೀಗೆ ನೀರು ಹಾಲಿಗೆ ನೀರು ಬೆರೆಸಿ ಕಳ್ಳಾಟ ಮೆರೆದಿರುವ ಕೃತ್ಯದ ವೀಡಿಯೋ ವೈರಲ್ ಆಗಿದೆ.
ಹೌದು.ವಹಾಲಿನ ಡೈರಿಯಲ್ಲಿ ಕಾರ್ಯದರ್ಶಿ ಹಾಲಿಗೆ ನೀರು ಬೆರಸಿ ಕಳ್ಳಾಟ ಬದಲಾಗಿದೆ. ಮನ್ಮುಲ್ ನಿಂದ ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ಬಿ.ಎಂ.ಸಿ.ಕೇಂದ್ರ ರದ್ದು ಮಾಡಿ ಆದೇಶ ಮಾಡಿದೆ.
ಮನ್ಮುಲ್ ನಿಂದ BMC ಕೇಂದ್ರ ರದ್ದು ಆದೇಶಕ್ಕೆ ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದಾರೆ. ನೀರು ಬೆರಸಿದ ಕಾರ್ಯದರ್ಶಿ ವಜಾ ಮಾಡಿ BMC ಕೇಂದ್ರ ಉಳಿಸಿ ಕೊಡುವಂತೆ ಗ್ರಾಮದ ಹಾಲು ಉತ್ಪಾದಕರ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಈ ವೇಳೆ ಕಾರ್ಯದರ್ಶಿ ಶಿವರಾಜ್ ಸಂಬಂಧಿಕರಿಂದ ವೆಂಕಟರಾಮು ಎಂಬ ಯುವಕನ ಮೇಲೆ ಹಲ್ಲೆ ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಕಾರ್ಯದರ್ಶಿ ಶಿವರಾಜ್ ಹಾಲಿಗೆ ನೀರು ಬೆರಸ್ತಿರೋ ವಿಡಿಯೋವನ್ನು ವೈರಲ್ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರೋದಾಗಿ ತಿಳಿದು ಬಂದಿದೆ.
ಕಳೆದ ತಿಂಗಳು ಈ BMC ಕೇಂದ್ರದಲ್ಲಿ ಕಾರ್ಯದರ್ಶಿ ಹಾಲಿಗೆ ನೀರು ಬೆಸ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್ ಆಗಿತ್ತು. ಈ ವೈರಲ್ ಆದ ಬಳಿಕವು ಆಡಳಿತ ಮಂಡಳಿ ಆತನ ವಿರುದ್ದ ಕ್ರಮ ಕೈಗೊಳ್ಳದೆ ಮುಂದುವರೆಸಿತ್ತು.
ಆತನ ವಿರುದ್ದ ಕ್ರಮ ಕೈಗೊಳ್ಳುವ ಬದಲು ಆ ಗ್ರಾಮದ BMC ಘಟಕ ರದ್ದು ಮಾಡಿತ್ತು.
ಇದರಿಂದ ರೊಚ್ಚಿಗೆದ್ದ ಹಾಲು ಉತ್ಪಾದಕರು ಡೈರಿ ಮುಂದೆ ಪ್ರತಿಭಟನೆ ಮಾಡ್ತಿದ್ರು.
ಇದರಿಂದ ಕುಪಿತಗೊಂಡ ಕಾರ್ಯದರ್ಶಿ ಶಿವರಾಜು ಹಾಗು ಸಂಬಂಧಿಕರು ಪ್ರತಿಭಟನೆ ಮಾಡ್ತಿದ್ದ ವೆಂಕಟರಾಮು ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಲಾಗಿದೆ. ಹೀಗೆ ಹಲ್ಲೆ ನಡೆಸಿದ ಶಿವರಾಜು ಸೇರಿ ಸಂಬಂಧಕರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ








