Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಂದೇ ಭಾರತ್’ನಲ್ಲಿ ಕಳಪೆ ಆಹಾರ ನೀಡಿದ ‘IRCTC’ಗೆ ಬಿಗ್ ಶಾಕ್ ; 10 ಲಕ್ಷ ರೂ. ದಂಡ ವಿಧಿಸಿ ಭಾರತೀಯ ರೈಲ್ವೆ ಆದೇಶ

25/03/2026 10:23 PM

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು

25/03/2026 10:02 PM

‘ನಮ್ಮದು ಪಾಕಿಸ್ತಾನದಂತೆ ‘ದಲ್ಲಾಳಿ’ ದೇಶವಲ್ಲ’ ; ಸರ್ವಪಕ್ಷ ಸಭೆಯಲ್ಲಿ ‘ಜೈಶಂಕರ್’ ಹೀಗೆ ಹೇಳಿದ್ಹೇಕೆ.?

25/03/2026 9:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕನ್ನಡದಲ್ಲಿ ‘ವಿಜ್ಞಾನ’ದ ರಸದೌತಣ: ‘ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌’ನಿಂದ ವಿಶೇಷ ಅಭಿಯಾನ!
KARNATAKA

ಕನ್ನಡದಲ್ಲಿ ‘ವಿಜ್ಞಾನ’ದ ರಸದೌತಣ: ‘ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌’ನಿಂದ ವಿಶೇಷ ಅಭಿಯಾನ!

By kannadanewsnow0911/11/2025 8:27 PM

ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿರುವ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ (ParSEC) ಈ ತಿಂಗಳು ಪೂರ್ತಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ಕೇಂದ್ರಕ್ಕೆ ಭೇಟಿ ನೀಡುವ ಎಲ್ಲ ಸಂದರ್ಶಕರಿಗೆ ಗ್ಯಾಲರಿಯಲ್ಲಿನ ವಿಜ್ಞಾನದ ಕೌತುಕಗಳನ್ನು ಕನ್ನಡ ಭಾಷೆಯಲ್ಲಿಯೇ ಮನಮುಟ್ಟುವಂತೆ ವಿವರಿಸಲಾಗುತ್ತದೆ. ವಿಜ್ಞಾನದ ವಿಷಯಗಳನ್ನು ಹೆಚ್ಚು ಆಕರ್ಷಕವಾಗಿಸಲು ಸಿಬ್ಬಂದಿ ವರ್ಗವು ಸಂದರ್ಶಕರೊಂದಿಗೆ ಸಂವಾದ ನಡೆಸಲಿದೆ. ಉದಾಹರಣೆಗೆ, ‘ನೀವೇನಾದರೂ ಕನ್ನಡದಲ್ಲಿ ಒಂದು ನುಡಿಗಟ್ಟು ಹೇಳಿದರೆ, ಅದರ ಹಿಂದಿನ ವಿಜ್ಞಾನದ ಹಿನ್ನೆಲೆ (Science behind it) ನಿಮಗೆ ಗೊತ್ತೇ?’ ಅಥವಾ ‘ಕರ್ನಾಟಕದಲ್ಲಿ ಬಳಕೆಯಲ್ಲಿರುವ ಯಾವುದಾದರೂ ತಂತ್ರಜ್ಞಾನದ ಹಿಂದಿನ ವಿಜ್ಞಾನವೇನು?’ ಎಂದು ಪ್ರಶ್ನಿಸುವ ಮೂಲಕ ಅವರನ್ನು ವಿಷಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಈ ರೀತಿಯಾಗಿ ವಿಜ್ಞಾನವನ್ನು ಕನ್ನಡದೊಂದಿಗೆ ಬೆಸೆಯುವ ಪ್ರಯತ್ನ ನಡೆಯಲಿದೆ.

ವಾರಾಂತ್ಯದಲ್ಲಿ ವಿಜ್ಞಾನದ ವಿಶೇಷ ಕಾರ್ಯಾಗಾರಗಳು!

ಕೇವಲ ಗ್ಯಾಲರಿ ವಿವರಣೆಗೆ ಸೀಮಿತವಾಗದೇ, ಮಕ್ಕಳು ಹಾಗೂ ಸಂದರ್ಶಕರಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಹೆಚ್ಚಿಸಲು ಪ್ರತಿ ಶನಿವಾರ ಮತ್ತು ಭಾನುವಾರ ಎರಡು ಮುಖ್ಯ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಹಾಜರಾಗಲು ‘ಬುಕ್ ಮೈ ಶೋ’ (Book My Show) ಮೂಲಕ ಟಿಕೆಟ್ ಕಾಯ್ದಿರಿಸಬಹುದು.

1. ಟೆಕ್ಸ್‌ಟೈಲ್ಸ್ ವರ್ಕ್‌ಶಾಪ್ (ಬಟ್ಟೆಗಳಿಗೆ ಕಲರಿಂಗ್):

ಈ ಕಾರ್ಯಾಗಾರದಲ್ಲಿ ಬಟ್ಟೆಗಳಿಗೆ ವಿಭಿನ್ನ ಬಣ್ಣಗಳನ್ನು ನೀಡುವುದು (ಕಲರ್ ಪೇಂಟ್ ಮಾಡುವುದು) ಸೇರಿದಂತೆ, ಸಿಲ್ಕ್‌ನಂತಹ ಮೆಟೀರಿಯಲ್‌ಗಳು ಎಲ್ಲಿಂದ ಬಂದಿವೆ? ಅವುಗಳ ಹಿಂದಿನ ವಿಜ್ಞಾನವೇನು? ಎಂಬುದನ್ನು ಕನ್ನಡದಲ್ಲಿ ಪ್ರಾಯೋಗಿಕವಾಗಿ ವಿವರಿಸಲಾಗುತ್ತದೆ. 2. ಸೈನ್ಸ್ ಆಫ್ ಸೌಂಡ್ (ಧ್ವನಿಯ ವಿಜ್ಞಾನ):

ಈ ಕಾರ್ಯಕ್ರಮವು ಕನ್ನಡ ಭಾಷೆಯನ್ನು ವಿಜ್ಞಾನದೊಂದಿಗೆ ವಿಶಿಷ್ಟವಾಗಿ ಸಂಯೋಜಿಸುತ್ತದೆ. ಕನ್ನಡದಲ್ಲಿನ ಭಾಷೆಗಳ ವ್ಯತ್ಯಾಸಗಳು ಮತ್ತು ಬರೆಯುವ ಶೈಲಿಯ ವೈಜ್ಞಾನಿಕ ಹಿನ್ನೆಲೆಯನ್ನು ಧ್ವನಿ ವಿಜ್ಞಾನಕ್ಕೆ ಜೋಡಿಸಿ ಕಲಿಸಿಕೊಡಲಾಗುತ್ತದೆ.

ಈ ಕಾರ್ಯಾಗಾರಗಳು ಪ್ರತಿ ವಾರಾಂತ್ಯದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತವೆ. ಒಂದು ವಾರ ಕಾರ್ಯಕ್ರಮ ತಪ್ಪಿಸಿಕೊಂಡವರು ಮುಂದಿನ ವಾರವೂ ಇದೇ ಕಾರ್ಯಾಗಾರಗಳಿಗೆ ಹಾಜರಾಗಲು ಇದು ಅನುಕೂಲ ಕಲ್ಪಿಸುತ್ತದೆ.

ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನ ವಿಶೇಷತೆ ಏನು?

ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್ (ParSEC) ಎಂಬುದು ಬೆಂಗಳೂರಿನ ಜಯನಗರದ 7ನೇ ಬ್ಲಾಕ್‌ನಲ್ಲಿರುವ ಪ್ರಾಯೋಗಿಕ ವಿಜ್ಞಾನ ಕಲಿಕಾ ಕೇಂದ್ರವಾಗಿದೆ. ವಿಜ್ಞಾನದ ತತ್ವಗಳನ್ನು ಪ್ರಾಯೋಗಿಕವಾಗಿ ಮತ್ತು ವಿನೋದಮಯವಾಗಿ ಅರಿಯಲು ಅವಕಾಶ ಕಲ್ಪಿಸುವ ನಾವೀನ್ಯತಾ ಕೇಂದ್ರವಾಗಿದೆ. ಇಲ್ಲಿ ಕೈನೆಟಿಕ್, ಟ್ಯಾಕ್ಟೈಲ್‌, ಡಿಜಿಟಲ್, ವಿಮಾನ, ಇಲ್ಯೂಷನ್, ಇಂಟ್ರೊಡಕ್ಷನ್ ಎಂಬ ಆರು ಮುಖ್ಯ ಗ್ಯಾಲರಿಗಳಿದ್ದು, ಒಟ್ಟು 80ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳಿವೆ. ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಅಡಗಿದೆ ಎಂಬುದನ್ನು ಇಲ್ಲಿ ಎಲ್ಲ ವಯೋಮಾನದವರೂ ತಿಳಿದುಕೊಳ್ಳಬಹುದು.

ಚನ್ನೇನಹಳ್ಳಿಯಲ್ಲಿ ಅತಿದೊಡ್ಡ ಮಲ್ಟಿ ಎಕ್ಸ್‌ಪೀರಿಯನ್ಸ್‌ ಸೆಂಟರ್‌!

ಬೆಂಗಳೂರಿನ ಮಾಗಡಿರಸ್ತೆಯ ಚನ್ನೇನಹಳ್ಳಿಯಲ್ಲಿ ಸುಮಾರು 15 ಎಕರೆ ಜಾಗದಲ್ಲಿ ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಈ ಕೇಂದ್ರವು, ಭಾರತದಲ್ಲಿ ರೂಪುಗೊಳ್ಳುತ್ತಿರುವ ಅತಿದೊಡ್ಡ ಮಲ್ಟಿ ಎಕ್ಸ್‌ಪೀರಿಯನ್ಸ್‌ ತಾಣವಾಗಿದೆ. ಇದು ವಿಜ್ಞಾನ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವೇದಿಕೆಯನ್ನು ಒದಗಿಸಿ ಕೊಡಲಿದೆ. ಇಲ್ಲಿ, ವೈಜ್ಞಾನಿಕ ಆವಿಷ್ಕಾರಗಳೂ, ಸಾಂಸ್ಕೃತಿಕ ಕಲಿಕಾ ಸೌಲಭ್ಯಗಳೂ ಇರಲಿವೆ. ಅಲ್ಲದೇ, ಇವೆಲ್ಲದ್ದಕ್ಕೂ ಏಷ್ಯಾದಲ್ಲಿಯೇ ಅತ್ಯುತ್ಕೃಷ್ಟ (Excellent) ಸೌಲಭ್ಯಗಳನ್ನು ಹೊಂದಿರುವ ತಾಣವಾಗಲಿದೆ. ಹೀಗಾಗಿ, “ಪರಮ್” ಕಲಿಕೆಗೂ, ಮನೋರಂಜನಾತ್ಮಕ ಚಟುವಟಿಕೆಗಳಿಗೂ ಬೃಹತ್‌ ಕೇಂದ್ರ ತಾಣವಾಗಿ ರೂಪುಗೊಳ್ಳುತ್ತಿದೆ. ಪರಮ್‌ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಭವನ, ಪ್ರದರ್ಶನ ಭವನ, ವಿಜ್ಞಾನ ಕೇಂದ್ರ ಹಾಗೂ ಅತ್ಯುತ್ತಮ ಸೌಲಭ್ಯಗಳುಳ್ಳ ಅತಿಥಿ ಗೃಹಗಳು ನಿರ್ಮಾಣಗೊಳ್ಳುತ್ತಿವೆ. ಈ ಕೇಂದ್ರದ ಮೂಲಕ ಸೇವಾ ಸಂಸ್ಥೆಯು ಯುವ ಮನಸ್ಸುಗಳಿಗೆ ಆಧುನಿಕ ವಿಜ್ಞಾನ (Modern Science) ಮತ್ತು ಭಾರತೀಯ ಪ್ರಾಚೀನ ವಿಜ್ಞಾನ (Ancient Indian Science) , ಇತಿಹಾಸ, ಸಂಸ್ಕೃತಿ, ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ಹೊಂದಿದೆ.

BREAKING: ದೆಹಲಿ ಕಾರು ಸ್ಪೋಟ ಪ್ರಕರಣ: ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ – ಸಿಎಂ ರೇಖಾ ಗುಪ್ತ ಘೋಷಣೆ

GOOD NEWS: ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಫೇಸ್ ಲೆಸ್, ಸಂಪರ್ಕರಹಿತ, ಆನ್ ಲೈನ್ ‘ಇ-ಖಾತಾ ವ್ಯವಸ್ಥೆ’ ಜಾರಿ

Share. Facebook Twitter LinkedIn WhatsApp Email

Related Posts

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು

25/03/2026 10:02 PM1 Min Read

ಸಾಗರದ ‘RCB ಫ್ಯಾನ್ಸ್‌’ಗೆ ಶಾಸಕ ಬೇಳೂರು ‘ಬೌಂಡರಿ’ ಗಿಫ್ಟ್: ಪ್ರತಿ ‘RCB ಪಂದ್ಯ’ ವೀಕ್ಷಣೆಗೂ ‘ಎಲ್ಇಡಿ’ ವ್ಯವಸ್ಥೆ, ಲೈವ್ ಕ್ರೇಜ್!

25/03/2026 8:46 PM2 Mins Read

ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣದ ಹೆಸರಲ್ಲಿ ಪ್ರಾಣದ ಜೊತೆ ಚೆಲ್ಲಾಟ: ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ

25/03/2026 8:32 PM2 Mins Read
Recent News

BREAKING : ವಂದೇ ಭಾರತ್’ನಲ್ಲಿ ಕಳಪೆ ಆಹಾರ ನೀಡಿದ ‘IRCTC’ಗೆ ಬಿಗ್ ಶಾಕ್ ; 10 ಲಕ್ಷ ರೂ. ದಂಡ ವಿಧಿಸಿ ಭಾರತೀಯ ರೈಲ್ವೆ ಆದೇಶ

25/03/2026 10:23 PM

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು

25/03/2026 10:02 PM

‘ನಮ್ಮದು ಪಾಕಿಸ್ತಾನದಂತೆ ‘ದಲ್ಲಾಳಿ’ ದೇಶವಲ್ಲ’ ; ಸರ್ವಪಕ್ಷ ಸಭೆಯಲ್ಲಿ ‘ಜೈಶಂಕರ್’ ಹೀಗೆ ಹೇಳಿದ್ಹೇಕೆ.?

25/03/2026 9:23 PM

BREAKING : ದೊಡ್ಡಣ್ಣನ ಆರ್ಡರ್’ಗೆ ಡೋಂಟ್ ಕೇರ್ ; ‘ಈ 5 ಷರತ್ತು ಒಪ್ಪಿದ್ರೆ ಮಾತ್ರ ಯುದ್ಧ ಅಂತ್ಯ’ ಎಂದ ಇರಾನ್!

25/03/2026 9:11 PM
State News
KARNATAKA

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು

By kannadanewsnow0925/03/2026 10:02 PM KARNATAKA 1 Min Read

ನವದೆಹಲಿ: ರಾಜ್ಯದ ಪ್ರಾದೇಶಿಕ ರೈಲು ಸಂಪರ್ಕಕ್ಕೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಮೈಸೂರು-ಕೆಎಸ್ಆರ್ ಬೆಂಗಳೂರು ನಡುವೆ ನಿತ್ಯವು ಸಂಚರಿಸಲಿರುವ ಒಡೆಯರ್…

ಸಾಗರದ ‘RCB ಫ್ಯಾನ್ಸ್‌’ಗೆ ಶಾಸಕ ಬೇಳೂರು ‘ಬೌಂಡರಿ’ ಗಿಫ್ಟ್: ಪ್ರತಿ ‘RCB ಪಂದ್ಯ’ ವೀಕ್ಷಣೆಗೂ ‘ಎಲ್ಇಡಿ’ ವ್ಯವಸ್ಥೆ, ಲೈವ್ ಕ್ರೇಜ್!

25/03/2026 8:46 PM

ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣದ ಹೆಸರಲ್ಲಿ ಪ್ರಾಣದ ಜೊತೆ ಚೆಲ್ಲಾಟ: ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ

25/03/2026 8:32 PM

ALERT : `ಸೆಕ್ಸ್’ ಬಳಿಕ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಲೇಬೇಡಿ !

25/03/2026 8:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.