ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ( Heavy Rain ) ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮನೆಯಿಂದ ಹೊರ ಬರಲಾದಂತ ಪರಿಸ್ಥಿತಿ ಜಿಲ್ಲೆಯ ಅನೇಕ ತಾಲೂಕಿನಲ್ಲಿ ಉಂಟಾಗಿದೆ. ಈ ಪರಿಣಾಮ ನಾಳೆ ಮತ್ತು ನಾಡಿದ್ದು ಚಿಕ್ಕಮಗಳೂರು ಜಿಲ್ಲೆಯ ಆರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ( School and College ) ರಜೆಯನ್ನು ಘೋಷಣೆ ಮಾಡಲಾಗಿದೆ.

ಬಳ್ಳಾರಿ ಕರ್ನಾಟಕದಲ್ಲೇ ಇರಬೇಕಾದರೆ ನಾಡೋಜ ಡಾ.ಕೋ.ಚೆನ್ನಬಸಪ್ಪನವರು ಕಾರಣ- ಡಾ.ಮಹೇಶ ಜೋಶಿ ಅಭಿಮತ

ಈ ಸಂಬಂಧ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇನ್ನೂ ಎರಡು ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ 6 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆಯನ್ನು ( School Holiday ) ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಗುಂಬೆ ಘಾಟ್ ನಲ್ಲಿ ಗುಡ್ಡ ಕುಸಿತ: ಉಡುಪಿ-ಶಿವಮೊಗ್ಗ ಹೆದ್ದಾರಿ ಸಂಚಾರ ಬಂದ್ | Agumbe Ghat

ಅಂದಹಾಗೇ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಎನ್ ಆರ್ ಪುರ ಹಾಗೂ ಶೃಂಗೇರಿ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ನಾಳೆ ಮತ್ತು ನಾಡಿದ್ದು ರಜೆಯನ್ನು ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವಹಿಸುವಂತೆಯೂ ತಿಳಿಸಲಾಗಿದೆ.

Share.
Exit mobile version