ಶಿವಮೊಗ್ಗ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನರು ತತ್ತರಿಸಿ ಹೋಗಿದ್ದಾರೆ. ಧಾರಾಕಾರ ಮಳೆಯ ಹಿನ್ನಲೆಯಲ್ಲಿ ಆಗುಂಬೆ ಘಾಟ್ ನ ( Agumbe Ghat ) 10ನೇ ತಿರುವಿನಲ್ಲಿ ಗುಡ್ಡ ಕುಸಿತಗೊಂಡಿದೆ. ಈ ಪರಿಣಾಮ ಉಡುಪಿ-ಶಿವಮೊಗ್ಗ ಹೆದ್ದಾರಿ ( Udupi-Shimoga highway ) ಸಂಚಾರ ಬಂದ್ ಆಗಿದೆ.

ಬಳ್ಳಾರಿ ಕರ್ನಾಟಕದಲ್ಲೇ ಇರಬೇಕಾದರೆ ನಾಡೋಜ ಡಾ.ಕೋ.ಚೆನ್ನಬಸಪ್ಪನವರು ಕಾರಣ- ಡಾ.ಮಹೇಶ ಜೋಶಿ ಅಭಿಮತ

ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ 10ನೇ ತಿರುವಿನಲ್ಲಿ ಗುಡ್ಡ ಕುಸಿತಗೊಂಡಿದೆ. ರಸ್ತೆಯ ಮೇಲೆ ಮಣ್ಣು, ಮರ ಬಿದ್ದ ಪರಿಣಾಮ, ಉಡುಪಿ-ಶಿವಮೊಗ್ಗ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.

ಶಿವಮೊಗ್ಗ: ಧಾರಾಕಾರ ಮಳೆಗೆ ಗುಡ್ಡ ಕುಸಿತ, ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿ ಗದ್ದೆ, ತೋಟ ನಾಶ

ಇದೀಗ ಜೆಸಿಬಿ ಬಳಸಿ ರಸ್ತೆಯ ಮೇಲೆ ಕುಸಿತಗೊಂಡಿರುವಂತ ಮಣ್ಣು, ಮರವನ್ನು ತೆರವು ಮಾಡೋ ಕಾರ್ಯಾಚರಣೆ ನಡೆಯುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಹೆದ್ದಾರಿ ಸಂಚಾರಕ್ಕೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Share.
Exit mobile version