ರಾಯಚೂರು: ಮಳೆಗಾಲದಲ್ಲಿ ಶಿಥಿಲಾವಸ್ಥೆಯಲ್ಲಿರುವಂತ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬಾರದು. ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಅಂತ ಶಿಕ್ಷಣ ಇಲಾಖೆ ಖಡಕ್ ಸೂಚಿಸಿದೆ. ಇದರ ನಡುವೆ ರಾಯಚೂರಲ್ಲಿ ಶಿಥಿಲಾವಸ್ಥೆಯ ಶಾಲಾ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ವೇಳೆಯಲ್ಲಿ, ಮೇಲ್ಛಾವಣಿ ಕುಸಿದು ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಪಾತಾಪುರ ಗ್ರಾಮದಲ್ಲಿ, ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿತಗೊಂಡಿದೆ. ಮಳೆಯಿಂದ ನೆನೆದು, ಶಿಥಿಲಗೊಂಡಿದ್ದಂತ ಶಾಲಾ ಮೇಲ್ಛಾವಣಿ ಇಂದು ಕುಸಿತಗೊಂಡಿದೆ.
ಈ ಘಟನೆಯಲ್ಲಿ ಶಾಲೆಯಲ್ಲಿ ವ್ಯಾಸಂಗದಲ್ಲಿ ತೊಡಗಿದ್ದಂತ ಹಲವು ವಿದ್ಯಾರ್ಥಿಗಳ ತಲೆ, ಕೈಗಳಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಯ ನಂತ್ರ ಶಾಲೆಗೆ ಬಿಇಓ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಶಿಥಿಲಾವಸ್ಥೆಯಲ್ಲಿರುವಂತ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡದೇ, ತಾತ್ಕಾಲಿಕವಾಗಿ ತರಗತಿಗಳನ್ನು ಗ್ರಾಮದ ಕರಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸುವಂತೆ ಸೂಚಿಸಿದ್ರು.
BIG NEWS: ಯಡಿಯೂರಪ್ಪ ವಿರುದ್ಧ ‘CID ಕ್ರಮ’ ಕೈಗೊಳ್ಳುತ್ತಿರುವುದನ್ನು ನೋಡಿ ಸಂತೋಷವಾಗಿದೆ: ನಟ ಚೇತನ್