ಬೆಂಗಳೂರು: 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದಂತ ವಿದ್ಯಾರ್ಥಿಗಳಿಗೆ ನಡೆಸಲು ನಿಗದಿ ಪಡಿಸಿದ್ದಂತ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.
ಇಂದು ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣ ವಿಭಾಗದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಅದರಲ್ಲಿ 2024ರ ಮಾರ್ಚ್-ಏಪ್ರಿಲ್ ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ಹಾಗೂ C ಮತ್ತು (+ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಲು ತಯಾರಿಗೊಳಿಸಲು ಆಯಾ ಶಾಲೆಯ ವಿಷಯ ಬೋಧನಾ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು DO:15.05.2024 ರಿಂದ ದಿನಾಂಕ:05.06.2024ರವರೆಗೆ ನಡೆಸಲು ಸುತ್ತೋಲೆ ಹೊರಡಿಸಲಾಗಿತ್ತು ಎಂದಿದ್ದಾರೆ.
ಸದರಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಸರ್ಕಾರದ ಸೂಚನೆಗಳನ್ವಯ ಮುಂದೂಡಲಾಗಿದ್ದು, ಇವುಗಳನ್ನು ದಿನಾಂಕ: 29/05/2024 ರಿಂದ ದಿನಾಂಕ: 13/06/2024 ರವರೆಗೆ ನಡೆಸಲು ತಿಳಿಸಿದೆ. 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ -02ನ್ನು ದಿನಾಂಕ: 14/06/2024 ರಿಂದ ಪ್ರಾರಂಭಿಸಲಾಗುವುದು. ಸದರಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಇವರು ಪ್ರತ್ಯೇಕವಾಗಿ ಹೊರಡಿಸುತ್ತಾರೆ ಎಂದು ತಿಳಿಸಿದ್ದಾರೆ.
BIG NEWS: ‘ಹಾಸನ ಪೆನ್ ಡ್ರೈವ್ ಕೇಸ್’ಗೆ ಬಿಗ್ ಟ್ವಿಸ್ಟ್: ಡಿಕೆಶಿ ವಿರುದ್ಧ ದೇವರಾಜೇಗೌಡ ಈ ಗಂಭೀರ ಆರೋಪ