ಬೆಂಗಳೂರು: 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಕ್ರಿಯೆ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ದಿನಾಂಕ:21.09.2023ರನ್ವಯ 2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರೀಕ್ಷೆ-1, ಪರೀಕ್ಷೆ-2 ಮತ್ತು ಪರೀಕ್ಷೆ-3 ಎಂದು ಹೆಸರಿಸಿ. ಹಂತ ಹಂತವಾಗಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದಿದೆ.
2025ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಪ್ರೌಢ ಶಾಲಾ/ ಕಾಲೇಜುಗಳಿಂದ (ಪ್ರೌಢ ಶಾಲಾ ವಿಭಾಗ) ಹಾಜರಾಗುವ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗೆಯೇ ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಸಹ ಈ ಪರೀಕ್ಷೆಗೆ ನೋಂದಾಯಿಸಲು ಅರ್ಜಿಗಳನ್ನು ಶಾಲೆಗಳ ಮುಖಾಂತರ ಸಲ್ಲಿಸಬಹುದಾಗಿದೆ.
ಸದರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಿಂದ 2025ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF), ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ (CCERR, CCEPR) ವಿವರಗಳನ್ನು ಮಂಡಳಿಯ https://kseab.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಅಪ್‌ಲೋಡ್ ಮಾಡಲು ಕೆಳಕಂಡಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ವಿದ್ಯಾರ್ಥಿಗಳ ನೋಂದಣಿಗೆ ಅಗತ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಮಂಡಳಿಯು ತಿಳಿಸುವ ದಿನಾಂಕದಲ್ಲಿ ಶಾಲಾ ಲಾಗಿನ್‌ನಲ್ಲಿ ವಿದ್ಯಾರ್ಥಿಗಳ ನೋಂದಣಿಯನ್ನು ಮಾಡುವುದು.
I. ಶೈಕ್ಷಣಿಕ ವಿಭಾಗ:-
ಸರ್ಕಾರದ ಆದೇಶ ಸಂಖ್ಯೆ:ಇಡಿ.156.ಮಾಹಿತಿ.2014, ದಿನಾಂಕ:26.06.2014 ಮತ್ತು ಸರ್ಕಾರದ ಆದೇಶ ಸಂಖ್ಯೆ:ಇಡಿ 295 ಮಾಹಿತಿ 2014 ದಿನಾಂಕ:09.01.2015 ರನ್ವಯ, ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ (ಸಿ.ಸಿ.ಇ) ಪದ್ಧತಿಯನ್ನು ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೂ ಮುಂದುವರೆಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ (ಸಿ.ಸಿ.ಇ) ಅಳವಡಿಸುವ ವಿಧಿ ವಿಧಾನಗಳನ್ನು ಕೆಳಕಂಡಂತೆ ವಿವರಿಸಲಾಗಿದೆ.
ವಿದ್ಯಾರ್ಥಿಗಳನ್ನು ಪ್ರಗತಿಶೀಲರನ್ನಾಗಿಸಲು, ಸರ್ವತೋಮುಖ ಅಭಿವೃದ್ಧಿಗೆ ಪ್ರೇರೇಪಿಸಲು ಶಿಕ್ಷಣವು ಮಹತ್ತರವಾದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಕಲಿಕೆ ಉಂಟಾಗಬೇಕಾದಲ್ಲಿ ಅವರಲ್ಲಿ ಶಿಸ್ತು, ಕಾರ್ಯತತ್ಪರತೆ, ಸೃಜನಶೀಲತೆ, ಕಲಾತ್ಮಕತೆಗಳಿಗೆ ಒತ್ತು ನೀಡಬೇಕಾಗಿದೆ. ಇದನ್ನು ಸಾಧಿಸಲು ಪಠ್ಯ ವಿಷಯಗಳ ಮೌಲ್ಯಮಾಪನದ ಜೊತೆಗೆ ಸಹಪಠ್ಯ ಚಟುವಟಿಕೆಗಳ ಮೌಲ್ಯಮಾಪನದ ಅಗತ್ಯತೆ ಇರುವುದನ್ನು ಮನಗಂಡಿದೆ.
ಶೈಕ್ಷಣಿಕ ವರ್ಷದಲ್ಲಿ ವಿಷಯವಾರು ಒಟ್ಟು 04 ರೂಪಣಾತ್ಮಕ ಮೌಲ್ಯಮಾಪನಗಳನ್ನು ನಡೆಸಲಾಗುತ್ತಿದ್ದು, ಪ್ರತಿ ರೂಪಣಾತ್ಮಕ ಮೌಲ್ಯಮಾಪನದಲ್ಲಿ (ಎರಡು ಚಟುವಟಿಕೆಗಳನ್ನು ಒಂದು ಕಿರು ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಒಟ್ಟಾರೆ 04 ರೂಪಣಾತ್ಮಕ ಮೌಲ್ಯಮಾಪನಗಳಿಂದ 08 ಚಟುವಟಿಕೆಗಳು ಹಾಗೂ 04 ಕಿರು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.
3. : 2014-15ನೇ ಸಾಲಿನಿಂದ ಜಾರಿಗೆ ಬರುವಂತೆ (2015ನೇ ಏಪ್ರಿಲ್ ಪರೀಕ್ಷೆಯಿಂದ) ಕೆಳಕಂಡ ಮಾನದಂಡಗಳನ್ನು ಆಧರಿಸಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಪದ್ಧತಿ (ಸಿ.ಸಿ.ಇ.)ಯನ್ನು ಅಳವಡಿಸಿ ಏಪ್ರಿಲ್-2015ರಲ್ಲಿ ಹಾಗೂ ತದನಂತರದಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಇದೇ ರೀತಿ ಅಂಕಗಳು ಹಾಗೂ ಶ್ರೇಣಿಗಳ ಆಧಾರದ ಮೇರೆಗೆ ಪ್ರಕಟಿಸಲಾಗುವುದು.
I(A) ಮಾನದಂಡಗಳು (ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ) (CCERF) :-
1. ಹತ್ತು ವರ್ಷದ ಔಪಚಾರಿಕ ಶಿಕ್ಷಣವನ್ನು ಮುಗಿಸಿದ ಎಲ್ಲಾ ಶಾಲಾ ವಿದ್ಯಾರ್ಥಿಗಳು, ಹತ್ತನೇ ವರ್ಷದ ಅಂತ್ಯದಲ್ಲಿ ಎಸ್.ಎಸ್.ಎಲ್.ಸಿ. ಅಂತಿಮ ಪರೀಕ್ಷೆ ಬರೆಯತಕ್ಕದ್ದು.
2.ಪರೀಕ್ಷೆಯು ವಿದ್ಯಾರ್ಥಿಯ ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷಾ ವಿಧಾನದಿಂದ ಕೂಡಿರಬೇಕು. ಬಾಹ್ಯ ಪರೀಕ್ಷೆಗೆ ಶೇ.80 ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಶೇ.20 ಅಂಕಗಳನ್ನು ಮೀಸಲಿಡತಕ್ಕದ್ದು. ವಿದ್ಯಾರ್ಥಿಗಳ ಪ್ರಗತಿಯನ್ನು ಭಾಗ-ಎ (ಪಠ್ಯ ವಿಷಯಗಳು), ಭಾಗ-ಬಿ (ಸಹಪಠ್ಯ ವಿಷಯಗಳು) ಆಧಾರದ ಮೇಲೆ ಪರಿಗಣಿಸಬೇಕಾಗುತ್ತದೆ.
3.ಭಾಗ-ಎ ಯಲ್ಲಿ ಬರುವ ಪ್ರತಿ ವಿಷಯಗಳಿಗೆ ಅಂಕಗಳು ಹಾಗೂ ಶ್ರೇಣಿಗಳನ್ನು ಒಟ್ಟಾರೆ ಅಂಕಗಳು ಮತ್ತು ಶ್ರೇಣಿಯನ್ನು (Cumulative Grade Average) CGA ಆಧರಿಸಿ ನೀಡಲಾಗುತ್ತದೆ.
4.ಎಲ್ಲಾ ವಿಷಯಗಳಲ್ಲಿ ಬಾಹ್ಯ ಪರೀಕ್ಷೆಗೆ ಒಟ್ಟು 500 ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನಕ್ಕೆ 125 ಅಂಕಗಳನ್ನು ನಿಗದಿಪಡಿಸಿದೆ. ವಿಷಯವಾರು ಅಂಕಗಳ ವಿಂಗಡಣೆ ಮಾಡಲಾಗಿರುತ್ತದೆ ಎಂದು ಹೇಳಿದೆ.