ಶಿವಮೊಗ್ಗ: ಅವರೆಂದರೇ ಇಡೀ ತಾಲ್ಲೂಕಿನ ಜನತೆಗೆ ಅಚ್ಚುಮೆಚ್ಚು. ನಗುಮುಖದಿಂದಲೇ ಸಾರ್ವಜನಿಕರನ್ನು ಕಾಣುವ ಆ ಶಾಸಕರ ಬಗ್ಗೆ ಜನರಿಗೆ ಎಲ್ಲಿಲ್ಲದ ಆತ್ಮೀಯತೆ. ಇವರು ಶಾಸಕರಲ್ಲ. ನಮ್ಮ ಕುಟುಂಬದವರೇ ಎನ್ನುವ ಭಾವನೆ. ಇದು ಜನರಲ್ಲಿ ಅಷ್ಟೇ ಅಲ್ಲ, ಶಾಲಾ ಮಕ್ಕಳಲ್ಲಿಯೂ ಹುಟ್ಟಿದೆ ಎನ್ನುವುದಕ್ಕೆ ಶಾಸಕರ ಮೇಲಿನ ಪ್ರೀತಿಗೆ ಹಾಡು ಕಟ್ಟಿ ಹಾಡಿದ್ದೇ ಸಾಕ್ಷೀಕರಿಸಿತು. ಅದೆಲ್ಲಿ? ಹಾಡು ಏನು ಅಂತ ಮುಂದೆ ಓದಿ, ವೀಡಿಯೋ ಲಿಂಕ್ ಇದೆ ಕ್ಲಿಕ್ ಮಾಡಿ ತಪ್ಪದೇ ಹಾಡು ಕೇಳಿ.
ಶಿವಮೊಗ್ಗದ ಸಾಗರದ ಪ್ರಜ್ಞಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಪ್ರತಿಭಾ ಕಾರಂಜಿ ಹಾಗೂ ಕಾಲೋತ್ಸವ ಆಯೋಜಿಸಲಾಗಿತ್ತು. ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು.
ಇಂದಿನ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪಾಲ್ಗೊಂಡಿದ್ದರು. ಈ ವೇಳೆ ಅವರನ್ನು ಪುಟಾಣಿಗಳೇ ಬರೆದಿದ್ದಂತ ಸನ್ಮಾನ ಗೀತೆಯ ಮೂಲಕ ಸ್ವಾಗತಿಸಿದ್ದು ಮಾತ್ರ ಶಾಸಕರನ್ನು ಕೆಲ ಕಾಲ ಮೂಕ ವಿಸ್ಮಿತರನ್ನಾಗಿ ಮಾಡಿ ಬಿಟ್ಟಿತು.
ಶಾಲಾ ಮಕ್ಕಳು ಬೇಳೂರು ಗೋಪಾಲಕೃಷ್ಣ, ನಮ್ಮ ಪ್ರೀತಿಯ ಶಾಸಕರು ಬೇಳೂರು ಗೋಪಾಲಕೃಷ್ಣ ಎಂಬುದಾಗಿ ಹಾಡುತ್ತಿದ್ದರೇ, ಮಕ್ಕಳ ಹಾಡನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದರು. ಹಾಡಿನ ಮಧ್ಯೆ ಬೇಳೂರು ಗೋಪಾಲಕೃಷ್ಣ ಸಚಿವರಾಗಲೆಂದು ಹಾರೈಸುವೆವು ನಾವು ಅಂದ ಕೂಡಲೇ ನೆರೆದಿದ್ದಂತ ಜನರು ಚಪ್ಪಾಳೆ ತಟ್ಟಿದರು. ವೇದಿಕೆಯಲ್ಲಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಮಕ್ಕಳ ಹಾರೈಕೆ ಕೇಳಿ ಕ್ಷಣಕಾಲ ಭಾವುಕರಾಗಿಬಿಟ್ಟು ಕೈಮುಗಿದರು.
ಸಾಗರದ ಪ್ರಜ್ಞಾ ಭಾರತಿ ಶಾಲೆಯ ಪುಟಾಣಿಗಳು ಶಾಸಕ ಬೇಳೂರು ಗೋಪಾಲಕೃಷ್ಣ ಬಗ್ಗೆ ಬರೆದು ಹಾಡಿದಂತ ಹಾಡು ಸಕತ್ ವೈರಲ್ ಕೂಡ ಆಗಿದೆ. ಆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಶಾಲಾ ಮಕ್ಕಳು ಕಟ್ಟಿ ಹಾಡಿದ ಹಾಡು ಈ ಕೆಳಗಿದೆ ನೀವು ಕೇಳಿ, ಆನಂದಿಸಿ.
BREAKING: ರಾಜ್ಯ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ತೀರ್ಮಾನ: ಸಿಎಂ ಸಿದ್ಧರಾಮಯ್ಯ ಘೋಷಣೆ
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut








