ದೊಡ್ಡಬಳ್ಳಾಪುರ: ಇಲ್ಲಿನ ಶಾಲೆಯೊಂದರ ಮೇಲೆ ನಿರ್ಮಾಣ ಹಂತದ ಕಟ್ಟಡ ಮೇಲಿನಿಂದ ಸಿಮೆಂಟ್ ಇಟ್ಟಿಗೆ ಬಿದ್ದ ಪರಿಣಾಮ, ಶಾಲೆಯಲ್ಲಿ ಪಾಠ ಕೇಳುತ್ತಿದ್ದಂತ ಮಕ್ಕಳಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ದೊಡ್ಡಬಳ್ಳಾಪುರದ ಕುಂಬಾರಪೇಟೆಯಲ್ಲಿನ ಶಾಲೆಯೊಂದರ ಪಕ್ಕದಲ್ಲೇ ಕಟ್ಟಡಣವೊಂದನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇಂದು ಆಕಸ್ಮಾತ್ ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಇಟ್ಟಿಗೆ ಶಾಲೆಯ ಮೇಲ್ಛಾವಣಿಯ ಮೇಲೆ ಬಿದ್ದಿದೆ.
ಶಾಲೆಯ ಮೇಲ್ಛಾವಣಿ ಸಿಮೆಂಟ್ ಶೀಟ್ ಆಗಿದ್ದರಿಂದ ಸಿಮೆಂಟ್ ಇಟ್ಟಿಗೆ ಬಿದ್ದ ಪರಿಣಾಮ ಸೀಟ್ ಹೊಡೆದು, ಅದರಡಿಯಲ್ಲಿ ಶಾಲೆಯಲ್ಲಿ ಕುಳಿತು ವ್ಯಾಸಂಗ ಮಾಡುತ್ತಿದ್ದಂತ ಮಕ್ಕಳ ಮೇಲೆಯೇ ಬಿದ್ದಿದೆ. ಸಿಮೆಂಟ್ ಇಟ್ಟಿಗೆ ಬಿದ್ದ ಪರಿಣಾಮ ಕೆಲ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING: ಚನ್ನಪಟ್ಟಣ ಕ್ಷೇತ್ರದ ‘NDA ಅಭ್ಯರ್ಥಿ’ಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ: ಬಿ.ಎಸ್ ಯಡಿಯೂರಪ್ಪ ಘೋಷಣೆ
‘ಜೊಮಾಟೊ, ಸ್ವಿಗ್ಗಿ ಬಳಕೆದಾರ’ರಿಗೆ ಬಿಗ್ ಶಾಕ್: ಪ್ಲಾಟ್ ಫಾರ್ಮ್ ಶುಲ್ಕ ಹೆಚ್ಚಳ | Zomato and Swiggy delivery