ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತವು ತನ್ನ 78 ನೇ ಸ್ವಾತಂತ್ರ್ಯ ದಿನವನ್ನು 15 ಆಗಸ್ಟ್ 2024 ರಂದು ಆಚರಿಸಲಿದೆ. ದೇಶಾದ್ಯಂತ ಈ ದಿನದ ಸಿದ್ಧತೆಗಳು ಭರದಿಂದ ಸಾಗಿವೆ. ಏತನ್ಮಧ್ಯೆ, ಹರಿಯಾಣ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆಯನ್ನ ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಹರಿಯಾಣದ ನಯಾಬ್ ಸಿಂಗ್ ಸೈನಿ ಸರ್ಕಾರವು ಈಗ ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ಗುಡ್ ಮಾರ್ನಿಂಗ್ ಬದಲಿಗೆ ಜೈ ಹಿಂದ್ ಎಂದು ಹೇಳಬೇಕಾಗಿದೆ ಎಂದು ಹೇಳಿದೆ. ಸರ್ಕಾರದ ಈ ನಿರ್ಧಾರದ ಅನುಷ್ಠಾನವು 15 ಆಗಸ್ಟ್ 2024 ರಿಂದ ಪ್ರಾರಂಭವಾಗುತ್ತದೆ. ಅಂದ್ಹಾಗೆ, ಈ ನಿರ್ಧಾರದ ಹಿಂದೆ ಹರಿಯಾಣ ಸರ್ಕಾರ ಯಾವ ಕಾರಣವನ್ನ ನೀಡಿದೆ ಗೊತ್ತಾ.?
ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗಿದೆ?
ಹರಿಯಾಣ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಸ್ವಾತಂತ್ರ್ಯ ದಿನಾಚರಣೆಯಿಂದ ಎಲ್ಲಾ ಶಾಲೆಗಳಲ್ಲಿ ಗುಡ್ ಮಾರ್ನಿಂಗ್ ಬದಲಿಗೆ ಜೈ ಹಿಂದ್ ಎಂದು ಹೇಳಲಾಗಿದೆ. ಶಾಲಾ ಶಿಕ್ಷಣ ನಿರ್ದೇಶನಾಲಯದ ಆದೇಶವು ವಿದ್ಯಾರ್ಥಿಗಳಲ್ಲಿ “ಆಳವಾದ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ” ಭಾವನೆಯನ್ನ ಮೂಡಿಸುವ ಗುರಿಯನ್ನ ಹೊಂದಿದೆ ಎಂದು ಹೇಳಿದೆ.
ಸುಭಾಷ್ ಚಂದ್ರ ಬೋಸ್ ಜೈ ಹಿಂದ್ ಘೋಷಣೆ ಕೂಗಿದರು.!
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಜೈ ಹಿಂದ್ ಎಂಬ ಘೋಷಣೆಯನ್ನ ನೀಡಿದ್ದರು ಎಂದು ಹರಿಯಾಣ ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಭಾರತದ ಸಶಸ್ತ್ರ ಪಡೆಗಳು ಸಹ ಜೈ ಹಿಂದ್ ಅನ್ನು ಸೆಲ್ಯೂಟ್ ಆಗಿ ಸ್ವೀಕರಿಸಿದವು. ಇನ್ನು ಶಾಲೆಗಳಲ್ಲಿ ಗುಡ್ ಮಾರ್ನಿಂಗ್ ಬದಲು ಜೈ ಹಿಂದ್ ಅನ್ನು ಬಳಸಲಾಗುವುದು ಎಂದು ಸರ್ಕಾರ ಹೇಳಿದೆ. ಇದು ಪ್ರತಿದಿನ ರಾಷ್ಟ್ರೀಯ ಏಕತೆಯ ಮನೋಭಾವದೊಂದಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ಇದರೊಂದಿಗೆ ದೇಶದ ಶ್ರೀಮಂತ ಇತಿಹಾಸದ ಬಗ್ಗೆ ಗೌರವವನ್ನೂ ವ್ಯಕ್ತಪಡಿಸಬಹುದು.