ಬೆಂಗಳೂರು: “ಶೇಫ್ಲರ್ ಇಂಡಿಯಾ” ತನ್ನ ಸಾಮಾಜಿಕ ಇನ್ನೋವೇಟರ್ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಘೋಷಿಸಿದ್ದು, ಇದರ ಭಾಗವಾಗಿ ಆಸಕ್ತ ಯುವ ನವೋದ್ಯಮಿಗಳು ಹಾಗೂ ನಾವಿನ್ಯಕಾರರಿಂದ ಅರ್ಜಿ ಆಹ್ವಾನಿಸಿದೆ.
ಈ ಉಪಕ್ರಮವು ಭಾರತದ ಯುವ ನಾವೀನ್ಯಕಾರರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ, ಸ್ಕೇಲೆಬಲ್ ಇಂಡಿಯಾದ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮ HOPE ನ ಭಾಗವಾಗಿ ಈ ಅರ್ಜಿ ಆಹ್ವಾನ ಮಾಡಲಾಗಿದೆ.
18 ರಿಂದ 35 ವರ್ಷ ವಯಸ್ಸಿನ ಆಯ್ದ 10 ನಾವೀನ್ಯಕಾರರಿಗೆ ತಲಾ 1.75 ಲಕ್ಷ ರೂ. ಅನುದಾನ ನೀಡಲಾಗುತ್ತದೆ, ತಮ್ಮ ವಿಶೇಷ ಹಾಗೂ ವಿಭಿನ್ನ ಆಲೋಚನೆಗಳನ್ನು ಅನಿಷ್ಠಾನ ಮಾಡಲು ಈ ಅನುದಾನವನ್ನು ಅವರು ಬಳಸಿಕೊಳ್ಳಬಹುದು. ಅಷ್ಟೆ ಅಲ್ಲದೆ, ಆಯ್ಕೆ ಆದ ವಿಜೇತರು, IIMA ವೆಂಚರ್ಸ್‌ನಲ್ಲಿ 24 ವಾರಗಳ ಹೈಬ್ರಿಡ್ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ, ಈ ಕಾರ್ಯಕ್ರಮವು ಅವರ ನವೀನ ಯೋಚನೆ ಹಾಗೂ ಯೋಜನೆಗಳನ್ನು ಜಾರಿ ಮಾಡಲು ಪರಿಕರ, ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಒದಗಿಸಿಕೊಡಲು ನೆರವು ನೀಡಲಿದೆ.
ಈ ಕುರಿತು ಮಾತನಾಡಿದ ಶೇಫ್ಲರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರ್ಷ ಕದಮ್, ಈ ಕಾರ್ಯಕ್ರಮವು ಪರಿಸರ ಸುಸ್ಥಿರತೆ, ನವೀಕರಿಸಬಹುದಾದ ಇಂಧನ, ಇಂಗಾಲದ ತಟಸ್ಥತೆ, ಆರ್ಥಿಕತೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸಾಮಾಜಿಕ ವಲಯದಲ್ಲಿನ ಇತರೆ ಸಮಸ್ಯೆಗಳಿಗೆ ವಿಭಿನ್ನ ಐಡಿಯಾ ನೀಡುವ ಯುವಕರಿಗೆ ಅವಕಾಶ ನೀಡಲು ಈ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ಅರ್ಜಿ ಸಲ್ಲಿಸಲು ಯಾವುದೇ ವ್ಯಕ್ತಿ, ತಂಡ, ಸಂಸ್ಥೆಗಳು ಅರ್ಹವಾಗಿರುತ್ತವೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳು ಜುಲೈ 30, 2025 ರಿಂದ ಆಗಸ್ಟ್ 30, 2025 ರವರೆಗೆ Buddy4Study ಲಾಗಿನ್ ಮಾಡಿ ಅಥವಾ https://www.buddy4study.com/page/schaeffler-india-social-innovator-fellowship-program-2025 ಈ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳಾದ ಪ್ರಾಜೆಕ್ಟ್ ವೀಡಿಯೊ, ಐಡಿಯಾ ಪಿಚ್ ಡೆಕ್ (ಐಚ್ಛಿಕ), ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ಅಪ್‌ಡೇಪ್ ಮಾಡಿ.