ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು ಇದರ 2024 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳನ್ನು ಘೋಷಿಸಿಸಲಾಗಿದೆ.
ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 24 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿನ ದಲಿತರ ಮಾಲಿಕತ್ವ/ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಮತ್ತು ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣದಂತಹ ರಚನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.
ಇದರ ಭಾಗವಾಗಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು ,ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ವೃತ್ತಿಪರ ಪತ್ರಕರ್ತರನ್ನು ಗುರುತಿಸಿ ಸಾಮಾಜಿಕ ನ್ಯಾಯಕ್ಕಾಗಿ, ದಲಿತರ ಸ್ವಾಭಿಮಾನ, ಹಕ್ಕುಗಳಿಗಾಗಿ ದುಡಿದ, ಹೋರಾಡಿದ ಮಹನೀಯರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮಾಜಿ ಸಚಿವ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಪ್ರೋ.ಕೃಷ್ಣಪ್ಪ ಅವರುಗಳ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದೆ.
ದಲಿತ ಚಳವಳಿಯ ಸ್ಥಾಪಕರಾದ ಪ್ರೋ ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿಯನ್ನು ದಲಿತರು,ಶೋಷಿತರ ಪರ ಚಳವಳಿಯಲ್ಲಿ ಅವಿರತವಾಗಿ ದುಡಿಯುತ್ತಿರುವ ಚಳವಳಿಯ ಸಂಗಾತಿಗಳನ್ನು ಗುರುತಿಸಿ ಪ್ರದಾನ ಮಾಡಲಾಗುತ್ತಿದೆ.
ಇದರೊಂದಿಗೆ ದಲಿತ ಸಂಪಾದಕರುಗಳಿಗೆ ಸಂಘದ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ.
ಪ್ರಶಸ್ತಿ ವಿವರ:
2024 ನೇ ಸಾಲಿನ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳು
(ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ. ನಗದು, ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.)
1 ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ: ಜಿ.ಎನ್ ಮೋಹನ್ ಹಿರಿಯ ಪತ್ರಕರ್ತರು ಬೆಂಗಳೂರು
2 ಬಿ. ರಾಚಯ್ಯ ದತ್ತಿ ಪ್ರಶಸ್ತಿ : ಬಿ.ಎಂ ಹನೀಫ್ ಹಿರಿಯ ಪತ್ರಕರ್ತರು ಬೆಂಗಳೂರು
3 ಪ್ರೋ.ಬಿ. ಕೃಷ್ಣಪ್ಪ ದತ್ತಿ: ಪ್ರಶಸ್ತಿ ಮಾವಳ್ಳಿ ಶಂಕರ್ ರಾಜ್ಯ ಸಂಚಾಲಕರು: ದಲಿತ ಸಂಘರ್ಷ ಸಮಿತಿ(ಪ್ರೋ; ಕೃಷ್ಣಪ್ಪ)
4 ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ: ಮಂಜುಳಾಹುಲಿಕುಂಟೆ, ಪತ್ರಕರ್ತೆ, ಬೆಂಗಳೂರು
ಸಂಪಾದಕರುಗಳಿಗೆ ನೀಡುವ ಸಂಘದ ವಿಶೇಷ ಪ್ರಶಸ್ತಿಗಳು-2024
( ತಲಾ ಐದು ಸಾವಿರ ರೂ.ನಗದು, ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. )
1 ಮಂಜುಳಾ ಕಿರುಗಾವಲು ಸಂಪಾದಕರು: ಜನೋದಯ ಕನ್ನಡ ದಿನಪತ್ರಿಕೆ , ಮಂಡ್ಯ
2. ಏಕಾಂತಪ್ಪ ಸಂಪಾದಕರು: ಶಿವಮೊಗ್ಗ ಮಲ್ನಾಡ್‌ವಾಣಿ ಕನ್ನಡ ದಿನಪತ್ರಿಕೆ, ದಾವಣಗೆರೆ
3. ಸೊಗಡು ವೆಂಕಟೇಶ್ ಸಂಪಾದಕರು: ವಿಶಾಲವಾರ್ತೆ ಕನ್ನಡ ದಿನಪತ್ರಿಕೆ , ತುಮಕೂರು
4. ಸುರೇಶ್ ಸಿಂಧ್ಯೆ : ಹೈದ್ರಾಬಾದ್ ಕರ್ನಾಟಕ ಮುಂಜಾವು ಕನ್ನಡ ದಿನಪತ್ರಿಕೆ , ಗುಲ್ಬರ್ಗಾ.
ನವಂಬರ್ 29 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸನ್ಮಾನ್ಯಶ್ರೀಸಿದ್ದರಾಮಯ್ಯ ನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ‘CET, NEET, JEE ಪರೀಕ್ಷಾರ್ಥಿ’ಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸರ್ಕಾರದಿಂದಲೇ ‘ಫ್ರೀ ಕೋಚಿಂಗ್’
ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ