ನವದೆಹಲಿ: ಇಂಡೋನೇಷ್ಯಾನಿಂದ ಸೌದಿ ಅರೇಬಿಯಾದ ಮದೀನಾಕ್ಕೆ ಪ್ರಯಾಣಿಸುತ್ತಿದ್ದ ಸೌದಿ ಏರ್ಲೈನ್ಸ್ ವಿಮಾನವು ಭಾನುವಾರ (ಅಕ್ಟೋಬರ್ 19) ಸಂಜೆ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ದೃಢಪಡಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಪ್ರಜ್ಞಾಹೀನ ಸ್ಥಿತಿಗೆ ಬಿದ್ದಿದ್ದಾನೆ. ವಿಮಾನ ತಿರುವನಂತಪುರಂಗೆ ಬಂದಿಳಿದಿದೆ. ಇಂಡೋನೇಷ್ಯಾ ಪ್ರಜೆಯಾಗಿರುವ ಪ್ರಯಾಣಿಕನನ್ನು ಅನಂತಪುರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ” ಎಂದು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.
ವಿಮಾನದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಯಾಣಿಕ
ಸೌದಿಯಾ ಫ್ಲೈಟ್ ಎಸ್ ವಿ 821 ವಿಮಾನವು 395 ಪ್ರಯಾಣಿಕರು ಮತ್ತು 18 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದಾಗ 37 ವರ್ಷದ ಇಂಡೋನೇಷ್ಯಾದ ಪ್ರಜೆ ಲಿಯಾ ಫಟೋನಾ ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಮತ್ತು ಪ್ರಯಾಣದ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡರು. ತ್ವರಿತವಾಗಿ ಕಾರ್ಯನಿರ್ವಹಿಸಿದ ವಿಮಾನದ ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಎಚ್ಚರಿಸಿದರು ಮತ್ತು ತಿರುವನಂತಪುರಂನಲ್ಲಿ ತುರ್ತು ಲ್ಯಾಂಡಿಂಗ್ ಗೆ ಅನುಮತಿ ಕೋರಿದರು