ಬೆಳಗಾವಿ: ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಒತ್ತಾಯ ಹೆಚ್ಚಾಗಿದೆ. ಬಿಜೆಪಿಯವರು ಇಂದು, ನಾಳೆ, ದಸರಾ ಮುಗಿದ ನಂತ್ರ, ಅಧಿವೇಶನ ನಡೆಯೋ ಮೊದಲೇ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಭವಿಷ್ಯ ನುಡಿಯುತ್ತಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ ಭವಿಷ್ಯದ ಮುಂದಿನ ಮುಖ್ಯಮಂತ್ರಿಗಳು ಎಂಬುದಾಗಿ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.
ಸಿಎಂ ಸಿದ್ಧರಾಮಯ್ಯ ಅವರು ಬೆಳಗಾವಿ ಭೇಟಿಯ ಸಂದರ್ಭದಲ್ಲೇ ಬೆಳಗಾವಿಯ ರಸ್ತೆಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಭವಿಷ್ಯದ ಮುಂದಿನ ಮುಖ್ಯಮಂತ್ರಿ ಎನ್ನುವಂತ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸಿ, ಕುತೂಹಲ ಕೆರಳಿಸಿದವು.
ಒಂದೆಡೆ ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂಬುದಾಗಿಯೇ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ಮತ್ತೊಂದೆಡೆ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅವರೇ ಮುಖ್ಯಮಂತ್ರಿ ಎಂಬ ಫ್ಲೆಕ್ಸ್, ಬ್ಯಾನರ್ ರಾರಾಜಿಸಿದ್ದು ಹಲವು ಕುತೂಹಲ, ಅನುಮಾನಗಳಿಗೂ ಕಾರಣವಾಗಿದೆ. ಇವುಗಳ್ನು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಮುಖಂಡರು ಕಟ್ಟಿರೋದಾಗಿ ತಿಳಿದು ಬಂದಿದೆ.
‘ಮುಂಬೈ ಇಂಡಿಯನ್ಸ್’ ಮುಖ್ಯ ಕೋಚ್ ಆಗಿ ‘ಮಹೇಲಾ ಜಯವರ್ಧನೆ’ ಮರು ನೇಮಕ | Mahela Jayawardene