ಶಿವಮೊಗ್ಗ: ಇಂದು ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್. ಎನ್ ಆಯ್ಕೆಯಾಗಿದ್ದಾರೆ.
ಸಾಗರದ ತಾಳಗುಪ್ಪ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್. ಎನ್ ಹಾಗೂ ಸುರೇಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. 25 ಮತಗಳನ್ನು ಪಡೆಯುವ ಮೂಲಕ ಸಂತೋಷ್ ಕುಮಾರ್ ಗೆಲುವು ಸಾಧಿಸಿದ್ದಾರೆ.
ಇನ್ನೂ ಸಾಗರ ತಾಲ್ಲೂಕು ರಾಜ್ಯ ಪರಿಷತ್ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ದೇವೇಂದ್ರಪ್ಪ 24 ಮತಗಳನ್ನು ಗಳಿಸಿ, ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಚುನಾವಣೆ ಮತಗಳ ವಿವರ
ಸಂತೋಷ್ ಕುಮಾರ್. ಎನ್ – 25 ಮತಗಳು
ಸುರೇಶ್.ಎಸ್.ಕೆ – 08 ಮತಗಳು.
ರಾಜ್ಯ ಪರಿಷತ್ ಸ್ಥಾನದ ಚುನಾವಣೆ ಮತಗಳ ವಿವರ
ದೇವೇಂದ್ರಪ್ಪ – 24 ಮತಗಳಿಂದ ಗೆಲುವು.
ನಾಗರಾಜ.ಕೆ- 07 ಮತಗಳು.
ಮಂಜುನಾಥ- 02 ಮತಗಳು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು