ಶಿವಮೊಗ್ಗ: ಸಾಗರ ತಾಲ್ಲೂಕು ಅರಣ್ಯ ಇಲಾಖೆಯ ನಿರ್ದೇಶಕರ ಸ್ಥಾನಕ್ಕೆ ತಾಳಗುಪ್ಪದ ಉಪ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವಂತ ಸಂತೋಷ್ ಕುಮಾರ್.ಎನ್ ಸ್ಪರ್ಧಿಸಿದ್ದಾರೆ. ಇಲಾಖೆಯ ಅಧಿಕಾರಿ, ನೌಕರರು ಮತ ನೀಡುವಂತೆ ಈ ಮೂಲಕ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಸಾಗರ ತಾಲ್ಲೂಕು ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಹಿರಿಯ, ಕಿರಿಯ ನೌಕರ ಮಿತ್ರರೇ ಕರ್ನಾಟಕ ರಾಜ್ಯದ ಅತ್ಯಂತ ಪ್ರತಿಷ್ಠಿತ ಸಂಘಟನೆಯಾದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2024-29 ನೇ ಅವಧಿಗೆ ಸಾರ್ವತ್ರಿಕ ಚುನಾವಣೆ ದಿನಾಂಕ 28.10.2024ರಂದು ನಡೆಯುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.
ಚುನಾವಣಾ ಅಧಿಸೂಚನೆಯಂತೆ ಸಾಗರ ತಾಲೂಕು ಶಾಖೆಗೂ ಚುನಾವಣೆ ನಡೆಯಲಿದ್ದು, ಅರಣ್ಯ ಇಲಾಖೆ ನಿರ್ದೇಶಕರ ಸ್ಥಾನಕ್ಕೆ ತಾಳಗುಪ್ಪ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಎನ್ ಆದ ನಾನು ಸ್ಪರ್ಧಿಸಿದ್ದೇನೆ. ದಯವಿಟ್ಟು ತಮಗೆ ಮತ ನೀಡಿ, ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಈ ಸದುದ್ದೇಶಗಳೊಂದಿಗೆ ಚುನಾವಣೆಯಲ್ಲಿ ಸ್ಪರ್ಧೆ
- NPS, TO, OPS ಹೋರಾಟಗಳಲ್ಲಿ ಇಲಾಖೆ ನೌಕರರ ಪರವಾಗಿ ನಿಂತು, ನೌಕರರನ್ನು ಕರೆದುಕೊಂಡು ಶಿವಮೊಗ್ಗದಿಂದ ಬೆಂಗಳೂರುನವರೆಗೆ ಸಂಚರಿಸಿ, ಹೋರಾಟದಲ್ಲಿ ಮಂಚೂಣಿಯಲ್ಲಿ ನಿಂತಿರುತ್ತೇನೆ.
- ಸಂಘದ ಹೋರಾಟದ ಫಲವಾಗಿ NPS ಹೋಗಲಾಡಿಸುವ ಅಧ್ಯಯನ ಮಾಡಲು ಕಮಿಟಿಯನ್ನು ರಚನೆ ಸರ್ಕಾರ ಮಾಡಿರುತ್ತದೆ. ಎನ್ ಪಿಎಸ್ ತೊಲಗಿಸಲು ಮುಂದಿನ ದಿನಗಳಲ್ಲಿ ಯಾವುದೇ ಹೋರಾಟಕ್ಕೂ ಮುಂದೆ ನಿಂತು ನಡೆಸುತ್ತೇನೆ.
- ತಮ್ಮೆಲ್ಲರ ಕುಂದು ಕೊರತೆ, ಸಮಸ್ಯೆಗಳ ಜೊತೆಗಿದ್ದು, ಘನ ಸಂಘದಲ್ಲಿ ತಮ್ಮೆಲ್ಲರ ಧ್ವನಿಯಾಗಿ ಕಾರ್ಯನಿರ್ವಹಿಸಿರುತ್ತೇನೆ.
- ನೌಕರರ ಜೊತೆಗಿದ್ದು ಸಮಸ್ಯೆಗಳನ್ನು ಬಗೆಹರಿಸುತ್ತೇನೆ.
- TA ಮತ್ತು ವೆಹಿಕಲ್ ಭತ್ಯೆ ಮಾಹೆಯ ವೇತನದಲ್ಲಿ ಸೇರಿಸಲು ಶ್ರಮಿಸುತ್ತೇನೆ.
- TCMS ನಲ್ಲಿ ನೌಕರರ ಸ್ನೇಹಿ ವರ್ಗಾವಣೆಗೆ ತಿದ್ದುಪಡಿಗೆ ಶ್ರಮಿಸುವುದಾಗಿ ಘೋಷಿಸಿದ್ದಾರೆ.
- ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವವರಿಗೆ ನೇಮಕಾತಿಯಲ್ಲಿ ಶೇಕಡಾ 10% ಮೀಸಲಾತಿಗೆ ಶ್ರಮಿಸುವೆ
- ಆರೋಗ್ಯ ಭಾಗ್ಯ, ಉಚಿತ ವೈದ್ಯಕೀಯ ಚಿಕಿತ್ಸೆ ಅನುಷ್ಠಾನಕ್ಕೆ ಶ್ರಮಿಸುತ್ತೇನೆ
- Gazetted holiday, weekly off, wildlife interior RENT, free quatres ಬಗ್ಗೆ ಹೊಸ ಆದೇಶ ಮಾಡಿಸುವುದಾಗಿ ಭರವಸೆ.
- ಎಲ್ಲಾ ಶ್ರೇಣಿಯ ನೌಕರರಿಗೆ ಕಾಲಮಿತಿಯಲ್ಲಿ ಬಡ್ತಿಗೆ ಶ್ರಮಿಸುವುದು
- ಜಂಟಿ ಸಮಾಲೋಚನಾ ಸಮಿತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು
ಒಟ್ಟಾರೆಯಾಗಿ ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಅರಣ್ಯ ಇಲಾಖೆ ನೌಕರರಿಗೆ ಕ್ಯಾಂಟೀನ್ ಸೌಲಭ್ಯ ಒದಗಿಸಲು ಶ್ರಮಿಸುವ ವಿವಿಧ ದೈಯೋದ್ದೇಶದೊಂದಿಗೆ
ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ದಯವಿಟ್ಟು ಸಾಗರ ತಾಲ್ಲೂಕು ಅರಣ್ಯ ಇಲಾಖೆಯ ಅಧಿಕಾರಿಗಳು, ನೌಕರರು ಅತ್ಯಮೂಲ್ಯ ಮತವನ್ನು ನೀಡಿ ಗೆಲುವು ಸಾಧಿಸುವುದಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಹೀಗಿದೆ ಸಾಗರ ತಾಲ್ಲೂಕು ಅರಣ್ಯ ಇಲಾಖೆ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣಾ ವೇಳಾಪಟ್ಟಿ
ಅಂದಹಾಗೇ ಸಾಗರ ತಾಲ್ಲೂಕು ಅರಣ್ಯ ಇಲಾಖೆಯ ನಿರ್ದೇಶಕರ ಸ್ಥಾನಕ್ಕೆ ಸಂತೋಷ್ ಕುಮಾರ್.ಎನ್ ಸ್ಪರ್ಧಿಸಿದ್ದು, ಈ ಸಂಬಂಧ ದಿನಾಂಕ 28-10-2024ರಂದು ಮತದಾನ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾಗರ ನಗರದಲ್ಲಿರುವಂತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮತದಾನ ನಡೆಯಲಿದೆ. ನೌಕರರು ತಪ್ಪದೇ ಭಾಗವಹಿಸುವಂತೆ ಕೋರಿದ್ದಾರೆ.